AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾಗಾಗಿ ಬಂದ ನಯನತಾರಾ; ಬೆಂಗಳೂರಲ್ಲಿ ‘GOAT’ ನೋಡಿದ ತಮಿಳು ನಟಿ

ನಟಿ ನಯನತಾರಾ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್​ಗಾಗಿ ಬೆಂಗಳೂರಿಗೆ ಬಂದಿದ್ದಾರೆ. ಅವರು ದಳಪತಿ ವಿಜಯ್ ಫ್ಯಾನ್​. ಹೀಗಾಗಿ ಬೆಂಗಳೂರಿನಲ್ಲೇ ದಳಪತಿ ವಿಜಯ್ ನಟನೆಯ ‘ಗ್ರೇಟೆಸ್ಟ್​ ಆಫ್ ಆಲ್ ಟೈಮ್’ (GOAT) ಸಿನಿಮಾ ನೋಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

‘ಟಾಕ್ಸಿಕ್’ ಸಿನಿಮಾಗಾಗಿ ಬಂದ ನಯನತಾರಾ; ಬೆಂಗಳೂರಲ್ಲಿ ‘GOAT’ ನೋಡಿದ ತಮಿಳು ನಟಿ
Mangala RR
| Updated By: ರಾಜೇಶ್ ದುಗ್ಗುಮನೆ|

Updated on:Sep 06, 2024 | 1:46 PM

Share

ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಬೆಂಗಳೂರಿನ ಹೊರವಲಯದಲ್ಲಿ ನಡೆಯುತ್ತಿದೆ. ಯಶ್ ಅವರು ಈ ಚಿತ್ರದ ಪ್ರಮುಖ ಪಾತ್ರ ಮಾಡಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಯನತಾರಾ ನಟಿಸುತ್ತಿದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಹರಿದಾಡಿತ್ತು. ಸದ್ಯ ಅವರು ಬೆಂಗಳೂರಿನಲ್ಲಿ ಇದ್ದಾರೆ. ಅವರು ಬೆಂಗಳೂರಿನಲ್ಲೇ ದಳಪತಿ ವಿಜಯ್ ನಟನೆಯ ‘ಗ್ರೇಟೆಸ್ಟ್​ ಆಫ್ ಆಲ್ ಟೈಮ್’ (GOAT) ಸಿನಿಮಾ ನೋಡಿದ್ದಾರೆ.

ಬೆಂಗಳೂರಿನ ನೆಲಮಂಗಲದ ಸಮೀಪ ‘ಟಾಕ್ಸಿಕ್’ ಸಿನಿಮಾದ ಸೆಟ್ ಹಾಕಲಾಗಿದೆ. ಯಶ್ ಅವರಿಗೆ ಜೊತೆಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ನಯನತಾರಾ ಯಶ್ ಸಹೋದರಿ ಪಾತ್ರ ಮಾಡುತ್ತಿದ್ದಾರಂತೆ. ಸದ್ಯ ನಯನತಾರಾ ಅವರು ನಾಲ್ಕು ದಿನಗಳ ಶೂಟಿಂಗ್ ಮಾಡಿದ್ದಾರೆ. ಪ್ರಮುಖ ದೃಶ್ಯಗಳ ಶೂಟ್ ಪೂರ್ಣಗೊಂಡಿದೆ ಎನ್ನಲಾಗಿದೆ.

ದಳಪತಿ ವಿಜಯ್ ನಟನೆಯ ‘GOAT’ ಸಿನಿಮಾ ಸೆಪ್ಟೆಂಬರ್ 5ರಂದು ರಿಲೀಸ್ ಆಗಿದೆ. ಈ ಸಿನಿಮಾ ಬೆಂಗಳೂರಿನ ಎಂಜಿ ರೋಡ್​ನಲ್ಲಿರೋ ಸ್ವಾಗತ್​ ಶಂಕರ್​ನಾಗ್ ಥಿಯೇಟರ್​ನಲ್ಲಿ ವೀಕ್ಷಿಸಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿದ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಎರಡನೇ ಹಂತದ ಚಿತ್ರೀಕರಣಕ್ಕೆ ಬೆಂಗಳೂರಿಗೆ ಮರಳಿದ ನಯನತಾರಾ 

ಕಳೆದ ವರ್ಷ ನಯನತಾರಾಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ. ಅವರ ನಟನೆಯ ‘ಜವಾನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಚಿತ್ರದಿಂದ ಅವರು ಗೆದ್ದು ಬೀಗಿದ್ದಾರೆ. ಅವರು ಈ ಮೊದಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಮತ್ತೊಮ್ಮೆ ಅವರು ಕನ್ನಡತ್ತ ಮುಖ ಮಾಡಿದ್ದಾರೆ. ಈ ಸಿನಿಮಾ 2025ರ ಏಪ್ರಿಲ್​ನಲ್ಲಿ ತೆರೆಮೇಲೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿಕ್ಲಿಕ್​ ಮಾಡಿ.

Published On - 1:18 pm, Fri, 6 September 24