AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್​ಗೆ ಓರ್ವ ಬಲಿ, ಕೋಲಾರದಲ್ಲಿ ತಾಯಿ-ಮಗ ಬಲಿ

ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಬೆಂಗಳೂರಿನ ಸಹಕಾರ ನಗರದ ರೈಲ್ವೆ ಅಂಡರ್​ಪಾಸ್​​ ಬಳಿ ಹಿಟ್ ಆ್ಯಂಡ್ ರನ್​ಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಮತ್ತೊಂದೆಡೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ಕ್ರಾಸ್ ಬಳಿ ಅಪರಿಚಿತ ವಾಹನ ಬೈಕ್​ಗೆ ಡಿಕ್ಕಿಯಾಗಿ ತಾಯಿ, ಮಗ ಮೃತಪಟ್ಟ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್​ಗೆ ಓರ್ವ ಬಲಿ, ಕೋಲಾರದಲ್ಲಿ ತಾಯಿ-ಮಗ ಬಲಿ
ಹಾಸ್ಟೆಲ್ ಬಾತ್​ರೂಂನಲ್ಲಿ ಮದರಸಾ ವಿದ್ಯಾರ್ಥಿ ಆತ್ಮಹತ್ಯೆ: ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪೋಷಕರುImage Credit source: Citizens for Justice and Peace
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Oct 09, 2024 | 8:08 AM

Share

ಬೆಂಗಳೂರು, ಅ.09: ಸಿಲಿಕಾನ್ ಸಿಟಿ ಬೆಂಗಳೂರಿನ ಸಹಕಾರ ನಗರದ ರೈಲ್ವೆ ಅಂಡರ್​ಪಾಸ್​​ ಬಳಿ ಭೀಕರ ಅಪಘಾತ ಸಂಭವಿಸಿದ್ದು ಹಿಟ್ ಆ್ಯಂಡ್ ರನ್​ಗೆ (Hit And Run) ಓರ್ವ ವ್ಯಕ್ತಿ ಬಲಿಯಾಗಿದ್ದಾರೆ (Death). ಮುಂಜಾನೆ ಸುಮಾರು 5 ಗಂಟೆಗೆ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ವಾಹನಕ್ಕೆ ಸಿಲುಕಿ ಅನಾಮಿಕ ವ್ಯಕ್ತಿ ಬಲಿಯಾಗಿದ್ದಾರೆ. ಅಪಘಾತ ನಡೆಸಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೊಡಿಗೇಹಳ್ಳಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಮೃತ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ.

ಅಪರಿಚಿತ ವಾಹನ ಬೈಕ್​ಗೆ ಡಿಕ್ಕಿಯಾಗಿ ತಾಯಿ, ಮಗ ದುರ್ಮರಣ

ಇನ್ನು ಮತ್ತೊಂದೆಡೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ಕ್ರಾಸ್ ಬಳಿ ಅಪರಿಚಿತ ವಾಹನ ಬೈಕ್​ಗೆ ಡಿಕ್ಕಿಯಾಗಿ ತಾಯಿ, ಮಗ ಮೃತಪಟ್ಟ ಘಟನೆ ನಡೆದಿದೆ. ಹಿಟ್​ ಆ್ಯಂಡ್​ ರನ್​ಗೆ ಕೇತಗಾನಹಳ್ಳಿ ನಿವಾಸಿಗಳಾದ ಪದ್ಮಮ್ಮ(48), ಪುತ್ರ ರಘು(26) ಬಲಿಯಾಗಿದ್ದಾರೆ. ಶ್ರೀನಿವಾಸಪುರದಿಂದ ಸ್ವಗ್ರಾಮ ಕೇತಗಾನಹಳ್ಳಿಗೆ ತೆರಳುವಾಗ ದುರಂತ ಸಂಭವಿಸಿದೆ. ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನದ ಪತ್ತೆಗಾಗಿ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಶ್ರೀನಿವಾಸಪುರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊನೆಗೂ ತಗ್ಗಿತು ಡೆಂಗ್ಯೂ ಅಬ್ಬರ: ಆದರೂ ಆತಂಕ ಇದೆ ಎಂದ ಆರೋಗ್ಯ ಇಲಾಖೆ! ಕಾರಣ ಇಲ್ಲಿದೆ

ಆರೋಪಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಹೆಚ್ಚಿನ ಗಾಂಜಾ ಇತ್ತು ಎಂಬ ಆರೋಪ ಹೊರಿಸಿದ್ದಕ್ಕೆ ಬೇಸತ್ತು ಯುವಕ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ನಗರದ ಮುನಿಸಿಪಾಲ್ ಮೈದಾನದ ಬಳಿ ನಡೆದಿದೆ. ನಗರದ ಸುಭಾಸ್ ಸರ್ಕಲ್ ನಿವಾಸಿ ದಾದಾಪೀರ ಆತ್ಮಹತ್ಯೆಗೆ ಯತ್ನಿಸಿದ ಯುವಕ. ದಾದಾಪೀರ್ ಬಳಿ ಪೊಲೀಸರಿಗೆ 40 ಗ್ರಾಂ ಗಾಂಜಾ ಸಿಕ್ಕಿತ್ತು. ಆದರೆ ಪೊಲೀಸರು ದಾದಾಪೀರ ಬಳಿ 2 ಕೆ.ಜಿ ಗಾಂಜಾ ಇರುವ ಆರೋಪ ಹೊರಿಸಿದ್ದರು. ಸಿಇಎನ್ ಕ್ರೈಂ ಠಾಣೆ ಪೊಲೀಸರು ನನ್ನ ಬಳಿ ವಶಕ್ಕೆ ಪಡೆದ ಗಾಂಜಾಗಿಂತ ಹೆಚ್ಚಿನ ಗಾಂಜಾ ಇದೆ ಎಂದು ಆರೋಪಿಸಿದ್ದಾರೆ ಎಂದು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಅಸ್ವಸ್ಥ ಆರೋಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಆರೋಗ್ಯ ಸ್ಥಿರವಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ