AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕೆಂಪು ಸುಂದರಿಗೆ ಬಂತು ಕಾಲ: ದಿಢೀರ್‌ ಟೊಮೆಟೊ ದರ ಭಾರೀ ಏರಿಕೆ

ಬೆಲೆ ಏರಿಕೆಯಿಂದಾಗಿ ಗ್ರಾಹಕರು ಮೊದಲೇ ರೋಸಿ ಹೋಗಿದ್ದಾರೆ. ಹೌದು..ಜನಸಾಮಾನ್ಯನಿಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಯ ಬರೆ ಬೀಳುತ್ತಿದ್ದು ಈರುಳ್ಳಿ, ಬೆಳ್ಳುಳ್ಳಿ ಬಳಿಕ ಇದೀಗ ಟೊಮೆಟೊ ದರ ಏರಿಕೆಯಾಗಿದೆ. ಕಳೆದ ತಿಂಗಳು ತೀವ್ರ ಕುಸಿತ ಕಂಡಿದ್ದ ಟೊಮೆಟೊ ಧಾರಣೆ ಕಳೆದ ಕೆಲ ವಾರಗಳಿಂದ ಒಮ್ಮೆಲೇ ಎರಡು ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಈಗ ಕೆಂಪು ಸುಂದರಿಗೆ ಫುಲ್​ ಡಿಮ್ಯಾಂಡ್ ಬಂದಿದೆ.

ಮತ್ತೆ ಕೆಂಪು ಸುಂದರಿಗೆ ಬಂತು ಕಾಲ: ದಿಢೀರ್‌ ಟೊಮೆಟೊ ದರ ಭಾರೀ ಏರಿಕೆ
ಟೊಮ್ಯಾಟೊ
Poornima Agali Nagaraj
| Edited By: |

Updated on: Oct 08, 2024 | 9:41 PM

Share

ಬೆಂಗಳೂರು, (ಅಕ್ಟೋಬರ್ 08): ಬೆಲೆ ಏರಿಕೆಯ ಬಿಸಿಯಿಂದಾಗಿ ಜನರು ಮೊದಲೇ ರೋಸಿ ಹೋಗಿದ್ದಾರೆ.‌ ಈ‌ ಮಧ್ಯೆ ಸಾಲು ಸಾಲು ಹಬ್ಬ ಗಳು ಬರುತ್ತಿದ್ದು, ಹಬ್ಬಗಳಿಗೆ ಅನಿವಾರ್ಯವಾಗಿ ತರಕಾರಿಗಳನ್ನ ಖರೀದಿ ಮಾಡಲೇ ಬೇಕಾಗಿದೆ. ಹೀಗಾಗಿ ಇಂದು ತರಕಾರಿಗಳನ್ನ ಖರೀದಿ ಮಾಡ್ಬೇಕು ಎಂದು ಮಾರುಕಟ್ಟೆಗೆ ಬಂದಿದ್ದ ಗ್ರಾಹಕರು ಟೊಮೆಟೊ ಬೆಲೆ ಕೇಳಿ ಶಾಕ್ ಆಗಿದ್ದಾರೆ. ಹೌದು..ಕಳೆದ ಕೆಲ ದಿನಗಳಿಂದ ಈ ಕೆಂಪು ಸುಂದರಿಗೆ ಭಾರಿ ಬೆಲೆ ಬಂದಿದೆ. ಮಳೆಯ ಕಾರಣರಿಂದಾಗಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ 80 ರೂಪಾಯಿ ಗಡಿ ಮುಟ್ಟಿದೆ.

ಮಳೆಯ ಕಾರಣದಿಂದಾಗಿ ಮಾರುಕಟ್ಟೆಗೆ ಟೊಮೆಟೊ ಪೂರೈಕೆಯಾಗದ ಪರಿಣಾಮ ಬೆಲೆ ಏರಿಕೆಯಾಗುತ್ತಿದ್ದು, ಹಬ್ಬಕ್ಕೆ ಟೊಮೆಟೊ ಖರೀದಿ ಮಾಡಬೇಕಾ ಬೇಡ್ವಾ ಎನ್ನುವ ಬಗ್ಗೆ ಗ್ರಾಹಕರು ಗೊಂದಲದಲ್ಲಿದ್ದಾರೆ. ಅಂದಹಾಗೇ ಪ್ರತಿವರ್ಷ ಕೋಲಾರದಲ್ಲಿ, ಹೊಸಕೋಟೆ, ಸೇರಿದಂತೆ ವಿವಿಧೆಡೆಯಿಂದ ಟೊಮೆಟೊ ಬರುತ್ತಿತ್ತು. ಆದ್ರೆ ಈ ವರ್ಷ ಹೆಚ್ಚು ಮಳೆಯಾಗಿರುವ ಪರಿಣಾಮ ಈ ಭಾಗದಲ್ಲಿ ಟೊಮೆಟೊ ಬೆಳೆ ಕಡಿಮೆಯಾಗಿದೆ. ಹೀಗಾಗಿ ಕೆಂಪು ಸುಂದರಿಗೆ ಬೇಡಿಕೆ ಹೆಚ್ಚಾಗಿದೆ.

ಸದ್ಯ ಹಬ್ಬ ಇರುವ ಕಾರಣ ಟೊಮೆಟೊಗೆ ಬಾರಿ ಬೇಡಿಕೆ ಇದೆ‌. ಆದ್ರೆ ಬೇಡಿಕೆಗೆ ತಕ್ಕಂತೆ ಟೊಮೆಟೊ ಸಿಗದ ಪರಿಣಾಮ  ಬೆಲೆ ಏರಿಕೆಯಾಗುತ್ತಿದೆ.  ಹೋಲ್ ಸೇಲ್ ನಲ್ಲಿ ಒಂದು ಕೆಜಿ ಟೊಮೆಟೊ ಬೆಲೆ‌ 50 ರಿಂದ 60 ರೂಪಾಯಿ ಇದ್ರೆ, ರಿಟೈಲ್ ನಲ್ಲಿ 80 ರಿಂದ 90 ರವರೆಗೂ ದರ ಫಿಕ್ಸ್ ಮಾಡಲಾಗಿದೆ. ಮಾರುಕಟ್ಟೆಗೆ 20 ಟೊಮೆಟೊ ಬಾಕ್ಸ್ ಗಳು ಮಾತ್ರ ಬರುತ್ತಿದ್ದು, ಒಟ್ಟು 20% ರಷ್ಟು ಟೊಮೆಟೊಕೊರತೆಯಾಗಿದೆ. ಇದರ ಮಧ್ಯೆ ಬಾಂಬೆ , ಕೊಲ್ಕತ್ತಾ, ಗುಜರಾತ್ ಗೂ ಕರ್ನಾಟಕದಿಂದಲೇ ಟೊಮೆಟೊ ಹೋಗುತ್ತಿರುವ ಪರಿಣಾಮ ಬೆಲೆ ಏರಿಕೆಗೆ ಕಾರಣವಾಗುತ್ತಿದೆ ಎಂದು ಹೋಲ್ ಸೇಲ್ ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಇನ್ನು ಈ ದರ ಏರಿಕೆ ಬಗ್ಗೆ ಗ್ರಾಹಕರು ಪ್ರತಿಕ್ರಿಯಿಸಿದ್ದು, ವಿಜಯ ದಶಮಿಯ ಸಲುವಾಗಿ ತರಕಾರಿ ತೆಗೆದುಕೊಳ್ಳುವುದಕ್ಕೆ ಬಂದಿದ್ವಿ. ಸದ್ಯ ಈರುಳ್ಳಿ ಬೆಳ್ಳುಳ್ಳಿ, ಬೀನ್ಸ್ ಜಾಸ್ತಿಯಾಗಿದೆ. ಟೊಮೆಟೊ ಮಾರುಕಟ್ಟೆಯಲ್ಲಿ 60 ರಿಂದ 80 ರೂಪಾಯಿ ಇದೆ‌. ಮನೆಯ ಅಕ್ಕಪಕ್ಕದ ಅಂಗಡಿಗಳಲ್ಲಿ 100 ರೂಪಾಯಿ ಮಾಡಿದ್ದಾರೆ. ಇದರಿಂದ ಗ್ರಾಹಕರಿಗೆ ತುಂಬ ಕಷ್ಡ ಆಗುತ್ತಿದೆ. ಇಷ್ಟೋಂದು ಬೆಲೆ ಜಾಸ್ತಿಯಾದ್ರೆ ಹಬ್ಬವನ್ನ ಮಾಡುವುದಾದ್ರು ಹೇಗೆ ಹೇಳಿ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಅತ್ತಗೆ ಒಂದು ಕಾಲ ಸೊಸೆಗೊಂದು ಕಾಲ ಎನ್ನುವಂತೆ ಮಳೆಯ ಕಾರಣದಿಂದಾಗಿ ಟೊಮೆಟೊಗೆ ಫುಲ್​ ಡಿಮ್ಯಾಂಡ್ ಬಂದಿದ್ದು, ಹಬ್ಬದ್ದ ಹೊಸ್ತಿಲಲ್ಲಿ ಬೆಲೆ ಏರಿಕೆಯಾಗುತ್ತಿರುವುದು ಗ್ರಾಹಕರ ಜೇಬಿಗೆ ಮಾತ್ರ ಕತ್ತರಿ ಬೀಳುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ