AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಣ ಇಲಾಖೆ ಅಧೀನದಲ್ಲಿ ಮಹಿಳಾ ದೌರ್ಜನ್ಯ ತಡೆಗೆ ಸಮಿತಿ ರಚನೆ ಮಾಡಿದ ರಾಜ್ಯ ಸರ್ಕಾರ

ಶಿಕ್ಷಣ ಇಲಾಖೆ ಅಧೀನದಲ್ಲಿ ಮಹಿಳಾ ದೌರ್ಜನ್ಯ ತಡೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಆಂತರಿಕ ದೂರು ಸಮಿತಿಯೊಂದನ್ನು ರಚನೆ ಮಾಡಿದೆ. ಹಾಗೂ ಇಂತಹ ಘಟನೆಗಳ ಪರಿಹಾರಕ್ಕೆ 9 ಮಹಿಳಾ ಅಧಿಕಾರಿಗಳ ಸಮಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ರಚಿಸಿದ್ದಾರೆ.

ಶಿಕ್ಷಣ ಇಲಾಖೆ ಅಧೀನದಲ್ಲಿ ಮಹಿಳಾ ದೌರ್ಜನ್ಯ ತಡೆಗೆ ಸಮಿತಿ ರಚನೆ ಮಾಡಿದ ರಾಜ್ಯ ಸರ್ಕಾರ
ಶಿಕ್ಷಣ ಇಲಾಖೆ ಅಧೀನದಲ್ಲಿ ಮಹಿಳಾ ದೌರ್ಜನ್ಯ ತಡೆಗೆ ಸಮಿತಿ ರಚನೆ ಮಾಡಿದ ರಾಜ್ಯ ಸರ್ಕಾರ
ಪ್ರಸನ್ನ ಗಾಂವ್ಕರ್​
| Edited By: |

Updated on:Oct 08, 2024 | 9:02 PM

Share

ಬೆಂಗಳೂರು, ಅ.08: ಶಿಕ್ಷಣ ಇಲಾಖೆ ಅಧೀನದಲ್ಲಿ ಮಹಿಳಾ ದೌರ್ಜನ್ಯ ತಡೆಗೆ ಆಂತರಿಕ ದೂರು ಸಮಿತಿಯೊಂದನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ. ಮಹಿಳಾ‌ ಅಧಿಕಾರಿ, ಶಿಕ್ಷಕಿಯರು, ಸಿಬ್ಬಂದಿಗೆ ಕಿರುಕುಳ, ಮಾನಸಿಕ ಹಿಂಸೆ, ದುರುದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ಲೈಂಗಿಕ ದೌರ್ಜನ್ಯ ಮುಂತಾದ ಘಟನೆಗಳ ಪರಿಹಾರಕ್ಕೆ 9 ಮಹಿಳಾ ಅಧಿಕಾರಿಗಳ ಸಮಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ರಚನೆ ಮಾಡಿದ್ದಾರೆ.

ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಹೀಗಾಗಿ ಈ ಆಂತರಿಕ ದೂರು ಸಮಿತಿಯನ್ನು ರಚನೆ ಮಾಡಲಾಗಿದೆ. ಅವರು ಕೆಲಸ ಮಾಡುವ ಸ್ಥಳಗಳಲ್ಲಿ ಯಾವುದೇ ರೀತಿಯ ಅಭದ್ರತೆ ಅನಿಸಿದರೆ, ಕೂಡಲೇ ಈ ಸಮಿತಿಗೆ ದೂರು ನೀಡಬಹುದು. ಇನ್ನು ಕಾಲಕಾಲಕ್ಕೆ ಶಿಕ್ಷಣ ಇಲಾಖೆ ಅಧೀನದ ಮಹಿಳಾ ಅಧಿಕಾರಿ, ಸಿಬ್ಬಂದಿ, ಶಿಕ್ಷಕಿಯರ ದೂರನ್ನು ಈ ಸಮಿತಿ ಪರಿಶೀಲನೆ ನಡೆಸಲಿದೆ.

ಇದನ್ನೂ ಓದಿ:ಸ್ಯಾಂಡಲ್​ವುಡ್​ನಲ್ಲಿ ದೌರ್ಜನ್ಯ ತಡೆಗೆ ಸಮಿತಿ, ಫಿಲಂ ಚೇಂಬರ್​ನಲ್ಲಿ ಚರ್ಚಿಸಲು ನಿರ್ಧಾರ

ಇನ್ನು ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಇತರೆ ದೌರ್ಜನ್ಯಗಳನ್ನು ಗುರುತಿಸಿ ಅವುಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ನಟ ಚೇತನ್ ಅಹಿಂಸಾ ಹಾಗೂ ಇತರೆ ಕೆಲವು ನಟ-ನಟಿಯರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ಆಡಿದ್ದು, ಸಮಿತಿಯೊಂದರ ರಚನೆಗೆ ಒತ್ತಾಯಿಸಿದ್ದರು. ಇದೀಗ ಶಿಕ್ಷಣ ಇಲಾಖೆ ಅಧೀನದಲ್ಲಿ ಮಹಿಳಾ ದೌರ್ಜನ್ಯ ತಡೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:58 pm, Tue, 8 October 24

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು