ಬೆಂಗಳೂರು: ಭಾರತೀಯ ಭೂವಿಜ್ಞಾನ ಸರ್ವೇಕ್ಷಣೆಗೆ (Geological Survey of India Laboratory -ಜಿಎಸ್‌ಐ) ಸೇರಿದ ಅತ್ಯಾಧುನಿಕ ಪ್ರಯೋಗಾಲಯವನ್ನು ಶುಕ್ರವಾರ ಉದ್ಘಾಟಿಸಲಾಯಿತು. ಈ ಪ್ರಯೋಗಾಲಯವನ್ನು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi) ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ (ಕರ್ನಾಟಕ ಸರ್ಕಾರ) ಸಚಿವರಾದ ಹಾಲಪ್ಪ ಆಚಾರ್, ಸಂಸದ ತೇಜಸ್ವಿ ಸೂರ್ಯ ಮತ್ತು ಗಣಿ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಪ್ರಯೋಗಾಲಯವು ಭೂವಿಜ್ಞಾನ ಸರ್ವೇಕ್ಷಣೆ ಸೇರಿದಂತೆ ದೇಶಾದ್ಯಂತ ಭೂವೈಜ್ಞಾನಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಇಲಾಖೆಗಳಿಗೆ ಸಹಕಾರಿಯಾಗಲಿದೆ.
ಭೂವಿಜ್ಞಾನ ಸರ್ವೇಕ್ಷಣೆ ಪ್ರಯೋಗಾಲಯದ ವೈಶಿಷ್ಟ್ಯತೆ ಏನೇನು?
ಭೂವಿಜ್ಞಾನ ಸರ್ವೇಕ್ಷಣ ಇಲಾಖೆ ಭಾರತದ ಅತಿ ಹಳೆಯ ವೈಜ್ಞಾನಿಕ ಸಂಸ್ಥೆಯಾಗಿದ್ದು 1851ರಲ್ಲಿ ಆರಂಭವಾಗಿತ್ತು. ಗಣಿ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಭೂ ಸರ್ವೇಕ್ಷಣೆ ಸೇರಿದಂತೆ ಭೂಮಿಯ ಕುರಿತ ವಿವಿಧ ಅಧ್ಯಯನಗಳನ್ನು ನಡೆಸುತ್ತದೆ. ಇದು ಸರ್ಕಾರಕ್ಕೆ ಭೂವಿಜ್ಞಾನದ ಕುರಿತ ಮಾಹಿತಿ ಕೊಡುವ ಪ್ರಮುಖ ಸಂಸ್ಥೆ. ಜೊತೆಗೆ ಉಕ್ಕು, ಕಲ್ಲಿದ್ದಲು, ವಿವಿಧ ರೀತಿಯ ಖನಿಜಗಳ ಗಣಿಗಾರಿಕೆ ಸಂಬಂಧಿತ, ವಿದ್ಯುತ್ ಕೈಗಾರಿಕೆಗಳಿಗೆ, ಅಂತಾರಾಷ್ಟ್ರೀಯ ಭೂವೈಜ್ಞಾನಿಕ ವೇದಿಕೆಗಳಿಗೆ ಮಾಹಿತಿಯನ್ನು ನೀಡುತ್ತದೆ.
ಸದ್ಯ ಬೆಂಗಳೂರಿನಲ್ಲಿ ಭಾರತದ ಅಗತ್ಯಕ್ಕೆ ತಕ್ಕಂತೆ ನಿರ್ಮಾಣವಾಗಿರುವ ಅತ್ಯಾಧುನಿಕ ಪ್ರಯೋಗಾಲಯವಾಗಿದ್ದು, ಸಂಶೋಧನೆ, ವಿಶ್ಲೇಷಣೆಗಳಿಗೆ ಸಂಬಂಧಿಸಿ ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ. ಇದು ದೇಶದ ಭೂ ವೈಜ್ಞಾನಿಕ ಸಂಶೋಧನೆಗಳಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ.
In Bengaluru, inaugurated Laboratory Complex of @GeologyIndia. MP @Tejasvi_Surya, Minister of Mines & Geology @HalappaAchar were also present.
New complex houses state-of-the-art instruments for advanced & sophisticated analysis. pic.twitter.com/WU6u6z8ckO
— Pralhad Joshi (@JoshiPralhad) July 1, 2022