Sign In

By signing in or creating an account, you agree with Associated Broadcasting Company's Terms & Conditions and Privacy Policy.

Corona 3rd Wave: ಬೆಂಗಳೂರಿನಲ್ಲಿ 4,500 ಐಸಿಯು ಬೆಡ್​ಗಳನ್ನು ಸಿದ್ಧಪಡಿಸಿಕೊಳ್ಳಿ; ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆ

ಅಕ್ಟೋಬರ್ ಅಥವಾ ನವೆಂಬರ್​ನಿಂದ ಮೂರನೇ ಅಲೆ ಸಾಧ್ಯತೆಯಿದೆ. ಎರಡನೇ ಅಲೆಯ ವೇಳೆಯಲ್ಲಿ ಮಾಡಿದಂತೆ ಬೇಜವಾಬ್ದಾರಿ ಮಾಡಬೇಡಿ. ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಲ್ಲಿ ಸಾವು-ನೋವು ಹೆಚ್ಚಾಗುತ್ತದೆ.

Corona 3rd Wave: ಬೆಂಗಳೂರಿನಲ್ಲಿ 4,500 ಐಸಿಯು ಬೆಡ್​ಗಳನ್ನು ಸಿದ್ಧಪಡಿಸಿಕೊಳ್ಳಿ; ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: sandhya thejappa

Updated on:Jun 16, 2021 | 10:24 AM

ಬೆಂಗಳೂರು: ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ಹೆಚ್ಚು ಜವಾಬ್ದಾರಿಯಿಂದ ಇರಬೇಕು ಅಂತ ರಾಜ್ಯ ಸರ್ಕಾರಕ್ಕೆ ಈಗಾಗಲೇ ತಿಳಿಸಿದೆ. ಮೂರನೇ ಅಲೆ ಎದುರಿಸಲು ಐಸಿಯು ಬೆಡ್ ಸಿದ್ಧಪಡಿಸಿಕೊಳ್ಳಿ. ಬೆಂಗಳೂರಿನಲ್ಲಿ 4,500 ಐಸಿಯು ಬೆಡ್​ಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಇದೀಗ ತಜ್ಞರು ಸಲಹೆ ನೀಡಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್​ನಿಂದ ಮೂರನೇ ಅಲೆ ಸಾಧ್ಯತೆಯಿದೆ. ಎರಡನೇ ಅಲೆಯ ವೇಳೆಯಲ್ಲಿ ಮಾಡಿದಂತೆ ಬೇಜವಾಬ್ದಾರಿ ಮಾಡಬೇಡಿ. ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಲ್ಲಿ ಸಾವು-ನೋವು ಹೆಚ್ಚಾಗುತ್ತದೆ. ರಾಜ್ಯದಲ್ಲಿ ಸದ್ಯ 1,300 ಐಸಿಯು ಬೆಡ್​ಗಳು ಲಭ್ಯವಿದೆ. ಇದರ ಜೊತೆ ಬೆಂಗಳೂರನ್ನು ಹೊರತುಪಡಿಸಿ 1 ಸಾವಿರ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಜ್ಞರು ಹೇಳಿದ್ದಾರೆ.

ಬೆಡ್​ಗಳು ಎಲ್ಲಿ, ಎಷ್ಟಿದೆ? ಜಯನಗರ ಜನರಲ್ ಆಸ್ಪತ್ರೆಯಲ್ಲಿ 24 ಬೆಡ್​ಗಳು, ಸಿ.ವಿ.ರಾಮನ್ ಜನರಲ್ ಆಸ್ಪತ್ರೆಯಲ್ಲಿ 56, ಐಪಿಡಮಿಕ್ ಡಿಸೀಸ್ ಆಸ್ಪತ್ರೆಯಲ್ಲಿ 24 ಬೆಡ್​ಗಳಿವೆ.

ಹೆಚ್ಚುವರಿ ಬೆಡ್ ವ್ಯವಸ್ಥೆಗೆ ಸರ್ಕಾರದ ಸಿದ್ಧತೆ ರಾಜೀವ್ ಗಾಂಧಿ ಆಸ್ಪತ್ರೆ, ಕೆ.ಆರ್.ಪುರಂ ಜನರಲ್ ಆಸ್ಪತ್ರೆ ಹಾಗೂ ಯಲಹಂಕ ಜನರಲ್ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್ ಅಳವಡಿಕೆಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 190 ಬೆಡ್, ಕೆ.ಆರ್.ಪುರಂ ಜನರಲ್ ಆಸ್ಪತ್ರೆಯಲ್ಲಿ 58, ಯಲಹಂಕ ಜನರಲ್ ಆಸ್ಪತ್ರೆಯಲ್ಲಿ 17 ಬೆಡ್ ಹಾಕಲು ಸಿದ್ಧತೆ ನಡೆಸುತ್ತಿದೆ. ಇದಲ್ಲದೆ ಹೆಚ್.ಎಂ.ಟಿ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲದಲ್ಲಿ ಹೆಚ್ಚುವರಿ ಬೆಡ್​ಗಳಿಗೆ ವ್ಯವಸ್ಥೆ ಮಾಡಲಿದೆ.

ಬೆಂಗಳೂರಿನ ಇ.ಎಸ್.ಐ ಆಸ್ಪತ್ರೆಗಳಲ್ಲೂ ಎಕ್ಸಟ್ರಾ ಬೆಡ್ ಅಳವಡಿಕೆಗೆ ನಿರ್ಧಾರವಾಗಿದ್ದು, ರಾಜಾಜಿನಗರ, ಇಂದಿರಾನಗರ ಹಾಗೂ ಪೀಣ್ಯ ಇ.ಎಸ್.ಐ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್​ಗಳನ್ನು ಹಾಕಲು ಸಿದ್ಧತೆ ನಡೆಯುತ್ತಿದೆ.

ಇದನ್ನೂ ಓದಿ

ಬಿಗ್​ಬಾಸ್​​ ಮನೆಯೊಳಗೆ ಮತ್ತೆ ಹೋಗೋಕೆ ಬ್ಯಾಗ್​ ಪ್ಯಾಕ್ ಮಾಡಿದ ಸ್ಪರ್ಧಿಗಳು; ಒಳಹೋಗುವವರು ಬರೀ 11 ಮಂದಿ ಅಲ್ಲ!

ಜನರ ಮನೆ ಬಾಗಿಲಿಗೆ ಬಂದು ಲಸಿಕೆ ಹಾಕಲು ನಿರ್ಧಾರ; ಕಲಬುರಗಿ ಜಿಲ್ಲಾಡಳಿತದ ಯೋಜನೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾಥ್

(Covid Experts advised to Karnataka government to prepare 4,500 ICU beds in Bangalore in advance)

Published On - 10:23 am, Wed, 16 June 21

ಎಕ್ಸ್​ಪೋ ಉದ್ಘಾಟಿಸಿದ ಕಲಬುರಗಿ ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್​ಡಿ
ಎಕ್ಸ್​ಪೋ ಉದ್ಘಾಟಿಸಿದ ಕಲಬುರಗಿ ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್​ಡಿ
ವಕ್ಫ್ ಪ್ರತಿಭಟನೆ;ಬಂಗಾಳದ ಮುರ್ಷಿದಾಬಾದ್‌ನಲ್ಲಿ 110ಕ್ಕೂ ಹೆಚ್ಚು ಜನರ ಬಂಧನ
ವಕ್ಫ್ ಪ್ರತಿಭಟನೆ;ಬಂಗಾಳದ ಮುರ್ಷಿದಾಬಾದ್‌ನಲ್ಲಿ 110ಕ್ಕೂ ಹೆಚ್ಚು ಜನರ ಬಂಧನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ಕಂದಾಯ ಸಚಿವ ಮೆಟ್ರೋ ರೈಲಲ್ಲೂ ಒಬ್ಬಂಟಿಯಾಗಿ ಓಡಾಡುತ್ತಿರುತ್ತಾರೆ
ಕಂದಾಯ ಸಚಿವ ಮೆಟ್ರೋ ರೈಲಲ್ಲೂ ಒಬ್ಬಂಟಿಯಾಗಿ ಓಡಾಡುತ್ತಿರುತ್ತಾರೆ
ಕರ್ನಾಟಕವೀಗ ಪ್ರತಿಭಟನೆಗಳ ರಾಜ್ಯ, ಎಲ್ಲ ಮೂರು ಪಕ್ಷಗಳಿಂದ ಪ್ರತಿಭಟನೆ!
ಕರ್ನಾಟಕವೀಗ ಪ್ರತಿಭಟನೆಗಳ ರಾಜ್ಯ, ಎಲ್ಲ ಮೂರು ಪಕ್ಷಗಳಿಂದ ಪ್ರತಿಭಟನೆ!
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್​ ಕಾಲೆಳೆದ ಗರ್ಲ್ಸ್
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್​ ಕಾಲೆಳೆದ ಗರ್ಲ್ಸ್