ಈ ಬಾರಿ ಪೂರ್ಣ ಪ್ರಮಾಣದಲ್ಲಿ ಸೂರ್ಯ ಗವಿ ಗಂಗಾಧರೇಶ್ವರನನ್ನು ಸ್ಪರ್ಶಿಸಿರುವುದರಿಂದ ಎಲ್ಲವೂ ಒಳ್ಳೆಯದೇ ಆಗಲಿದೆ; ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್

| Updated By: ಸುಷ್ಮಾ ಚಕ್ರೆ

Updated on: Jan 14, 2022 | 6:51 PM

ಸೂರ್ಯ ಕಳೆದ ಬಾರಿ ಮುನಿಸಿಕೊಂಡಿದ್ದ. ಕಳೆದ ಬಾರಿ ಸೂರ್ಯನ ದರ್ಶನ ಆಗಿರಲಿಲ್ಲ. ಆದರೆ, ಇಂದು ಪೂರ್ಣ ಪ್ರಮಾಣದಲ್ಲಿ ಸೂರ್ಯ ಶಿವಲಿಂಗವನ್ನು ಸ್ಪರ್ಶ ಮಾಡಿರುವುದರಿಂದ ಎಲ್ಲವೂ ತುಂಬ ಒಳ್ಳೆಯದಾಗುತ್ತದೆ ಎಂದು ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.

ಈ ಬಾರಿ ಪೂರ್ಣ ಪ್ರಮಾಣದಲ್ಲಿ ಸೂರ್ಯ ಗವಿ ಗಂಗಾಧರೇಶ್ವರನನ್ನು ಸ್ಪರ್ಶಿಸಿರುವುದರಿಂದ ಎಲ್ಲವೂ ಒಳ್ಳೆಯದೇ ಆಗಲಿದೆ; ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್
ಗವಿ ಗಂಗಾಧರೇಶ್ವರ ದೇವಸ್ಥಾನದ ಅರ್ಚಕ ಸೋಮಸುಂದರ್ ದೀಕ್ಷಿತ್
Follow us on

ಬೆಂಗಳೂರು: ಬಸವನಗುಡಿಯ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಇಂದು ಸೂರ್ಯ ರಶ್ಮಿ ಶಿವ ಲಿಂಗವನ್ನು ಸ್ಪರ್ಶಿಸಿದೆ. ಈ ವೇಳೆ ಮಾತನಾಡಿರುವ ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್, ಕಳೆದ ಬಾರಿ ಮೋಡ ಮುಸುಕಿದ್ದರಿಂದ ಮಕರ ಸಂಕ್ರಾಂತಿಯಂದು ಸಂಪೂರ್ಣವಾಗಿ ಸೂರ್ಯನ ರಶ್ಮಿ ಶಿವ ಲಿಂಗವನ್ನು ಸ್ಪರ್ಶಿಸಿರಲಿಲ್ಲ. ಕಳೆದ ವರ್ಷವಿಡೀ ನಾವು ಕೊರೊನಾದಿಂದಾಗಿ ಸಾಕಷ್ಟು ಅನಾಹುತಗಳನ್ನು, ಸಾವು-ನೋವುಗಳನ್ನು ನೋಡಬೇಕಾಯಿತು. ಆದರೆ, ಇಂದು ಪೂರ್ಣ ಪ್ರಮಾಣದಲ್ಲಿ ಸೂರ್ಯ ಶಿವಲಿಂಗವನ್ನು ಸ್ಪರ್ಶ ಮಾಡಿರುವುದರಿಂದ ಎಲ್ಲವೂ ತುಂಬ ಒಳ್ಳೆಯದಾಗುತ್ತದೆ. ಸೂರ್ಯ ಕಳೆದ ಬಾರಿ ಮುನಿಸಿಕೊಂಡಿದ್ದ. ಈ ಬಾರಿ ಕಳೆದ‌ ಬಾರಿಯ ಬೇಸರವನ್ನು ತೊಳೆದಿದ್ದಾನೆ ಎಂದಿದ್ದಾರೆ.

ಇವತ್ತು ಬಹಳ ವಿಶೇಷವಾದ ದಿನ. ಮಾಧ್ಯಮ ಮಿತ್ರರ ಸಹಕಾರದಿಂದ ನಾನು ಮನೆಯಲ್ಲೇ ಕುಳಿತು ಕೌತುಕವನ್ನು ಕಣ್ಣು ತುಂಬಿಕೊಂಡಿದ್ದೀರ. ಸೂರ್ಯ ದೇವನು ಶಿವನಿಗೆ ಪೂಜೆ ಮಾಡಿ ಹೋಗಿದ್ದಾನೆ. ಶಿವ ಹಾಗೂ ಪಾರ್ವತಿ ಒಂದೇ ಪೀಠದಲ್ಲಿವೆ. ಯಾರನ್ನೇ ದರ್ಶನ ಮಾಡಿದ್ರೂ ಪಾದ ಮುಟ್ಟಿ ನಮಸ್ಕಾರ ಮಾಡುತ್ತೇವೆ. ಅದೇ ರೀತಿ ಸೂರ್ಯನು ಶಿವನ ಪಾದವನ್ನು ಮೊದಲು ಸ್ಪರ್ಶ ಮಾಡಿದ್ದಾನೆ.

13 ನಿಮಿಷಗಳ ಕಾಲ ಶಿವಲಿಂಗದ ಮೇಲೆ ಸೂರ್ಯನ ಸ್ಪರ್ಶವಾಗಿದೆ. ಧಾರ್ಮಿಕವಾಗಿ ಶಿವಪೂಜೆ‌ ನಿರಾತಂಕವಾಗಿ ನಡೆದಿದೆ. ಪೂರ್ಣ ಪ್ರಮಾಣದಲ್ಲಿ ಸೂರ್ಯನು ಶಿವಲಿಂಗವನ್ನು ಸ್ಪರ್ಶ ಮಾಡಿರೋದ್ರಿಂದ ತುಂಬಾ ಒಳ್ಳೇಯದಾಗುತ್ತದೆ. ಸೂರ್ಯ ಕಳೆದ ಬಾರಿ ಮುನಿಸಿಕೊಂಡಿದ್ದ. ಕಳೆದ ಬಾರಿ ಸೂರ್ಯನ ದರ್ಶನ ಆಗಿರಲಿಲ್ಲ. ಈ ಬಾರಿ ಕೊರೊನಾ ಮೂರನೇ ಅಲೆ ಅಲೆಯಾಗೇ ಹೋಗಲಿ. ಶಿವನ ಪಾದದಿಂದ 2 ನಿಮಿಷ ತಲೆಯನ್ನು ಸ್ಪರ್ಶ ಮಾಡಿದ್ದಾನೆ. 13 ಸೆಕೆಂಡ್ ಶಿವ ಶಿರದ ಮೇಲೆ ಸೂರ್ಯಸ್ಪರ್ಶವಾಗಿದೆ ಎಂದು ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.

ಬೆಂಗಳೂರು ನಗರದ ಗವಿಪುರಂನಲ್ಲಿರುವ ಐತಿಹಾಸಿಕ ದೇವಾಲಯವಾದ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿನ ಶಿವಲಿಂಗದ ಮೇಲೆ ಸೂರ್ಯ ರಶ್ಮಿಯ ದರ್ಶನವಾಗಿದೆ. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸಿದ ಸೂರ್ಯ ಗವಿಗಂಗಾಧರೇಶ್ವರನಿಗೆ ನಮಿಸಿದ್ದಾನೆ. ಲಿಂಗದ ಮುಂದಿರುವ ನಂದಿಕೊಂಬಿನಿಂದ ಹಾದು ಶಿವನ ಸ್ಪರ್ಶ ಮಾಡಿದೆ. ಸೂರ್ಯರಶ್ಮಿ ಸ್ಪರ್ಶದ ಹಿನ್ನೆಲೆ ಶಿವನಿಗೆ ವಿಶೇಷ ಅಭಿಷೇಕ ಮಾಡಲಾಯಿತು. ಕೊವಿಡ್ ಹಿನ್ನೆಲೆಯಲ್ಲಿ ಗವಿ ಗಂಗಾಧರೇಶ್ವರ ದೇವರ ದರ್ಶನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಭಕ್ತರು ಮನೆಯಲ್ಲೇ ಕುಳಿತು ಟಿವಿಯಲ್ಲಿ ಪ್ರಕೃತಿ ವಿಸ್ಮಯವನ್ನು ಕಣ್ತುಂಬಿಕೊಂಡರು. ಸೂರ್ಯ ರಶ್ಮಿ ಗವಿಗಂಗಾಧರನ ಸ್ಪರ್ಶಿಸುವ ಕ್ಷಣಕ್ಕೆ ಕೆಲವೇ ಜನರು ದೇವಸ್ಥಾನದಲ್ಲಿ ಸಾಕ್ಷಿಯಾದರು.

ಇದನ್ನೂ ಓದಿ: ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವ ಲಿಂಗವನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ

ಈ ಬಾರಿಯಾದರೂ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಭಾಸ್ಕರನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಲಿದೆಯೇ?