AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿಯರೇ ನಿಮ್ಮ ಖಾಸಗಿ ಫೋಟೋ ಇಟ್ಟುಕೊಂಡು ಯಾರಾದರೂ ಬ್ಲ್ಯಾಕ್‌ಮೇಲ್​​​ ಮಾಡುತ್ತಿದ್ದಾರ? ಹೀಗೆ ಮಾಡಿದ್ರೆ ಸಾಕು

ಮಹಿಳೆಯರ ಡಿಜಿಟಲ್ ಸುರಕ್ಷತೆಗಾಗಿ ಪೊಲೀಸರೊಬ್ಬರು ಹೊಸ ತಂತ್ರಗಳನ್ನು ಹಂಚಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ನಿಮ್ಮ ಫೋಟೋಗಳನ್ನು ದುರ್ಬಳಕೆ ಮಾಡಿ ಬ್ಲಾಕ್‌ಮೇಲ್ ಮಾಡಿದರೆ, ಭಯಪಡುವ ಅಗತ್ಯವಿಲ್ಲ. stopncii.org ಬಳಸಿ ಚಿತ್ರಗಳನ್ನು ತೆಗೆದುಹಾಕಬಹುದು. ಅಲ್ಲದೆ, ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ಅನಾಮಧೇಯವಾಗಿ ದೂರು ಸಲ್ಲಿಸಬಹುದು. ಇದು ಮಹಿಳೆಯರಿಗೆ ಸೈಬರ್ ಕಿರುಕುಳದಿಂದ ರಕ್ಷಣೆ ನೀಡಲು ಮತ್ತು ಸುರಕ್ಷಿತವಾಗಿರಲು ಸಹಕಾರಿ.

ಯುವತಿಯರೇ ನಿಮ್ಮ ಖಾಸಗಿ ಫೋಟೋ ಇಟ್ಟುಕೊಂಡು ಯಾರಾದರೂ ಬ್ಲ್ಯಾಕ್‌ಮೇಲ್​​​ ಮಾಡುತ್ತಿದ್ದಾರ? ಹೀಗೆ ಮಾಡಿದ್ರೆ ಸಾಕು
ಸಾಂದರ್ಭಿಕ ಚಿತ್ರ Image Credit source: pinterest
ಅಕ್ಷಯ್​ ಪಲ್ಲಮಜಲು​​
|

Updated on:Feb 03, 2026 | 2:50 PM

Share

ಸೋಶಿಯಲ್​​ ಮೀಡಿಯಾದಲ್ಲಿ ಹುಡುಗಿಯರ ಡಿಫೇಕ್​ ಮಾಡಿದ ಅಥವಾ ದ್ವೇಷಕ್ಕಾಗಿ ಖಾಸಗಿ ಫೋಟೋಗಳನ್ನು ಹಾಕಿ ಬ್ಲ್ಯಾಕ್‌ಮೇಲ್​​​ ಮಾಡಿರುವ ಅದೆಷ್ಟೋ ಘಟನೆಗಳು ನಡೆದಿದೆ. ಇದರಿಂದ ಸುಮಾರು ಮಹಿಳೆಯರು ಹಾಗೂ ಹುಡುಗಿಯರು (Women’s Digital Safety) ಜೀವನ ಕಳೆದುಕೊಂಡಿರುವ ನಿದರ್ಶನಗಳು ಕೂಡ ನಮ್ಮ ಕಣ್ಮುಂದೆ ಇದೆ. ಅದನ್ನು ತಡೆಯಲು ಹಾಗೂ ಮಹಿಳೆಯ ಡಿಜಿಟಲ್​​ ಸುರಕ್ಷತೆಗಾಗಿ ಹೊಸ ತಂತ್ರವೊಂದನ್ನು ಪೊಲೀಸರೊಬ್ಬರು ಪಾಡ್‌ಕಾಸ್ಟ್​​​ನಲ್ಲಿ ಹೇಳಿದ್ದಾರೆ. ಇದೀಗ ಈ ಬಗ್ಗೆ ಎಕ್ಸ್​​ ಖಾತೆಯಲ್ಲಿ ಪೂರ್ಣಿಮಾ ಎಂಬುವವರು ಹಂಚಿಕೊಂಡಿದ್ದಾರೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳು ನಿಮ್ಮ ಫೋಟೋ ಅಥವಾ ವೀಡಿಯೊಗಳನ್ನು ಬಳಸಿ ಯಾರಾದರೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರೆ ಅಥವಾ ಬೆದರಿಕೆ ಹಾಕುತ್ತಿದ್ದರೆ, ಭಯಪಡುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.

ನಿಮ್ಮ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ತಡೆಯಲು stopncii.org ಎಂಬ ವೆಬ್​​​ ಸೈಟ್​​​​ ಬಳಸಿಕೊಳ್ಳಬಹುದು. ಇಲ್ಲಿ ನಿಮ್ಮ ಕೇಸ್ ದಾಖಲಿಸಿ ಮತ್ತು ಯಾವ ಫೋಟೋಗಳ ಬಗ್ಗೆ ಆತಂಕವಿದೆಯೋ ಅವುಗಳನ್ನು ಅಪ್‌ಲೋಡ್ ಮಾಡಬಹುದು. ಸಾಮಾನ್ಯವಾಗಿ 24 ರಿಂದ 48 ಗಂಟೆಗಳೊಳಗೆ ಅಂತಹ ಚಿತ್ರಗಳನ್ನು ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗುತ್ತದೆ.ನಿಮ್ಮ ಫೋಟೋ ಅಶ್ಲೀಲವಾಗಿಲ್ಲದಿದ್ದರೂ, ಅದು ನಿಮ್ಮ ವೈಯಕ್ತಿಕ ಫೋಟೋ ಆಗಿದ್ದರೆ ಅದನ್ನು ಡಿಲೀಟ್ ಮಾಡಿಸುವ ಹಕ್ಕು ನಿಮಗಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಇದು ಹೇಗೆ ಕೆಲಸ ಮಾಡುತ್ತದೆ?

ನೀವು ಇಲ್ಲಿ ಕೇಸ್ ದಾಖಲಿಸಿದ ನಂತರ, ಆ ಫೋಟೋಗಳನ್ನು ಅಪ್‌ಲೋಡ್ ಮಾಡಿದರೆ, ಅವುಗಳ ‘ಡಿಜಿಟಲ್ ಫಿಂಗರ್‌ಪ್ರಿಂಟ್’ (Hash) ಸಿದ್ಧವಾಗುತ್ತದೆ. ನಂತರ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಂತಹ ಸಂಸ್ಥೆಗಳು ಆ ಫೋಟೋಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ಗಳಿಂದ 24 ರಿಂದ 48 ಗಂಟೆಗಳೊಳಗೆ ತೆಗೆದುಹಾಕುತ್ತವೆ. ನಿಮ್ಮ ಮೂಲ ಫೋಟೋಗಳನ್ನು ಅವರು ಸಂಗ್ರಹಿಸುವುದಿಲ್ಲ, ಕೇವಲ ಅದರ ತಾಂತ್ರಿಕ ಕೋಡ್ ಅನ್ನು ಮಾತ್ರ ಬಳಸುತ್ತಾರೆ.

ಇದನ್ನೂ ಓದಿ: ಭಾರತದ ಕಾನೂನು ಅನುಸರಿಸಲು ಆಗಲ್ಲವೆಂದರೆ ಇಲ್ಲಿಂದ ನಿರ್ಗಮಿಸಿ: ವಾಟ್ಸಾಪ್ ವಿರುದ್ಧ ಸುಪ್ರೀಂ ಎಚ್ಚರಿಕೆ

ಸೈಬರ್ ಕ್ರೈಮ್ ಪೋರ್ಟಲ್

ಭಾರತ ಸರ್ಕಾರದ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ “Women Anonymous” (suspicious link removed) ಎಂಬ ವಿಶೇಷ ಸೌಲಭ್ಯವಿದೆ. ಇದರ ಮೂಲಕ ನೀವು ನಿಮ್ಮ ಹೆಸರನ್ನು ಹೇಳದೆಯೇ ದೂರು ದಾಖಲಿಸಬಹುದು. ದೂರಿಗೆ ಪೂರಕವಾಗಿ ಫೋಟೋಗಳು, ಕಾಲ್ ರೆಕಾರ್ಡಿಂಗ್, ಫೋನ್ ಸಂಖ್ಯೆ ಅಥವಾ ಸ್ಕ್ರೀನ್‌ಶಾಟ್‌ಗಳಂತಹ ಕನಿಷ್ಠ 2-3 ಸಾಕ್ಷ್ಯಗಳನ್ನು ನೀಡಬೇಕಾಗುತ್ತದೆ. 14 ವರ್ಷದೊಳಗಿನ ಮಕ್ಕಳು ಯಾವುದೇ ರೀತಿಯ ಕಿರುಕುಳ ಅಥವಾ ಶೋಷಣೆಗೆ ಒಳಗಾಗುತ್ತಿದ್ದರೆ, ಅವರ ಪರವಾಗಿ ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಯಾರಾದರೂ ದೂರು ನೀಡಬಹುದು. ಸೈಬರ್ ಅಪರಾಧಿಗಳ ಗುರಿ ನಿಮ್ಮನ್ನು ಹೆದರಿಸುವುದೇ ಆಗಿರುತ್ತದೆ. ಬೆದರಿಕೆಗೆ ಮಣಿದು ಹಣ ಅಥವಾ ಹೆಚ್ಚಿನ ಫೋಟೋಗಳನ್ನು ನೀಡಬೇಡಿ. ಯಾವುದೇ ತುರ್ತು ಸಂದರ್ಭದಲ್ಲಿ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.

ದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Tue, 3 February 26

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ