ದರ್ಶನ್, ಪವಿತ್ರಾ ಗೌಡ ಮೊಬೈಲ್​ನಲ್ಲಿ ಶಾಕಿಂಗ್ ವಿಚಾರ ಬಹಿರಂಗ; ಫೋಟೋ, ಮೆಸೇಜ್, ಫೋನ್ ಕಾಲ್ ವಿವರ ಲಭ್ಯ

ಪವಿತ್ರಾ ಗೌಡ ಮತ್ತು ರೇಣುಕಾಸ್ವಾಮಿ ನಡುವೆ ನಡೆದ ಮೆಸೇಜ್​ಗಳು ಮಾತ್ರವಲ್ಲದೇ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಮೊಬೈಲ್​ಗಳಲ್ಲಿ ಇದ್ದ ಮಾಹಿತಿ ಕೂಡ ಪೊಲೀಸರ ಕೈ ಸೇರಿದೆ. ಈ ಮಾಹಿತಿಯನ್ನು ರಿಟ್ರೀವ್ ಮಾಡಿದ ವೇಳೆ ಕೆಲವು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ದರ್ಶನ್​ ಮೊಬೈಲ್​ನಲ್ಲಿ ಪವೀ ಎಂದು ಗೆಳೆತಿಯ ನಂಬರ್​ ಸೇವ್​ ಆಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ..

ದರ್ಶನ್, ಪವಿತ್ರಾ ಗೌಡ ಮೊಬೈಲ್​ನಲ್ಲಿ ಶಾಕಿಂಗ್ ವಿಚಾರ ಬಹಿರಂಗ; ಫೋಟೋ, ಮೆಸೇಜ್, ಫೋನ್ ಕಾಲ್ ವಿವರ ಲಭ್ಯ
ಪವಿತ್ರಾ ಗೌಡ, ದರ್ಶನ್​, ರೇಣುಕಾಸ್ವಾಮಿ
Follow us
ಮದನ್​ ಕುಮಾರ್​
|

Updated on: Sep 06, 2024 | 3:40 PM

ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಪವಿತ್ರಾ ಗೌಡ ಅವರ ನಂಬರ್ ಅನ್ನು ದರ್ಶನ್​ ಅವರು ಪವೀ ಅಂತ ಸೇವ್​ ಮಾಡಿಕೊಂಡಿದ್ದಾರೆ. ತನಿಖೆ ವೇಳೆ ಪೊಲೀಸರು ಮೊಬೈಲ್​ನಲ್ಲಿನ ಮಾಹಿತಿ ರಿಟ್ರೀವ್ ಮಾಡಿದಾಗ ಇಂಥ ಸಂಗತಿಗಳು ಬಯಲಾಗಿವೆ. ಡಿ ಗ್ಯಾಂಗ್ ಮೊಬೈಲ್ ರಿಟ್ರೀವ್ ಮಾಡಿರುವ ಪೊಲೀಸರಿಗೆ ಚಾಟ್​ನ ಸಂಪೂರ್ಣ ಮಾಹಿತಿ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ಹಾಗೂ ಕೊಲೆ ನಂತರ ಏನೆಲ್ಲ ಸಂಭಾಷಣೆಗಳನ್ನ ಮಾಡಿದ್ದಾರೆ? ಯಾರಿಗೆ ಮೆಸೇಜ್ ಕಳುಹಿಸಿದ್ದಾರೆ ಎಲ್ಲವೂ ಸಿಕ್ಕಿವೆ.

ದರ್ಶನ್ ಐಫೋನ್‌ 15 ಪ್ರೋ ಮೊಬೈಲ್​ ಬಳಸುತ್ತಿದ್ದು, ಅದ್ರಲ್ಲಿ ಪವಿತ್ರಾಗೌಡಳ ಮೂರು ನಂಬರ್​ ಸೇವ್ ಮಾಡಿಕೊಂಡಿದ್ದಾರೆ. ಮೊದಲನೇ ನಂಬರ್ ಪವಿ ಅಂತ ಸೇವ್ ಮಾಡಿದ್ರೆ, ಮತ್ತೊಂದು ನಂಬರ್​ PAVIIII ಅಂತಾ ಸೇವ್ ಮಾಡಿದ್ದಾರೆ. ಮೂರನೇ ನಂಬರ್​ ಪವಿತ್ರಾ ಗೌಡ ಎಂದು ಸೇವ್ ಮಾಡಿಕೊಳ್ಳಲಾಗಿದೆ.

ಮೊಬೈಲ್​ ಬಳಕೆಯಲ್ಲಿ ದರ್ಶನ್​ಗಿಂತ ಪವಿತ್ರಾ ಗೌಡ ಒಂದು ಕೈ ಮೇಲಿದ್ದಾಳೆ. ಐಫೋನ್​ ಸೀರಿಸ್​ನಲ್ಲಿ ದರ್ಶನ್​ ಐಫೋನ್ 15 ಪ್ರೋ ಬಳಸ್ತಾ ಇದ್ರೆ.. ಪವಿತ್ರಾ ಗೌಡ ದರ್ಶನ್​ಗಿಂತ ಹೈ ವರ್ಷನ್ ಅಂದ್ರೆ ಐಫೋನ್‌ 15 ಪ್ರೋ ಮ್ಯಾಕ್ಸ್‌ ಮೊಬೈಲ್ ಬಳಸ್ತಾ ಇದ್ದಳು. ಪವಿತ್ರಾಗೌಡ ತನ್ನ ಮೊಬೈಲ್​ನ ಕಾಂಟ್ಯಾಕ್ಟ್​ ಲಿಸ್ಟ್​ನಲ್ಲಿ ದರ್ಶನ್​ ನಂಬರ್​ ಅನ್ನ ಡಿ ಅಂತಾ ಸೇವ್ ಮಾಡಿಕೊಂಡಿರೋದು ಗೊತ್ತಾಗಿದೆ.

ಇನ್ನು ಆರೋಪಿ ಪವನ್ ಹೆಸರನ್ನ ಪವನ್ ನ್ಯೂ ಅಂತಾ ಸೇವ್ ಮಾಡಿದ್ರೆ, ಮತ್ತೊಬ್ಬ ಆರೋಪಿ ನಂದೀಶ್ ಹೆಸರನ್ನ ನಂದಿ ಪವನ್ ಅಂತಾ ಸೇವ್ ಮಾಡಿಕೊಂಡಿದ್ದಾಳೆ. ಇನ್ನು ಆರೋಪಿ ಧನರಾಜ್ ಹೆಸರನ್ನ ರಾಜು ಅಂತಾ ಸೇವ್ ಮಾಡಿಕೊಂಡಿದ್ರೆ, ನಾಗರಾಜ್ ಹೆಸರನ್ನ ನಾಗು ಮೈಸೂರು ಅಂತಾ ಸೇವ್ ಮಾಡಿಕೊಂಡಿದ್ದಾಳೆ. ಇನ್ನು ತನ್ನ ಗೆಳಗಿ ಸಮತಾಳ ಹೆಸರನ್ನ ಸ್ಯಾಮ್ ಎಂದು ಪವಿತ್ರಾ ಸೇವ್ ಮಾಡಿಕೊಂಡಿದ್ದಾಳೆ.

ಆರೋಪಿಗಳ ಮೊಬೈಲ್​ನಲ್ಲಿ ರೇಣುಕಾಸ್ವಾಮಿ ಕೊಲೆ ಸಂಬಂಧ ಸಾಕಷ್ಟು ರಹಸ್ಯಗಳೂ ಬಯಲಾಗಿವೆ. ಪವಿತ್ರಾ ಮೊಬೈಲ್​ನಲ್ಲಿ ಕೊಲೆ ಪ್ರಕರಣ ಸಂಬಂಧ 65 ಫೋಟೋ ಪತ್ತೆ ಆಗಿವೆ. 17 ಸ್ಕ್ರೀನ್​ ಶಾಟ್, ಸ್ವಾಮಿ ಕಳಿಸಿದ್ದ 20 ಅಶ್ಲೀಲ ಮೆಸೇಜ್ ಲಭ್ಯ ಆಗಿವೆ. ಪವಿತ್ರಗೌಡ ಜೊತೆ ದರ್ಶನ್ ನಡೆಸಿದ್ದ ವಾಟ್ಸಾಪ್​ ಚಾಟ್ ಲಭ್ಯ ಆಗಿದೆ. ವಿನಯ್ ಜೊತೆ ದರ್ಶನ್ ನಡೆಸಿದ್ದ ವಾಟ್ಸಾಪ್‌ ಚಾಟ್ ಕೂಡ ಪತ್ತೆಯಾಗಿದೆ. ನಾಗರಾಜ್ ಜೊತೆ ದರ್ಶನ್ ವಾಟ್ಸಾಪ್‌ ಕಾಲ್ ಸಂಭಾಷಣೆಯೂ ಲಭ್ಯವಾಗಿದೆ.

ಇದನ್ನೂ ಓದಿ: ‘ಪವಿತ್ರಾ ಗೌಡ ಖಾತೆಗೆ ಸೌಂದರ್ಯಾ ಜಗದೀಶ್​ ಹಣ ಹಾಕಿದ್ದು ನಿಜ’: ಸುರೇಶ್

ಜೂನ್‌ 8ರಿಂದ 11ರವೆರಗೂ 32 ಬಾರಿ ವಾಟ್ಸಾಪ್ ಕಾಲ್ ಮಾಡಲಾಗಿತ್ತು. ಪ್ರದೋಶ್‌ ಜೊತೆ 10 ಬಾರಿ ವಾಟ್ಸಾಪ್‌‌‌ ಕಾಲ್‌ನಲ್ಲಿ ಮಾತುಕತೆ, ಆರೋಪಿ ಅನುಕುಮಾರ್‌ ಮೊಬೈಲ್‌ನಲ್ಲಿ 2 ವಿಡಿಯೋ, ಆರೋಪಿ ಪ್ರದೋಶ್ ಜೊತೆ ನಡೆಸಿರುವ ಚಾಟಿಂಗ್‌, ವಿನಯ್‌ ಮೊಬೈಲ್​ನಲ್ಲಿ 42 ಬಾರಿ ವಾಟ್ಸಾಪ್ ಕಾಲ್ ಸಂಭಾಷಣೆ, ಪ್ರದೋಶ್, ಪವನ್‌ ಜೊತೆ 42 ಬಾರಿ ವಾಟ್ಸಾಪ್‌ ಕಾಲ್‌ ಸಂಭಾಷಣೆಯ ವಿವರ ಕೂಡ ಪೊಲೀಸರ ಕೈ ಸೇರಿವೆ.

ವಿನಯ್​ ಮೊಬೈಲ್​ನಲ್ಲಿ 10 ಫೋಟೋಗಳು ರಿಟ್ರೀವ್‌ನಲ್ಲಿ ಪತ್ತೆಯಾಗಿವೆ. ರೇಣುಕಾಸ್ವಾಮಿಯನ್ನ ಚಿತ್ರದುರ್ಗದಲ್ಲಿ ಹಿಂಬಾಲಿಸಿ ತೆಗೆದ ಫೋಟೋ, ಪಟ್ಟಣಗೆರೆ ಶೆಡ್‌‌ಗೆ ರೇಣುಕಾಸ್ವಾಮಿ ಕರೆತಂದಿದ್ದ ವೇಳೆ ತೆಗೆದ ಫೋಟೋ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಫೋಟೋ, ಶವವನ್ನ ಸುಮನಳ್ಳಿ ರಾಜಕಾಲುವೆ ಬಳಿ ಬಿಸಾಡಿರುವ ಫೋಟೋ ಹಾಗೂ ದೀಪಕ್ ಮೊಬೈಲ್‌ನಲ್ಲಿ 30 ಆಡಿಯೋ ಸಂಭಾಷಣೆ ಪತ್ತೆಯಾಗಿದೆ.

ಅಂದಹಾಗೆ ಆರೋಪಿಗಳ ಮೊಬೈಲ್​ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ 65 ಫೋಟೋ ಪತ್ತೆಗಳು ಲಭ್ಯವಾಗಿದೆ. ಇದ್ರಲ್ಲಿ, 17 ಸ್ಕ್ರೀನ್ ಶಾಟ್, ಸ್ವಾಮಿ ಕಳಿಸಿದ್ದ 20 ಅಶ್ಲೀಲ ಮೆಸೇಜ್ ಲಭ್ಯವಾಗಿದೆ. ಪವಿತ್ರಗೌಡ ಜೊತೆ ದರ್ಶನ್ ನಡೆಸಿದ್ದ ವಾಟ್ಸಾಪ್​ ಚಾಟ್​​ ಸಹ ಸಿಕ್ಕಿದೆ. ಇದ್ರಲ್ಲಿ ವಿನಯ್ ಜೊತೆ ದರ್ಶನ್ ನಡೆಸಿದ್ದ ವಾಟ್ಸಾಪ್‌ ಚಾಟ್, ನಾಗರಾಜ್ ಜೊತೆ ದರ್ಶನ್ ವಾಟ್ಸಾಪ್‌ ಕಾಲ್ ಸಂಭಾಷಣೆಯೂ ಲಭ್ಯವಾಗಿದೆ. ವಿನಯ್ ಮತ್ತು ಪ್ರದೋಶ್ ಜೊತೆ ನಡೆಸಿರುವ ಚಾಟಿಂಗ್ ಸಹ ಸಿಕ್ಕಿವೆ.

ಕೊಲೆ ಬಳಿಕ ಪವಿತ್ರಾಗೆ ದರ್ಶನ್​ ಫೋನ್​ ಮಾಡಿದ್ದಳು. ರೇಣುಕಾಸ್ವಾಮಿ ಮೇಲೆ ಹಲ್ಲೆ ಬಳಿಕ, ವಿನಯ್ ಪವಿತ್ರಾ ಗೌಡಗಳನ್ನ ಮನೆಗೆ ಡ್ರಾಪ್ ಮಾಡಿರ್ತಾನೆ. ಬಳಿಕ ಭಾನುವಾರ ದರ್ಶನ್ ಪವಿತ್ರಾಗೆ ಫೋನ್​ ಮಾಡಿ, ಪೊಲೀಸರು ಬಂದು ಏನಾದ್ರು ಕೇಳಿದ್ರೆ ತನಗೆ ಏನು ಗೊತ್ತಿಲ್ಲಾ ಎಂದು ಹೇಳು, ಅದನ್ನು ಬಿಟ್ಟು ಬೇರೆ ಏನು ಹೇಳಬೇಡ ಎಂದು ಹೇಳಿ, ಫೋನ್ ಕಟ್ ಮಾಡ್ತಿರ್ತಾನೆ. ಆಗ ಪವಿತ್ರಾ ಗಾಬರಿ ಬಿದ್ದು, ಪವನ್​ ಬಳಿ ವಿಚಾರಿಸ್ತಾಳೆ. ಆಗ ಪವನ್ ಏನಿಲ್ಲ, ನೀವು ಸುಮ್ಮೆ ಇರಿ ಎಂದಿರ್ತಾನೆ. ಅದಕ್ಕೆ ಪವಿತ್ರಾ ಕೂಗಾಡಿ, ಜೋರು ಮಾಡಿರ್ತಾಳೆ. ಆಗ, ರೇಣುಕಾಸ್ವಾಮಿ ಕೊಲೆಮಾಡಿ ಬಾಡಿ ಎಸೆದು ಬಂದಿರೋ ಬಗ್ಗೆ ಪವನ್ ಹೇಳಿರ್ತಾನೆ.

ಇದನ್ನೂ ಓದಿ: ಪತ್ನಿ ಕೊಟ್ಟ ಬ್ಯಾಗ್ ಹಿಡಿದು ಸೈಲೆಂಟ್ ಆಗಿ ಸೆಲ್​ಗೆ ಹೋದ ದರ್ಶನ್; ಹೀಗಿದೆ ದಾಸನ ಸ್ಥಿತಿ

ಇನ್ನು ಕೊಲೆ ಬಳಿಕ ಸರೆಂಡರ್​ ಆಗು ಎಂದಾಗ, ರಾಘವೇಂದ್ರ ಆಗಲ್ಲ ಎಂದು ಚಿತ್ರದುರ್ಗದ ಕಡೆ ಹೊರಟಿರ್ತಾನೆ. ಆದ್ರೆ ವಿನಯ್ ಪ್ರದೋಶ್ ಮತ್ತು ರಾಘವೇಂದ್ರ ಮೂವರು ಸೇರಿ ರಾಘವೇಂದ್ರನನ್ನ ಒಪ್ಪಿಸಿರ್ತಾರೆ. ಹೀಗೆ ರೇಣುಕಾಸ್ವಾಮಿಯ ಕೊಲೆಯ ಒಂದೊಂದೇ ರಹಸ್ಯಗಳು ಬಯಲಾಗಿವೆ. ಇದೀಗ ದರ್ಶನ್​ ಆ್ಯಂಡ್ ಗ್ಯಾಂಗ್ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಮುಂದೇನಾಗುತ್ತೆ ಕಾದು ನೋಡಬೇಕಿದೆ

– ಬ್ಯುರೋ ರಿಪೋರ್ಟ್ ಟಿವಿ9

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ