ಇಂದು ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಮೈಸೂರು ಚಾಮುಂಡೇಶ್ವರಿಗೆ ವಿಶೇಷ ಪೂಜೆ: ಭಕ್ತರಿಗೆ ಹಾರ್ಲಿಕ್ಸ್ ಮೈಸೂರು ಪಾಕ್ ಪ್ರಸಾದ

ಎರಡು ವರ್ಷಗಳ ಬಳಿಕ ಆಷಾಡ ಮಾಸದಲ್ಲಿ ಶಕ್ತಿ ದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರಿಗೆ  ಅವಕಾಶ ಮಾಡಲಾಗಿದೆ. ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 01, 2022 | 12:08 PM

ಮೈಸೂರು: ಇಂದು ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ವಿಶೇಷ ಪೂಜೆ ಚಾಮುಂಡೇಶ್ವರಿ (Chamundeshwari) ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಎರಡು ವರ್ಷಗಳ ಬಳಿಕ ಆಷಾಡ ಮಾಸದಲ್ಲಿ ಶಕ್ತಿ ದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರಿಗೆ  ಅವಕಾಶ ಮಾಡಲಾಗಿದೆ. ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಲಲಿತ್ ಮಹಲ್ ಹೆಲಿಪ್ಯಾಡ್ ಮೈದಾನದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಇಂದು ತಾಯಿ ಚಾಮುಂಡೇಶ್ವರಿಗೆ ಲಕ್ಷ್ಮಿ ಅಲಂಕಾರ ಮಾಡಿದ್ದು, ಭಕ್ತರಿಗೆ ಹಾರ್ಲಿಕ್ಸ್ ಮೈಸೂರು ಪಾಕ್ ಪ್ರಸಾದ ವಿತರಿಸಲಾಗುತ್ತದೆ. ಮೈಸೂರು ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ 30 ಸಾವಿರ ಹಾರ್ಲಿಕ್ಸ್ ಮೈಸೂರು ಪಾಕ್ ಪ್ರಸಾದ ನಿನ್ನೆ ಸಿದ್ಧ ಪಡಿಸಲಾಗಿದೆ. ಮಾಹಿತಿ ಪ್ರಕಾರ 175 ಕೆಜಿ ಬೇಸನ್, 600 ಕೆಜಿ ಸಕ್ಕರೆ, 30 ಕೆಜಿ ಹಾರ್ಲಿಕ್ಸ್ ಹಾಗೂ 18 ಟಿನ್ ತುಪ್ಪ ಬಳಸಿ ಮೈಸೂರು ಪಾಕ್ ತಯಾರಿಸಲಾಗುತ್ತಿದೆ. 30 ನುರಿತ ಬಾಣಸಿಗರು ಮೈಸೂರು ಪಾಕ್ ತಯಾರಿಸಿದ್ದಾರೆ. ಮೈಸೂರು ಪಾಕ್ ಜೊತೆಗೆ 35 ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ಇರಲಿದೆ. ಸದ್ಯ ಚಾಮುಂಡಿ ಬೆಟ್ಟದಲ್ಲಿ  ಹಬ್ಬದ ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ: Cholesterol: ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಗೋಚರಿಸಿದರೆ ನೆಗ್ಲೆಕ್ಟ್​ ಮಾಡ್ಬೇಡಿ

Follow us on

Click on your DTH Provider to Add TV9 Kannada