AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ

ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ-ದಕ್ಷಿಣ ಭಾರತದ ನಡುವೆ ಭಾಷಾ ಸಂಘರ್ಷ ತಾರಕಕ್ಕೇರಿದೆ. ಹಿಂದಿ ಹೇರಿಕೆಯ ವಿರುದ್ಧದ ಚರ್ಚೆಯು ಬೆಂಗಳೂರಿನಲ್ಲಿಯೂ ಪ್ರತಿಧ್ವನಿಸುತ್ತಿದೆ. ಎಕ್ಸ್‌ನಲ್ಲಿನ ಪೋಸ್ಟ್ ಒಂದು ದಕ್ಷಿಣ ಭಾರತದ ಭಾಷೆಗಳನ್ನು 'ಕ್ಲೌನ್' ಎಂದು ಹಾಸ್ಯ ಮಾಡಿದೆ, ಇದು ಭಾಷಾ ಪ್ರೇಮ ಮತ್ತು ರಾಷ್ಟ್ರೀಯತೆಯ ವ್ಯಾಖ್ಯಾನದ ಬಗ್ಗೆ ಹೊಸ ವಿವಾದ ಹುಟ್ಟುಹಾಕಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ಭಾಷೆಗಳೂ ಸಮಾನ.

ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ
ವೈರಲ್​​ ಪೋಸ್ಟ್
ಅಕ್ಷಯ್​ ಪಲ್ಲಮಜಲು​​
|

Updated on:Feb 03, 2026 | 6:37 PM

Share

ಸಾಮಾಜಿಕ ಜಾಲತಾಣದಲ್ಲಿ ಭಾಷಾವಾರು (India language) ಗಲಾಟೆ ನಡೆಯತ್ತ ಇರುತ್ತದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಡುವೆ ಭಾಷೆಯ ವಿಷಯವಾಗಿ ಭಾರೀ ಜಗಳಗಳು ನಡೆದಿದೆ. ಬೆಂಗಳೂರಿನಲ್ಲೂ ಕೂಡ ಹಿಂದಿ ಏರಿಕೆ ಆಗುತ್ತಿದೆ ಎಂಬ ಕೂಗು ಕೂಡ ಕೇಳಿ ಬರುತ್ತಿದೆ. ಇದರ ನಡುವೆ ಎಕ್ಸ್​ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್​​ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಇದು ದಕ್ಷಿಣ ಹಾಗೂ ಉತ್ತರ ಭಾರತ ನಡುವಿನ ಭಾಷೆ ವಿಚಾರವಾಗಿ ಹೊಸ ವಿವಾದವನ್ನು ಹುಟ್ಟು ಹಾಕಿದೆ. ಈ ಪೋಸ್ಟ್​​ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ಉತ್ತರ ಭಾರತ ಮತ್ತು ದಕ್ಷಿಣ ಭಾರತ’ ನಡುವಿನ ಭಾಷಾ ಸಂಘರ್ಷ ಅಥವಾ ವಿವಾದದ ಒಂದು ಮುಖವನ್ನು ತೋರಿಸುತ್ತಿದೆ. ಈ ಮೀಮ್ (meme) ಮೂಲಕ ಉತ್ತರ ಭಾರತೀಯರು ತಮ್ಮನ್ನು ತಾವು ಕೇವಲ ಭಾರತೀಯರು ಎಂದು ಗುರುತಿಸಿಕೊಳ್ಳುತ್ತಾರೆ ಮತ್ತು ಹಿಂದಿ-ಇಂಗ್ಲಿಷ್ ಬಳಸುತ್ತಾರೆ ಎಂಬ ಹೆಮ್ಮೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸಿದ್ದಾರೆ.

ಎಕ್ಸ್​​​ನಲ್ಲಿ ಹಂಚಿಕೊಂಡಿರುವ ಪೋಸ್ಟ್​​ನಲ್ಲಿ ದಕ್ಷಿಣ ಭಾರತದ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಮಾತನಾಡುವವರನ್ನು ‘ಕ್ಲೌನ್’ (clown) ಎಮೋಜಿಗಳ ತೋರಿಸಿದ್ದಾರೆ. ಈ ಮೂಲಕ ಭಾಷಾ ಪ್ರೇಮವನ್ನು ಹಾಸ್ಯದ ರೀತಿಯಲ್ಲಿ ಇಲ್ಲಿ ಪೋಸ್ಟ್​ನಲ್ಲಿ ಹಾಕಿದ್ದಾರೆ. ದಕ್ಷಿಣ ಭಾರತೀಯರು ಜೋಕರ್​​​ ಎಂಬ ರೀತಿಯಲ್ಲಿ ಇಲ್ಲಿ ಬಿಂಬಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಬಳಸುವುದರಿಂದ ಇಡೀ ದೇಶಕ್ಕೆ ಒಂದು ಸಾಮಾನ್ಯ ಭಾಷೆ ಸಿಗುತ್ತದೆ ಮತ್ತು ಅದು “ರಾಷ್ಟ್ರೀಯತೆಯ” ಸಂಕೇತ ಎಂದು ಹೇಳಲಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ (Federalism) ಪ್ರತಿಯೊಂದು ಭಾಷೆಯೂ ಸಮಾನ ಮತ್ತು ಗೌರವಾರ್ಹ. ತನ್ನ ಭಾಷೆಯನ್ನು ಪ್ರೀತಿಸುವುದು ಎಂದರೆ ದೇಶವನ್ನು ದ್ವೇಷಿಸುವುದು ಎಂದಲ್ಲ.

ಇಲ್ಲಿದೆ ನೋಡಿ ವೈರಲ್​ ಪೋಸ್ಟ್​:

ಇದರ ಜತೆಗೆ ಮತ್ತೊಂದು ಪೋಸ್ಟ್​​ನ್ನು ಕೂಡ ಹಂಚಿಕೊಳ್ಳಲಾಗಿದೆ. ಅದರಲ್ಲಿ ಭಾಷೆಯ ಬಗ್ಗೆ ಇರುವಷ್ಟೇ ಕಳಕಳಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಏಕಿಲ್ಲ ಎಂದು ಈ ಪೋಸ್ಟ್​​ನಲ್ಲಿ ಕೇಳಿದ್ದಾರೆ. ಇನ್ನು “ಏಕರೂಪತೆ” (Uniformity) ಕೇವಲ ಭಾಷೆಗೆ ಸೀಮಿತವಾಗದೆ, ಎಲ್ಲ ಧರ್ಮದವರಿಗೂ ಸಮಾನ ಕಾನೂನು ಮತ್ತು ಸ್ವಾಯತ್ತತೆ ಸಿಗುವಲ್ಲಿಯೂ ಇರಬೇಕು. ಸಾಂಸ್ಕೃತಿಕ ಹೆಮ್ಮೆಯು ಅಂಧಾಭಿಮಾನವಾಗಬಾರದು. ಭಾಷೆಯ ಜೊತೆಗೆ ನೀವು ಹೇಳಿದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಬಗ್ಗೆಯೂ ಸುಸಂಬದ್ಧವಾದ ಚರ್ಚೆ ನಡೆಯುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ ಎಂದು ಈ ಪೋಸ್ಟ್​​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಯುವತಿಯರೇ ನಿಮ್ಮ ಖಾಸಗಿ ಫೋಟೋ ಇಟ್ಟುಕೊಂಡು ಯಾರಾದರೂ ಬ್ಲ್ಯಾಕ್‌ಮೇಲ್​​​ ಮಾಡುತ್ತಿದ್ದಾರ? ಹೀಗೆ ಮಾಡಿದ್ರೆ ಸಾಕು

ಇನ್ನು ಈ ಬಗ್ಗೆ ಉತ್ತರ ಭಾರತದ ಪಂಜಾಬ್ ಹಾಗೂ ಈಶಾನ್ಯ ಭಾರತದ ಪಶ್ಚಿಮ ಬಂಗಾಳದ ರಾಜ್ಯದ ಜನರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಬಂಗಾಳಿಗಳು ಹಿಂದಿ ಅಲ್ಲ, ಬಂಗಾಳಿ ಮಾತನಾಡುತ್ತಾರೆ. ನಾವು ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯಾಗಿ ಬಳಸಿಕೊಂಡು ನಮ್ಮ ದೇಶವನ್ನು ಮತ್ತೆ ಒಗ್ಗೂಡಿಸಬೇಕು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಅದೇ ರೀತಿ ಪಂಜಾಬ್‌ನಲ್ಲಿ ನಾವು ಪಂಜಾಬಿ ಮಾತನಾಡುತ್ತೇವೆ ಎಂದಿದ್ದಾರೆ. ಇನ್ನು ಈ ಪೋಸ್ಟ್​​ಗೆ ಕಮೆಂಟ್​​ನಲ್ಲಿ ಮೊತ್ತೊಂದು ಪೋಸ್ಟ್​​ನ್ನು ಕಮೆಂಟ್​ ಮಾಡಿದ್ದಾರೆ.  ಹಿಂದಿಯವರು ಹಾಗಾಗಿ ನೀವು ಪಾಕಿಸ್ತಾನದ ಹಿಂದಿ ಹಾಗೂ ಉರ್ದು ಮಾತನಾಡಿ,  ಪಶ್ಚಿಮ ಬಂಗಾಳ ಸೇರಿದಂತೆ ದಕ್ಷಿಣ ಭಾರತೀಯರು ನಿಜವಾದ ಭಾರತೀಯರು ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:37 pm, Tue, 3 February 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ