ಸ್ಯಾಂಡಲ್​ವುಡ್​ನಲ್ಲಿ ದೌರ್ಜನ್ಯ ತಡೆಗೆ ಸಮಿತಿ, ಫಿಲಂ ಚೇಂಬರ್​ನಲ್ಲಿ ಚರ್ಚಿಸಲು ನಿರ್ಧಾರ

ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಒಂದು ಸಮಿತಿ ಮಾಡಿ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗತ್ತಿರುವ ದೌರ್ಜನ್ಯ ತಡೆಯಬೇಕೆಂದು ನಟಿಯರು ಒತ್ತಾಯಿಸಿದ್ದು, ಈ ಬಗ್ಗೆ ಮೌನವಾಗಿದ್ದ ಫಿಲಂ ಚೇಂಬರ್, ಈಗ ಈ ಬಗ್ಗೆ ಸ್ಪಷ್ಟ ನಿರ್ಧಾರ ತಳೆಯುವ ಇಕ್ಕಟ್ಟಿಗೆ ಸಿಲುಕಿದೆ. ಇಂದು ಈ ಬಗ್ಗೆ ಚರ್ಚಿಸಲು ನಿರ್ಧರಿಸಿದೆ.

ಸ್ಯಾಂಡಲ್​ವುಡ್​ನಲ್ಲಿ ದೌರ್ಜನ್ಯ ತಡೆಗೆ ಸಮಿತಿ, ಫಿಲಂ ಚೇಂಬರ್​ನಲ್ಲಿ ಚರ್ಚಿಸಲು ನಿರ್ಧಾರ
ಫಿಲಂ ಚೇಂಬರ್
Follow us
ಮಂಜುನಾಥ ಸಿ.
|

Updated on: Sep 06, 2024 | 10:34 AM

ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಇತರೆ ದೌರ್ಜನ್ಯಗಳನ್ನು ಗುರುತಿಸಿ ಅವುಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಬೇಕೆಂಬ ಒತ್ತಾಯ ಇತ್ತೀಚೆಗೆ ಕೇಳಿ ಬಂದಿದೆ. ನಟ ಚೇತನ್ ಅಹಿಂಸಾ ಹಾಗೂ ಇತರೆ ಕೆಲವು ನಟ-ನಟಿಯರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ಆಡಿದ್ದು, ಸಮಿತಿಯೊಂದರ ರಚನೆಗೆ ಒತ್ತಾಯಿಸಿದ್ದಾರೆ. ಮನವಿ ಪತ್ರಕ್ಕೆ ಕನ್ನಡ ಚಿತ್ರರಂಗದ ಸುಮಾರು 150ಕ್ಕೂ ಹೆಚ್ಚು ಕಲಾವಿದರು, ಪತ್ರಕರ್ತರು, ಬರಹಗಾರರು ಸಹಿ ಹಾಕಿದ್ದಾರೆ.

ಈ ಬಗ್ಗೆ ಫಿಲಂ ಚೇಂಬರ್ ಆಫ್ ಕಾಮರ್ಸ್​ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಚೇತನ್ ಯಾರು ಎಂದು ನನಗೆ ಗೊತ್ತಿಲ್ಲವೆಂದು ನಿನ್ನೆ ಅಧ್ಯಕ್ಷ ಎನ್​ಎಂ ಸುರೇಶ್ ಹೇಳಿದ್ದರು. ಆದರೆ ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಈ ವಿಷಯವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದೆ. ಮಹಿಳಾ ಆಯೋಗದಿಂದ, ಫಿಲಂ ಚೇಂಬರ್​ಗೆ ಪತ್ರ ಬಂದಿರುವ ಕಾರಣ ಸಭೆಯನ್ನು ಕರೆಯಲು ಫಿಲಂ ಚೇಂಬರ್ ಮುಂದಾಗಿದೆ.

ಚಿತ್ರರಂಗದ ನಟಿಯರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಸಮಿತಿ ರಚಿಸಲು ಒತ್ತಾಯಿಸುವಂತೆ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಸಭೆಯನ್ನು ಸೆಪ್ಟೆಂಬರ್ 13ರ ಒಳಗೆ ನಡೆಸುವಂತೆ ಮಹಿಳಾ ಆಯೋಗ ಸೂಚಿಸಿರುವ ಕಾರಣದಿಂದಾಗಿ ಇಂದು ಫಿಲಂ ಚೇಂಬರ್ ಪದಾಧಿಕಾರಿಗಳು ಸಭೆ ಕರೆದಿದ್ದು ಆಂತರಿಕ ಸಭೆ ನಡೆಸಲಿದ್ದಾರೆ. ಅದಾದ ಬಳಿಕ ಇನ್ನು ಕೆಲವೇ ದಿನಗಳಲ್ಲಿ ನಟಿಯರನ್ನು ಕರೆದು ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ:‘ಆನಂದ್​ ಆಡಿಯೋ’ ಪಾಲಾದ ‘ಫೈರ್ ಫ್ಲೈ’ ಹಾಡುಗಳು; ಚರಣ್ ರಾಜ್​ಗೆ ಹೆಚ್ಚಿದ ಬೇಡಿಕೆ

ನಿನ್ನೆಯಷ್ಟೆ ಈ ಬಗ್ಗೆ ಮಾತನಾಡಿದ್ದ ಅಧ್ಯಕ್ಷ ಎನ್​ಎಂ ಸುರೇಶ್, ‘ನಮಗೆ ಯಾವುದೇ ದೌರ್ಜನ್ಯದ ದೂರು ಬಂದಿಲ್ಲ, ದೂರು ಬಂದರೆ ನಾವು ಪರಿಶೀಲನೆ ನಡೆಸುತ್ತೇವೆ’ ಎಂದಿದ್ದರು. ಅಲ್ಲದೆ ಸಮಿತಿ ರಚನೆಗೆ ಒತ್ತಾಯಿಸುವ ಪರ ಹೇಳಿಕೆ ನೀಡಿರಲಿಲ್ಲ. ಈಗ ಮಹಿಳಾ ಆಯೋಗದ ಸೂಚನೆಯಿಂದಾಗಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಇಕ್ಕಟ್ಟಿಗೆ ಫಿಲಂ ಚೇಂಬರ್ ಸಿಲುಕಿದಂತಿದೆ.

ಕೇರಳ ಸರ್ಕಾರ, ಮಲಯಾಳಂ ಚಿತ್ರರಂಗದಲ್ಲಾಗುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಅಧ್ಯಯನಕ್ಕೆ ಹೇಮಾ ಸಮಿತಿ ರಚಿಸಿತ್ತು, ಈ ಸಮಿತಿ ನೀಡಿರುವ ವರದಿ ಚಿತ್ರರಂಗದಲ್ಲಿ ಅಲ್ಲೋಕ ಕಲ್ಲೋಲ ಎಬ್ಬಿಸಿದೆ. ಕೆಲವು ಹೆಸರಾಂತ ನಟ, ನಿರ್ದೇಶಕರು, ನಿರ್ಮಾಪಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳು ದಾಖಲಾಗಿವೆ. ಈಗ ಇದೇ ಮಾದರಿಯ ಸಮಿತಿಯೊಂದನ್ನು ಕನ್ನಡ ಚಿತ್ರರಂಗದಲ್ಲಿಯೂ ರಚಿಸಬೇಕೆಂದು ಸ್ಥಳೀಯ ನಟ-ನಟಿಯರು ಒತ್ತಾಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ
ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ
ಬೆಂಗಳೂರು ಏರ್​ ಶೋ: ಏರ್​ಪೋರ್ಟ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್​​
ಬೆಂಗಳೂರು ಏರ್​ ಶೋ: ಏರ್​ಪೋರ್ಟ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್​​
ಏರ್ ಶೋಗೆ ವೀಕ್ಷಿಸಲು ತೆರಳಿರುವವರು ಟ್ರಾಫಿಕ್ ನಿರ್ಬಂಧಗಳನ್ನು ಗಮನಿಸಿ
ಏರ್ ಶೋಗೆ ವೀಕ್ಷಿಸಲು ತೆರಳಿರುವವರು ಟ್ರಾಫಿಕ್ ನಿರ್ಬಂಧಗಳನ್ನು ಗಮನಿಸಿ
ಯುವಜನಾಂಗದಲ್ಲಿ ಜಾತ್ರೆ, ಊರಹಬ್ಬಗಳ ಮೇಲಿನ ಆಸಕ್ತಿ ಕಮ್ಮಿಯಾಗುತ್ತಿದೆ
ಯುವಜನಾಂಗದಲ್ಲಿ ಜಾತ್ರೆ, ಊರಹಬ್ಬಗಳ ಮೇಲಿನ ಆಸಕ್ತಿ ಕಮ್ಮಿಯಾಗುತ್ತಿದೆ
Aero India 2025: ಬೆಂಗಳೂರು ಏರ್​ ಶೋ ಲೈವ್​, ಲೋಹದ ಹಕ್ಕಿಗಳ ಚಮತ್ಕಾರ
Aero India 2025: ಬೆಂಗಳೂರು ಏರ್​ ಶೋ ಲೈವ್​, ಲೋಹದ ಹಕ್ಕಿಗಳ ಚಮತ್ಕಾರ
ವಿಠಲ ಗ್ರಾಮದ ಬಳಿ 20ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ
ವಿಠಲ ಗ್ರಾಮದ ಬಳಿ 20ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ
ಇಂದಿನಿಂದ 3 ದಿನ ಟಿ ನರಸೀಪುರದಲ್ಲಿ ಕುಂಭಮೇಳ: ಸಿದ್ಧತೆ ಹೇಗಿದೆ ನೋಡಿ
ಇಂದಿನಿಂದ 3 ದಿನ ಟಿ ನರಸೀಪುರದಲ್ಲಿ ಕುಂಭಮೇಳ: ಸಿದ್ಧತೆ ಹೇಗಿದೆ ನೋಡಿ
ಮೈಸೂರು: ತ್ರಿವೇಣಿ ಸಂಗಮ ಕುಂಭಮೇಳದ ಮಹತ್ವ ತಿಳಿಯಿರಿ
ಮೈಸೂರು: ತ್ರಿವೇಣಿ ಸಂಗಮ ಕುಂಭಮೇಳದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದೆ
ಹಾಸಿಗೆ ಹಿಡಿದ ಮಗನ ಚಿಕಿತ್ಸೆಗೆ ಕುಮಾರಸ್ವಾಮಿ ಬಳಿ ಸಹಾಯ ಕೇಳಿದ ತಾಯಿ
ಹಾಸಿಗೆ ಹಿಡಿದ ಮಗನ ಚಿಕಿತ್ಸೆಗೆ ಕುಮಾರಸ್ವಾಮಿ ಬಳಿ ಸಹಾಯ ಕೇಳಿದ ತಾಯಿ