ವಿಜಯದಶಮಿಗೆ ಗಗನಕ್ಕೇರಿದ ಹಣ್ಣು-ಹೂವಿನ ಬೆಲೆ; ಕನಕಾಂಬರ ಕೆಜಿಗೆ 2000ರೂ

| Updated By: ಆಯೇಷಾ ಬಾನು

Updated on: Oct 09, 2024 | 1:22 PM

ವಿಜಯದಶಮಿಗೆ ಕೌಂಟ್ ಡೌನ್ ಆರಂಭವಾಗಿದ್ದು ಹಬ್ಬಕ್ಕೆ ಹಣ್ಣು-ಹೂವಿನ ಬೆಲೆ ದುಬಾರಿಯಾಗಿದೆ. ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗ್ಲೇ ಹೂವಿನ ಬೆಲೆ ಗಗನಕ್ಕೆ ಏರಿದೆ. ಕನಕಾಂಬರ ಕೆಜಿಗೆ 2000ರೂ ಇದೆ. ಮಲ್ಲಿಗೆ ಕೆಜಿಗೆ 1000 ರೂ. ಗುಲಾಬಿ ಕೆಜಿಗೆ 500 ರೂ. ಇದೆ.

ವಿಜಯದಶಮಿಗೆ ಗಗನಕ್ಕೇರಿದ ಹಣ್ಣು-ಹೂವಿನ ಬೆಲೆ; ಕನಕಾಂಬರ ಕೆಜಿಗೆ 2000ರೂ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅ.09: ಬೆಲೆ ಏರಿಕೆಯಿಂದಾಗಿ ಗ್ರಾಹಕರು ಮೊದಲೇ ರೋಸಿ ಹೋಗ್ತಾ ಇದ್ದಾರೆ. ಈ ಮಧ್ಯೆ ಟೊಮೆಟೊ (Tomato) ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಮತ್ತೊಂದೆಡೆ ವಿಜಯದಶಮಿಗೆ ಕೌಂಟ್ ಡೌನ್ ಆರಂಭವಾಗಿದ್ದು ಹಬ್ಬಕ್ಕೆ ಹಣ್ಣು-ಹೂವಿನ ಬೆಲೆ ದುಬಾರಿಯಾಗಿದೆ. ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗ್ಲೇ ಹೂವಿನ ಬೆಲೆ ಗಗನಕ್ಕೆ ಏರಿದೆ.

ಇಂದಿನ ಹೂವಿನ ಬೆಲೆ ಎಷ್ಟಿದೆ?

ಕನಕಾಂಬರ ಕೆಜಿಗೆ 2000ರೂ ಇದೆ. ಮಲ್ಲಿಗೆ ಕೆಜಿಗೆ 1000 ರೂ. ಗುಲಾಬಿ ಕೆಜಿಗೆ 500 ರೂ. ಸೇವಂತಿಗೆ ಕೆಜಿಗೆ 450 ರೂ. ಸುಗಂಧರಾಜ ಕೆಜಿಗೆ 300 ರೂ. ಅಣಗಲು ಹೂ ಕೆಜಿ 700. ಚೆಂಡೂ ಹೂ 150. ಕಾಕಾಡ 800. ದುಂಡು ಮಲ್ಲಿಗೆ 800ರಿಂದ200. ಕಮಲ ಜೋಡಿಗೆ 70ರೂ ಇದೆ.

ಇನ್ನು, ಇದು ಹೂವಿನ ಬೆಲೆಯಾದ್ರೆ ಹಣ್ಣಿನ ಬೆಲೆಯೂ ಏರಿಕೆಯಾಗಿದೆ.

ಸೇಬು ಕೆಜಿಗೆ 120 ರಿಂದ 150ರೂ. ದಾಳಿಂಬೆ ಕೆಜಿಗೆ 250 ರೂ. ಏಲಕ್ಕಿ ಬಾಳೆ ಹಣ್ಣು ಕೆಜಿಗೆ 120 ರೂ. ಸೀತಾಫಲ 180 ರಿಂದ 140 ರೂ. ಸಪೋಟ 200 ರೂ. ದ್ರಾಕ್ಷಿ 180ರಿಂದ200 ರೂ. ಅನಾನಸ್ ಎರಡಕ್ಕೆ 50-100 ರೂ. ಕಿತ್ತಳೆ 50 ರಿಂದ 90 ರೂ. ಮೂಸುಂಬೆ 70 ರೂ ಇದೆ.

ಇದನ್ನೂ ಓದಿ: ಮತ್ತೆ ಕೆಂಪು ಸುಂದರಿಗೆ ಬಂತು ಕಾಲ: ದಿಢೀರ್‌ ಟೊಮೆಟೊ ದರ ಭಾರೀ ಏರಿಕೆ

ಇನ್ನು, ಇಂದಿನ ತರಕಾರಿ ಬೆಲೆಯನ್ನ ನೋಡೊದಾದ್ರೆ.

ತರಕಾರಿ ಹಿಂದಿನ ಬೆಲೆ ಇಂದಿನ ಬೆಲೆ
ನಾಟಿ ಬೀನ್ಸ್ 120 160
ಟೊಮೆಟೊ 15 80
ಬಿಳಿ ಬದನೆ 60 40
ಮೆಣಸಿನಕಾಯಿ 40 60
ನುಗ್ಗೆಕಾಯಿ 80 120
ಊಟಿ ಕ್ಯಾರೆಟ್ 120 80
ನವಿಲುಕೋಸು 40 40
ಮೂಲಂಗಿ 40 30
ಹೀರೇಕಾಯಿ 40 60
ಆಲೂಗಡ್ಡೆ 40 40
ಈರುಳ್ಳಿ 60 40
ಕ್ಯಾಪ್ಸಿಕಂ 40 85
ಹಾಗಲಕಾಯಿ 40 45
ಕೊತ್ತಂಬರಿ ಸೊಪ್ಪುಕಟ್ 20 60
ಶುಂಠಿ 150 160
ಬೆಳ್ಳುಳ್ಳಿ 400 320
ಪಾಲಕ್ 40ರೂ
ನಾಟಿ ಬಟಾಣಿ 200 240
ಫಾರಂ ಬಟಾಣಿ 100 160

ಮಳೆಯ ಕಾರಣದಿಂದಾಗಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಧ್ಯ 80ರ ಗಡಿ ಮುಟ್ಟಿದೆ. ಮಳೆಯ ಕಾರಣದಿಂದಾಗಿ ಮಾರುಕಟ್ಟೆಗೆ ಟೊಮೆಟೊ ಪೂರೈಕೆಯಾಗದ ಪರಿಣಾಮ ಟೊಮೆಟೊ ಬೆಲೆ ಏರಿಕೆಯಾಗುತ್ತಿದೆ. ಹಬ್ಬಕ್ಕೆ ಟೊಮೆಟೊ ಖರೀದಿ ಮಾಡ್ಬೇಕಾ ಬೇಡ್ವಾ ಎನ್ನುವ ಬಗ್ಗೆ ಗ್ರಾಹಕರು ಗೊಂದಲದಲ್ಲಿದ್ದಾರೆ. ಅಂದಹಾಗೇ ಪ್ರತಿವರ್ಷ ಕೋಲಾರದಲ್ಲಿ, ಹೊಸಕೋಟೆ ಸೇರಿದಂತೆ ವಿವಿಧೆಡೆಯಿಂದ ಟೊಮೆಟೊ ಬರುತ್ತಿತ್ತು. ಆದ್ರೆ ಈ ವರ್ಷ ಹೆಚ್ಚು ಮಳೆಯಾಗಿರುವ ಪರಿಣಾಮ ಈ ಭಾಗದಲ್ಲಿ ಟೊಮೆಟೊ ಬೆಳೆ ಕಡಿಮೆಯಾಗಿದೆ.

ಸಧ್ಯ ಹಬ್ಬ ಇರುವ ಕಾರಣ ಟೊಮೆಟೊಗೆ ಭಾರಿ ಬೇಡಿಕೆ ಇದೆ‌. ಆದ್ರೆ ಬೇಡಿಕೆಗೆ ತಕ್ಕಂತೆ ಟೊಮೆಟೊ ಸಿಗದ ಪರಿಣಾಮ ಟೊಮೆಟೊ ಬೆಲೆ ಏರಿಕೆಯಾಗುತ್ತಿದೆ. ಸಧ್ಯ ಹೋಲ್ ಸೇಲ್ ನಲ್ಲಿ ಒಂದು ಕೆಜಿ ಟೊಮೆಟೊ ಬೆಲೆ‌ 50 ರಿಂದ 60 ರೂಪಾಯಿ ಇದ್ರೆ, ರಿಟೈಲ್ ನಲ್ಲಿ 80 ರಿಂದ 90 ರವರೆಗೂ ದರ ಫಿಕ್ಸ್ ಮಾಡಲಾಗಿದೆ. ಹೀಗಾಗಿ ಸಧ್ಯ ಮಾರುಕಟ್ಟೆಗೆ 20 ಟೊಮೆಟೊ ಬಾಕ್ಸ್ ಗಳು ಮಾತ್ರ ಬರುತ್ತಿದ್ದು, ಒಟ್ಟು 20% ರಷ್ಟು ಟೊಮೆಟೊ ಕೊರತೆಯಾಗಿದೆ. ಇದರ ಮಧ್ಯೆ ಬಾಂಬೆ, ಕೊಲ್ಕತ್ತಾ, ಗುಜರಾತ್ ಗೂ ಕರ್ನಾಟಕದಿಂದಲೇ ಟೊಮೆಟೊ ಹೋಗುತ್ತಿರುವ ಪರಿಣಾಮ ಬೆಲೆ ಏರಿಕೆಗೆ ಕಾರಣವಾಗುತ್ತಿದೆ ಅಂತ ಟೊಮೆಟೊ ಹೋಲ್ ಸೇಲ್ ವ್ಯಾಪಾರಸ್ಥರು ಹೇಳ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ