Gold Silver Rate Today | ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿತ್ತು. ಇಂದು (ಬುಧವಾರ, ಜೂನ್ 16) ಕೆಲವೆಡೆ ಚಿನ್ನದ ದರ (Gold Price) ಇಳಿಕೆ ಕಂಡಿದ್ದರೆ ಇನ್ನು ಕೆಲವೆಡೆ ಏರಿಕೆಯತ್ತ ಸಾಗಿದೆ. ಬೆಂಗಳೂರು ನಗರದಲ್ಲಿ ದರ ಬದಲಾಗದೇ ಸ್ಥಿರವಾಗಿ ಉಳಿದಿದೆ. ಹಾಗಿದ್ದಾಗ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (Gold Silver Price) ಎಷ್ಟಿದೆ ಎಂಬುದನ್ನು ತಿಳಿಯೋಣ.
ಅದೆಷ್ಟೋ ವರ್ಷಗಳಿಂದ ಚಿನ್ನ (Yellow Metal) ಖರೀದಿಸಲೆಂದು ಹಣವನ್ನು ಕೂಡಿಡುತ್ತಾ ಬಂದಿರುತ್ತೇವೆ. ಮದುವೆ-ಸಮಾರಂಭಗಳಿಗೆ ಚಿನ್ನ ಖರೀದಿಸಿ ತೊಟ್ಟು ಖುಷಿ ಪಡುತ್ತೇವೆ. ಜತೆಗೆ ಕಷ್ಟ ಕಾಲದಲ್ಲಿ ನೆರವಾಗುವ ಚಿನ್ನ ಇಳಿಕೆಯತ್ತ ಸಾಗುವುದನ್ನೇ ಕಾಯುತ್ತಿರುತ್ತೇವೆ. ನೀವು ಕೂಡಿಟ್ಟ ಹಣಕ್ಕೆ ಆಭರಣ ಕೊಳ್ಳಬಹುದು ಅಂತನಿಸಿದರೆ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸಿ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ (Gold Rate in Bengaluru) 45,500 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,55,000 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,630 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,96,300 ರೂಪಾಯಿ ಇದೆ. ಬೆಳ್ಳಿ ದರ ಕೊಂಚ ಇಳಿಕೆ ಆಗಿದ್ದು, ಕೆಜಿ ಬೆಳ್ಳಿ ಬೆಲೆ 71,300 ರೂಪಾಯಿ ಇಳಿಕೆ ಆಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,850 ರೂಪಾಯಿಗೆ ಏರಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,48,500 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,010 ರೂಪಾಯಿಗೆ ಏರಿಕೆ ಆಗಿದ್ದು, 100 ಗ್ರಾಂ ಚಿನ್ನದ ದರ 5,00,100 ರೂಪಾಯಿಗೆ ಏರಿದೆ. ಅದೇ ರೀತಿ ಬೆಳ್ಳಿ ದರವೂ ಕೂಡಾ ಏರಿಕೆ ಆಗಿದ್ದು, ಕೆಜಿ ಬೆಳ್ಳಿ ಬೆಲೆ 76,100 ರೂಪಾಯಿಗೆ ಏರಿದೆ.
ದೆಹಲಿಯಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡೂ ಆಭರಣದ ಬೆಲೆಯು ಇಳಿಕೆ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,640 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,76,400 ರೂಪಾಯಿಗೆ ಇಳಿದಿದೆ. ಇನ್ನು, 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 51,790 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರ 5,17,900 ರೂಪಾಯಿಗೆ ಇಳಿದಿದೆ. ಅದೇ ರೀತಿ ಕೆಜಿ ಬೆಳ್ಳಿ ದರದಲ್ಲಿ 200 ರೂಪಾಯಿ ಇಳಿಕೆ ಬಳಿಕ 71,300 ರೂಪಾಯಿ ಇಳಿಕೆ ಆಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,590 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,75,900 ರೂಪಾಯಿ ಇದೆ. ಅದೇ ರೀತಿ ಕೆಜಿ ಬೆಳ್ಳಿ ದರ 71,300 ರೂಪಾಯಿಗೆ ಇಳಿಕೆ ಆಗಿದೆ.
ಹೈದರಾಬಾದ್ನಲ್ಲಿ ಇಂದು ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,500 ರೂಪಾಯಿ ನಿಗದಿ ಮಾಡಲಾಗಿದೆ. 100 ಗ್ರಾಂ ಚಿನ್ನಕ್ಕೆ 4,55,000 ರೂಪಾಯಿ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,630 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,96,300 ರೂಪಾಯಿ ಇದೆ. ಅದೇ ರೀತಿ ಕೆಜಿ ಬೆಳ್ಳಿ ಬೆಲೆ 200 ರೂಪಾಯಿ ಏರಿಕೆ ಕಂಡಿದ್ದು, ಕೆಜಿ ಬೆಳ್ಳಿ ಬೆಲೆ 76,100 ರೂಪಾಯಿಗೆ ಏರಿಕೆ ಆಗಿದೆ.
ಇದನ್ನೂ ಓದಿ:
Gold Rate Today: ಗ್ರಾಹಕರಿಗೆ ಖುಷಿಯೋ ಖುಷಿ; ಸತತ ಮೂರು ದಿನಗಳಿಂದ ಚಿನ್ನದ ದರ ಇಳಿಕೆ!
Published On - 9:19 am, Wed, 16 June 21