AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಟ್ಟಡ ಮಾಲೀಕರಿಗೆ ಬಿಗ್​​ ಶಾಕ್ ನೀಡಿದ GBA: 437 ಕೋಟಿ ರೂ. ತೆರಿಗೆ ಬಾಕಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 7,020 ಮಾಲೀಕರಿಗೆ ಬಿಗ್ ಶಾಕ್ ನೀಡಿದೆ. ₹437 ಕೋಟಿಗೂ ಹೆಚ್ಚು ಬಾಕಿ ಸಂಗ್ರಹಿಸಬೇಕಿದ್ದು, ಫೆಬ್ರವರಿ 17ರೊಳಗೆ ಪಾವತಿಸದಿದ್ದರೆ ಆಸ್ತಿಗಳನ್ನು ಜಪ್ತಿ ಮಾಡಿ ಹರಾಜು ಹಾಕಲಾಗುವುದು ಎಂದು ಮುಖ್ಯ ಆಯುಕ್ತರು ಎಚ್ಚರಿಸಿದ್ದಾರೆ. ಹರಾಜು ತಪ್ಪಿಸಲು ತಕ್ಷಣ ತೆರಿಗೆ ಪಾವತಿಸಲು ಸೂಚಿಸಲಾಗಿದೆ.

ಕಟ್ಟಡ ಮಾಲೀಕರಿಗೆ ಬಿಗ್​​ ಶಾಕ್ ನೀಡಿದ GBA: 437 ಕೋಟಿ ರೂ. ತೆರಿಗೆ ಬಾಕಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ Image Credit source: Google
ಅಕ್ಷಯ್​ ಪಲ್ಲಮಜಲು​​
|

Updated on:Feb 03, 2026 | 7:32 PM

Share

ಬೆಂಗಳೂರು, ಫೆ.3: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಬಿಗ್​​ ಶಾಕ್ ನೀಡಿದೆ. GBA ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಜಿಬಿಎ ವ್ಯಾಪ್ತಿಯ 5 ನಗರಪಾಲಿಕೆಗಳಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಈಗಾಗಲೇ ಎಚ್ಚರಿಕೆ ನೋಟಿಸ್ ನೀಡಲಾಗಿದೆ. ಒಟ್ಟು 7,020 ಆಸ್ತಿ ಮಾಲೀಕರಿಂದ ಸುಮಾರು 437 ಕೋಟಿ ರೂ.ಗಳಿಗಿಂತ ಹೆಚ್ಚಿನ ತೆರಿಗೆ ಹಣ ಬರಬೇಕಿದೆ.

ತೆರಿಗೆ ಪಾವತಿಸದ 7,020 ಮಾಲೀಕರ ಆಸ್ತಿಗಳನ್ನು ಹರಾಜು ಮಾಡಲು ತೀರ್ಮಾನಿಸಲಾಗಿದೆ. ಬಾಕಿ ತೆರಿಗೆ ಪಾವತಿಸಲು ಫೆಬ್ರವರಿ 17 ಕೊನೆಯ ದಿನವಾಗಿದೆ. ನಿಗದಿತ ಸಮಯದೊಳಗೆ ತೆರಿಗೆ ಪಾವತಿಸದಿದ್ದರೆ, ಜಿಬಿಎ ಕಾಯ್ದೆಯ ಪ್ರಕಾರ ಆಸ್ತಿಗಳನ್ನು ಜಪ್ತಿ ಮಾಡಲಾಗುವುದು. ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ನೋಟಿಸ್​​​ನಲ್ಲಿ ತಿಳಿಸಲಾಗಿದೆ. ಹರಾಜಿಗೆ ಸಂಬಂಧಿಸಿದ ಆಸ್ತಿಗಳ ಮತ್ತು ನೋಟಿಸ್‌ಗಳ ಪಟ್ಟಿಯನ್ನು ಜಿಬಿಎ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ

ಹರಾಜು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಆಸ್ತಿ ಮಾಲೀಕರು ತಕ್ಷಣವೇ ಬಾಕಿ ಇರುವ ಪೂರ್ಣ ತೆರಿಗೆಯನ್ನು ಪಾವತಿಸಬೇಕು ಎಂದು ಹೇಳಿದೆ. ಒಂದು ವೇಳೆ ನೀವು ತೆರಿಗೆ ಪಾವತಿಸದಿದ್ದರೆ, ನಿಮ್ಮ ಕಟ್ಟಡವು ಹರಾಜಾಗುವ ಸಾಧ್ಯತೆಯಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ತೆರಿಗೆ ಪಾವತಿಸದಿದ್ದಲ್ಲಿ ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಟ್ರೇಡ್ ಲೈಸೆನ್ಸ್ ನವೀಕರಣಕ್ಕೆ ಫೆಬ್ರವರಿ 28ರವರೆಗೆ ಗಡುವು

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಟ್ರೇಡ್ ಲೈಸೆನ್ಸ್ (ವ್ಯಾಪಾರ ಪರವಾನಗಿ) ನವೀಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಹೇಳಿಕೆಯನ್ನು ಕೂಡ ನೀಡಿದ್ದಾರೆ. ಟ್ರೇಡ್ ಲೈಸೆನ್ಸ್ ನವೀಕರಿಸಲು ಫೆಬ್ರವರಿ 28 ರವರೆಗೆ ಅವಕಾಶ ನೀಡಲಾಗಿದೆ. ಫೆಬ್ರವರಿ 28 ರೊಳಗೆ ಶುಲ್ಕ ಪಾವತಿಸುವ ವ್ಯಾಪಾರಸ್ಥರಿಗೆ ಯಾವುದೇ ದಂಡ ಇರುವುದಿಲ್ಲ.ಮಾರ್ಚ್ 1 ರಿಂದ ಮಾರ್ಚ್ 31 ರೊಳಗೆ ಪಾವತಿಸಿದರೆ, ಒಟ್ಟು ಶುಲ್ಕದ ಮೇಲೆ ಶೇ. 25 ರಷ್ಟು ದಂಡ ವಿಧಿಸಲಾಗುತ್ತದೆ. ಏಪ್ರಿಲ್ 1 ರ ನಂತರ ಶುಲ್ಕ ಪಾವತಿಸಿದರೆ, ಒಟ್ಟು ಶುಲ್ಕದ ಶೇ. 100 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಪರವಾನಗಿ ಶುಲ್ಕವನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಪಾವತಿಸಬೇಕು. ವ್ಯಾಪಾರಸ್ಥರ ಅನುಕೂಲಕ್ಕಾಗಿ ಒಂದೂವರೆ ವರ್ಷದ ಅವಧಿಗೆ ಲೈಸೆನ್ಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ವರದಿ: ಅರುಣ್​​ ಕುಮಾರ್ ಮೆಟ್ರೋ 

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Tue, 3 February 26

ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ಪ್ರತಿಕ್ರಿಯೆ
ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ