ಮೊಟ್ಟ ಮೊದಲ ಭಾರಿಗೆ ಆರೋಗ್ಯ ಇಲಾಖೆಯಿಂದ ವಿನೂತನ ಪ್ರಯೋಗ: ವೃತ್ತಿ ಪರತೆ ಕುರಿತು ಕೋರ್ಸ್ ಪರಿಚಯ
ವೈದ್ಯಕೀಯ ವಿದ್ಯಾರ್ಥಿಗಳು ಕೇವಲ ವೈದ್ಯಕೀಯ ಚಿಕಿತ್ಸೆ ಬಗ್ಗೆ ಮಾತ್ರ ತಿಳಿದುಕೊಳ್ಳದೆ ಈ ಕೋರ್ಸ್ ಮುಖೇನ ಆಸ್ಪತ್ರೆ ನಿರ್ವಹಣೆ ಬಗ್ಗೆಯೂ ತಿಳಿವಳಿಕೆ ಹೊಂದಬಹುದಾಗಿದೆ. ಕೊರೊನಾ ಹರಡುವಿಕೆ ಬೆಂಗಳೂರು ಸೇರಿ ನಗರ ಪ್ರದೇಶದಲ್ಲಿ ಹೆಚ್ಚುತ್ತಿದೆ.
ಬೆಂಗಳೂರು: ಮೊಟ್ಟ ಮೊದಲ ಭಾರಿಗೆ ಆರೋಗ್ಯ ಇಲಾಖೆಯಿಂದ (Department of Health) ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ದೇಶದಲ್ಲಿ ಪ್ರಪ್ರಥಮ ಭಾರಿಗೆ ವೃತ್ತಿ ಪರತೆಯನ್ನ ಯಾವ ತರ ಕಾಪಾಡಬೇಕು ಅನ್ನೋ ಕೋರ್ಸ್ನ್ನ ಆರೋಗ್ಯ ಇಲಾಖೆ ಪರಿಚಯಿಸುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಮಾಹಿತಿ ಕೊಟ್ಟಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಸರ್ವಾಗಿಣ ಮಾರ್ಪಾಡು ಮಾಡಲು ಈ ಕೋರ್ಸ್ ಸಹಕಾರಿಯಾಗಲಿದ್ದು, ಜನರಿಗೆ ಇದರಿಂದ ಉತ್ಕೃಷ್ಟ ಮಟ್ಟದ ಆರೋಗ್ಯ ಸೇವೆ ಸಿಗುತ್ತೆ. ಮೊದಲನೇ ಬ್ಯಾಚ್ ಅಲ್ಲಿ 160ಜನ ಮಾರ್ಕೆಟ್ ಮಾಡ್ದೆ ನೋಂದಣಿ ಮಾಡಿದ್ದಾರೆ. ಹೊರದೇಶದಿಂದ ಕೂಡ ನೋಂದಣಿ ಮಾಡಿ ಕೊಂಡಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು, ರಾಜ್ಯ ಪ್ರೋಗ್ರಾಮ್ ಅಧಿಕಾರಿಗಳಿಗೆ ಅನುಕೂಲಕರವಾಗಿದೆ. ಪ್ರೊಫೆಷನಲಿ ಒಂದು ಆಸ್ಪತ್ರೆಯ ನಿರ್ವಹಣೆಗೆ ಆರ್ಥಿಕತೆ ಡಾಟಾ ಪ್ರತಿಯೊಂದು ತಿಳಿವಳಿಕೆ ಅನಿವಾರ್ಯವಾಗಿದ್ದು, ಈ ತಿಳಿವಳಿಕೆಯನ್ನು ಈ ಕೋರ್ಸ್ ಕೊಡುತ್ತೆ. ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೆ ಕೂಡ ಈ ಕೋರ್ಸ್ ಸಹಕಾರಿ ಎಂದು ಹೇಳಿದರು.
ವೈದ್ಯಕೀಯ ವಿದ್ಯಾರ್ಥಿಗಳು ಕೇವಲ ವೈದ್ಯಕೀಯ ಚಿಕಿತ್ಸೆ ಬಗ್ಗೆ ಮಾತ್ರ ತಿಳಿದುಕೊಳ್ಳದೆ ಈ ಕೋರ್ಸ್ ಮುಖೇನ ಆಸ್ಪತ್ರೆ ನಿರ್ವಹಣೆ ಬಗ್ಗೆಯೂ ತಿಳಿವಳಿಕೆ ಹೊಂದಬಹುದಾಗಿದೆ. ಕೊರೊನಾ ಹರಡುವಿಕೆ ಬೆಂಗಳೂರು ಸೇರಿ ನಗರ ಪ್ರದೇಶದಲ್ಲಿ ಹೆಚ್ಚುತ್ತಿದೆ. ಈ ವಿಚಾರವನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣನೆ ಮಾಡಿದೆ. TAC ಮಾಸ್ಕ್ ಬಗ್ಗೆ ಸಲಹೆ ಕೊಟ್ಟಿದೆ, ಜನ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಆಗ ದಂಡ ಸಹಿತ ಮಾಸ್ಕ್ನ್ನು ಅವೊಯ್ಡ್ ಮಾಡಬಹುದು. ಸರ್ಕಾರ ಒಬ್ಬ ರೋಗಿಯ ಚಿಕಿತ್ಸೆ ವೆಚ್ಚ ವಹಿಸಿದ ಮೇಲೆ ಖಾಸಗಿ ಆಸ್ಪತ್ರೆ ತಗೊಳ್ಳೋ ಹಾಗಿಲ್ಲ. ಒಂದೊಮ್ಮೆ ತಗೊಂಡಿದ್ರೆ ವಾಪಸ್ ಅವರ ಖಾತೆಗೆ ಹಾಕಲೇಬೇಕು ಎಂದರು.
ಕೊರೋನಾ ಆತಂಕ ಪಡೋ ಅಗತ್ಯವಿಲ್ಲ
ಕೊರೊನಾ ಚಿಕಿತ್ಸೆ ದರ ಏರಿಕೆ ವಿಚಾರವಾಗಿ ಮಾತನಾಡಿದ್ದು, ಈ ವಿಚಾರವಾಗಿ ಖಾಸಗಿ ಆಸ್ಪತ್ರೆ ಹಲವು ಬೇಡಿಕೆಗಳನ್ನು ಆರೋಗ್ಯ ಇಲಾಖೆ ಮುಂದಿಟ್ಟಿದೆ. ಚಿಕಿತ್ಸೆ ಕೊಡಲು ಮೆಡಿಸಿನ್ ದರ ಹೀಗೆ ದರ ಏರಿಕೆಯ ಎಫೆಕ್ಟ್ ಆಸ್ಪತ್ರೆಗೆ ಸಹ ತಟ್ಟಿದೆ. ಹೀಗಾಗಿ ದರ ಪರಿಷ್ಕರಣೆಯ ಬೇಡಿಕೆಯನ್ನು ಇಟ್ಟಿವೆ. ದರ ಪರಿಷ್ಕರಣೆಗೆ ಸಂಬಂಧಿಸಿದ ಹಾಗೇ ಚಿಕಿತ್ಸೆ ಕೊಡೋದಕ್ಕೆ ನೆರವಾಗುತ್ತದೆ ಅಂತ ಬೇಡಿಕೆ ಇಟ್ಟಿವೆ. ಈ ಸಂಬಂಧ ಪಟ್ಟ ಹಾಗೇ ಸಮಿತಿ ರಚನೆಯಾಗಿದೆ. ಶೀಘ್ರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ತಿಳಿಸ್ತೇವೆ. ಕೊರೋನಾ ಆತಂಕ ಪಡೋ ಅಗತ್ಯವಿಲ್ಲ ಒಂದು ಕಾಲಮಾನಕ್ಕೆ ಬರುತ್ತೆ ಹೋಗುತ್ತೆ. ಇದೊಂದು ಇನ್ಫೆಕ್ಷನ್ ತರ ನೋಡಬೇಕಾಗುತ್ತದೆ ಅಷ್ಟೇ. ಸರಳವಾಗಿ ಒಂದು ಮಾಸ್ಕ್ ಹಾಕಿ ಇದರ ಪರಿಹಾರ ಕಂಡು ಕೊಳ್ಳೋಬೇಕು. ಕೇಂದ್ರ ಸರ್ಕಾರ ICMR ಜೊತೆ ನಿಖರ ಸಂಪರ್ಕ ಹೊಂದಿದೆ. ಇಲ್ಲಿಯವರೆಗೂ ಕೂಡ ಹೊಸ ಪ್ರಭೇದ ಯಾವುದು ಪತ್ತೆಯಾಗಿಲ್ಲ. ಒಂದೊಮ್ಮೆ ಅಂತಹ ಪ್ರಭೇದ ಕಂಡು ಬಂದಲ್ಲಿ ಮಾಹಿತಿ ಕೊಡುತ್ತೇವೆ. ಸದ್ಯ ವೈರಸ್ ಇಂದ ಯಾವುದೇ ಆತಂಕಕಾರಿ ವಾತಾವರಣ ನಿರ್ಮಾಣ ಆಗಿಲ್ಲ ಎಂದು ಹೇಳಿದರು.
ಡಾ. ಬಿಸಿ ರಾಯ್ ಅವರ ಜನ್ಮ ದಿನವನ್ನ ವೈದ್ಯರ ದಿನವನ್ನಾಗಿ ಆಚರಣೆ
ಜುಲೈ 7ನೇ ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ದೊಡ್ಡದಾಗಿ ಕಾರ್ಯಕ್ರಮ ಮಾಡುತ್ತೇವೆ. ವೈದ್ಯಕೀಯ ವಲಯದಲ್ಲಿ ಸೇವೆ ಸಲ್ಲಿಸಿದವರನ್ನ ಗೌರವಿಸುವ ಕೆಲಸ ಮಾಡಲಿದ್ದೇವೆ. ಡಾ. ಬಿಸಿ ರಾಯ್ ಅವರ ಜನ್ಮ ದಿನವನ್ನ ವೈದ್ಯರ ದಿನವನ್ನಾಗಿ ಆಚರಿಸ್ತಿದ್ದೇವೆ. ಬಿಸಿ ರಾಯ್ ಅವರಿಗೆ ವೈದ್ಯಕೀಯ ವೃತ್ತಿಯಲ್ಲಿ ಪ್ಯಾಷನ್ ಇತ್ತು. ಅವರು ಮುಖ್ಯಮಂತ್ರಿ ಆದಾಗಲೂ ರೋಗಿಗಳನ್ನ ಪರೀಕ್ಷಿಸಲು ಸಮಯ ನೀಡ್ತಿದ್ದರು. ವೈದ್ಯರ ವೃತ್ತಿ ವ್ಯಕ್ತಿಯ ಆಯುಷ್ಯವನ್ನು ವೃದ್ದಿ ಮಾಡುವುದು, ನೋವನ್ನ ಕಡಿಮೆ ಮಾಡುವುದು, ದೇವರು ಜನ್ಮ ನೀಡುತ್ತಾನೆ, ವೈದ್ಯ ಆಯುಷ್ಯ ಹೆಚ್ಚಿಸುವ ಕೆಲಸ ಮಾಡುತ್ತಾನೆ. ವೈದ್ಯರನ್ನ ದೇವರ ರೀತಿ ಕಾಣುತ್ತಾರೆ.
ಇಂದು ಹೊಸದಾಗಿ ಹೆಲ್ತ್ ಕೇರ್ ಮ್ಯಾನೇಜ್ಮೆಂಟ್ ಕೋರ್ಸ್ ಕೂಡ ಆರಂಭ ಮಾಡಿದ್ದೇವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಹೊಸ ಕೋರ್ಸ್ ಶುರು ಮಾಡಲಾಗಿದೆ. ಕೊರೋನಾ ವೇಳೆ 2500 ವೈದ್ಯರ ನೇಮಕ ಮಾಡಿದ್ವಿ. ನಮ್ಮಲ್ಲಿ ಇರುವ ಮೂಲಭೂತ ಸೌಕರ್ಯಗಳನ್ನ ಇಟ್ಟುಕೊಂಡು ಕೋವಿಡ್ ಎದುರಿಸಿದ್ದೇವೆ. ಪ್ರತಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ತೆರೆಯುವ ಅಭಿಲಾಷೆ ಇದೆ. ಆದರೆ ಗುಣಮಟ್ಟ ಉಳಿಸಿಕೊಂಡು ಕೆಲಸ ಮಾಡಬೇಕಿದೆ. ಕೆಲವೆಡೆ ವೈದ್ಯರ ಮೇಲೆ ಹಲ್ಲೆ ಮಾಡುವ ಘಟನೆಗಳು ನಡೆಯುತ್ತಿರುತ್ತವೆ. ನಾನು ಆರೋಗ್ಯ ಸಚಿವನಾಗಿ ಇದನ್ನ ಖಂಡಿಸುತ್ತೇವೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕೆಲಸ ಮಾಡಲಾಗತ್ತೆ. ವೈದ್ಯರು ನಿದ್ದೆ ಬಿಟ್ಟು, ಕುಟುಂಬ ಬಿಟ್ಟು ನಿರಂತರವಾಗಿ ಕೆಲಸ ಮಾಡ್ತಿರ್ತಾರೆ. ಹೀಗಾಗಿ ಜನರ ಸಹಕಾರ ಕೂಡ ಬೇಕಾಗಿದೆ. ವೈದ್ಯರ ಅನೇಕ ಬೇಡಿಕೆಗಳು ಇವೆ ಅವುಗಳನ್ನು ಈಡೇಸುವ ಕಡೆ ಸರ್ಕಾರ ಗಮನ ಹರಿಸಲಿದೆ. ವೈದ್ಯರು ಟೆಕ್ನಾಲಜಿ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಇತ್ತೀಚೆಗೆ ಹಲವಾರು ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ಇವೆ. ಇದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ವೈದ್ಯರು ಮಾಡಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.