ವೈಟ್ ಬೋರ್ಡ್ ವಾಹನಗಳಿಗೆ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ; ಪ್ರಮೋಷನ್‌‌ ರೀಲ್ಸ್ ಮಾಡುವವರ ಮೇಲೆ ಹದ್ದಿನ ಕಣ್ಣು

ನೀವೇನಾದರೂ ರೀಲ್ಸ್ ಮಾಡಿ ವೈಟ್ ಬೋರ್ಡ್ ಟ್ರಾವಲ್ಸ್ ಆ್ಯಪ್‌ಗಳಿಗೆ ಪ್ರಮೋಷನ್ ಮಾಡ್ತೀರಾ. ಅನಧಿಕೃತ ಆ್ಯಪ್‌ಗಳಿಗೆ ರೀಲ್ಸ್ ಮಾಡುವ ವ್ಯಕ್ತಿಗಳ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.‌ ಅನಧಿಕೃತ ಆ್ಯಪ್‌ಗಳಿಗೆ ಪ್ರಮೋಷನ್‌‌ಗಾಗಿ ರೀಲ್ಸ್ ಮಾಡುವ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ.

ವೈಟ್ ಬೋರ್ಡ್ ವಾಹನಗಳಿಗೆ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ; ಪ್ರಮೋಷನ್‌‌ ರೀಲ್ಸ್ ಮಾಡುವವರ ಮೇಲೆ ಹದ್ದಿನ ಕಣ್ಣು
ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ನಟರಾಜ್ ಶರ್ಮ
Follow us
Kiran Surya
| Updated By: ಆಯೇಷಾ ಬಾನು

Updated on: Oct 09, 2024 | 6:50 AM

ಬೆಂಗಳೂರು, ಅ.09: ಸರ್ಕಾರದ ಬೊಕ್ಕಸಕ್ಕೆ ವೈಟ್ ಬೋರ್ಡ್ ಮಾಲೀಕರೇ (White Board Vehicles) ಭಾರೀ ನಷ್ಟ ಉಂಟು ಮಾಡ್ತಿದ್ದಾರೆ. ಅನುಮತಿ ತೆಗೆದುಕೊಂಡಿದ್ದು ವೈಟ್ ಬೋರ್ಡ್ ಗೆ ಆದ್ರೆ ಬಳಕೆ ಮಾಡ್ತಿರೊದು ಮಾತ್ರ ವಾಣಿಜ್ಯಕ್ಕೆ. ಹೀಗಾಗಿ ಯೆಲೋ ಬೋರ್ಡ್ ಚಾಲಕರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಿಯಮದ ಪ್ರಕಾರ ವೈಟ್ ಬೋರ್ಡ್ ವಾಹನಗಳನ್ನು ವಾಣಿಜ್ಯ ಬಳಕೆಗೆ ಬಳಸುವಂತಿಲ್ಲ. ಆದರೂ ಬೆಂಗಳೂರಿನಲ್ಲಿ (Bengaluru) ಎಗ್ಗಿಲ್ಲದೆ ಟ್ರಾನ್ಸ್ ಪೋರ್ಟ್ ರೂಲ್ಸ್ ಉಲ್ಲಂಘನೆ ಆಗ್ತಿದೆ. ಈ ಬಗ್ಗೆ ಸಾರಿಗೆ ಇಲಾಖೆಗೆ (Transport Department) ಸಾಲು ಸಾಲು ದೂರು ಬಂದಿದ್ದು ಇದೀಗ ಇಲಾಖೆ ಆರ್ಲಟ್ ಆಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಹನಿಟ್ರ್ಯಾಪ್ ಗ್ಯಾಂಗ್​; ನಾಲ್ವರು ಅರೆಸ್ಟ್​

ಹಲವು ಆಪ್ ಮೂಲಕ ವೈಟ್ ಬೋರ್ಡ್ ವಾಹನವನ್ನು ವಾಣಿಜ್ಯ ಬಳಕೆಗೆ ಬುಕಿಂಗ್ ಆಗ್ತಿದೆ‌. ಕೆಲ ಆಪ್ ಗಳನ್ನ ನಿಷೇಧ ಮಾಡಿದ್ರು ಸಹ ಅನಧಿಕೃತವಾಗಿ ರನ್ ಆಗ್ತಿದ್ದು, ರೀಲ್ಸ್ ಮುಖಾಂತರ ಪ್ರಮೋಷನ್ ಸಹ ವೈಟ್ ಬೋರ್ಡ್ ಮಾಲೀಕರು ಮಾಡಿಸುತ್ತಿದ್ದಾರೆ‌. ಹೀಗಾಗಿ ಸಾರಿಗೆ ಇಲಾಖೆಯು ಕಾರ್ಯಾಚರಣೆಗೆ ಮುಂದಾಗಿದ್ದು, ರೀಲ್ಸ್ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜೊತೆಗೆ ವಾಹನದ ಆರ್ ಸಿ, ಡಿಎಲ್ ರದ್ದು ಮಾಡುವ ಎಚ್ಚರಿಕೆ ನೀಡಿದ್ದಾರೆ.

ಒಟ್ನಲ್ಲಿ ಸಾರಿಗೆ ಅಧಿಕಾರಿಗಳು ಸುಮ್ಮನೆ ಹೇಳಿಕೆಗೆ ಮಾತ್ರ ಕಾರ್ಯಾಚರಣೆ ಅಂತ ಆಗಬಾರದು, ಸರ್ಕಾರಕ್ಕೆ ನಷ್ಟ ಉಂಟು ಮಾಡ್ತಿರುವ ವೈಟ್ ಬೋರ್ಡ್ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ