Gold Silver Price Today | ಬೆಂಗಳೂರು: ಚಿನ್ನ ಖರೀದಿಸಬೇಕಂತಲೇ ಅದೆಷ್ಟೋ ವರ್ಷಗಳಿಂದ ಹಣ ಕೂಡಿಟ್ಟು ಬಂದಿರುತ್ತೀರಿ. ಇದೀಗ ನಿಧಾನವಾಗಿ ಎಲ್ಲಾ ಅಂಗಡಿಗಳ ಬಾಗಿಲುಗಳು ತೆರೆಯಲಾರಂಭಿಸಿವೆ. ಚಿನ್ನ(Gold Price) ಮತ್ತು ಬೆಳ್ಳಿ (Silver Price) ಕೊಳ್ಳುವ ಆಸೆ ಇದ್ದಾಗ ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಎಷ್ಟಿದೆ ಎಂದು ತಿಳಿಯಲೇ ಬೇಕು. ನಿನ್ನೆ ಚಿನ್ನಾಭರಣ ದರದಲ್ಲಿ ಕೊಂಚ ಏರಿಕೆ ಆಗಿತ್ತು. ಇಂದು (ಜುಲೈ 16, ಶುಕ್ರವಾರ) ದರದಲ್ಲಿ ಅಲ್ಪವೇ ಏರಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ದೈನಂದಿನ ದರ ಬದಲಾವಣೆಯಲ್ಲಿ ಹಾವು-ಏಣಿ ಆಟ ಆಡುತ್ತಿರುವುದು ಸರ್ವೇ ಸಾಮಾನ್ಯ. ನೀವು ಕೂಡಿಟ್ಟ ಹಣಕ್ಕೆ ಚಿನ್ನ, ಬೆಳ್ಳಿ ಕೊಳ್ಳಬೇಕು ಅಂದನಿಸಿದರೆ ದರ ವಿವರ ಇಲ್ಲಿದೆ.
ಚಿನ್ನ ಖರೀದಿಸಬೇಕು ಎಂಬ ಆಸೆ ಇರುವುದು ಸಹಜ. ಮನೆಯವರಿಗಾಗಿ ಗಿಫ್ಟ್ ಕೊಡುವ ಪ್ಲಾನ್ ಇರಬಹುದು, ಸ್ನೇಹಿತೆಗಾಗಿ ಸರ್ಪ್ರೈಸ್ ಪ್ಲಾನ್ ಮಾಡಿರಬಹುದು, ಪ್ರಿಯತಮೆಗೆ ಪ್ರೀತಿಯ ಉಡುಗೊರೆಯೇ ಆಗಿರಬಹುದು, ಅಮ್ಮನ ಸಂತೋಷಕ್ಕಾಗಿ ಚಿನ್ನದ ಸರ ಕೊಳ್ಳುವತ್ತ ಯೋಚಿಸಿರಬಹುದು, ಇಲ್ಲವೇ ಹೆಂಡತಿಗಾಗಿ ಚಿನ್ನ ಬಳೆಗಳನ್ನು ಮಾಡಿಸಿಕೊಡೋಣ ಎಂಬುದಾಗಿಯೂ ಆಸೆ ಇರಬಹುದು. ಇಷ್ಟೆಲ್ಲಾ ಯೋಚನೆ ಮಾಡಿ ಸಿದ್ಧತೆ ಮಾಡಿಕೊಂಡಿರುವಾಗ ಇಂದು ಮಾರುಕಟ್ಟೆಯಲ್ಲಿ ಆಭರಣದ ದರ ಎಷ್ಟಿದೆ ಎಂಬ ಕುತೂಹಲ ಇದ್ದೇ ಇರುತ್ತದೆ ಅಲ್ಲವೇ? ಇಲ್ಲಿದೆ ಸಂಪೂರ್ಣ ವಿವರ ಪರಿಶೀಲಿಸಿ.
ಚಿನ್ನದ ದರ ವಿವರ ಮಾಹಿತಿ
22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,150 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,51,500 ರೂಪಾಯಿ ಆಗಿದೆ. ದೈನಂದಿನ ದರ ಪರಿಶೀಲನೆಯಲ್ಲಿ 2,500 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,260 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,92,600 ರೂಪಾಯಿ ಇದೆ. ಸರಿಸುಮಾರು 2,700 ರೂಪಾಯಿ ಏರಿಕೆ ಕಂಡು ಬಂದಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಅಮ ಚಿನ್ನದ ದರ 45,760 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,57,600 ರೂಪಾಯಿ ಆಗಿದೆ. ಸುಮಾರು 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,910 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,99,100 ರೂಪಾಯಿ ಆಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,310 ರೂಪಾಯಿ ನಿದಿಯಾಗಿದ್ದರೆ 100 ಗ್ರಾಂ ಚಿನ್ನದ ದರ 4,73,100 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 51,610 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,16,100 ರೂಪಾಯಿಗೆ ಏರಿಕೆಯಾಗಿದೆ.
ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಅಮ ಚಿನ್ನದ ದರ 47,490 ರೂಪಾಯಿ ಆಗಿದೆ. 100 ಗ್ರಾಂ ಚಿನ್ನಕ್ಕೆ 4,74,900 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,490 ರೂಪಾಯಿ ಆಗಿದೆ. 100 ಗ್ರಾಂ ಚಿನ್ನಕ್ಕೆ 4,84,900 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ಬೆಳ್ಳಿ ದರ ವಿವರ
ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಏರಿಕೆ ಬಳಿಕ 69,700 ರೂಪಾಯಿ ನಿಗದಿಯಾಗಿದೆ. ಚೆನ್ನೈನಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಆ ಮೂಲಕ ಕೆಜಿ ಬೆಳ್ಳಿ ಬೆಲೆ 74,500 ರೂಪಾಯಿ ಹೊಂದಿದೆ. ದೆಹಲಿಯಲ್ಲಿ ಕೆಜಿ ಬೆಳ್ಳಿ ಬೆಲೆ 69,700 ರೂಪಾಯಿ ಆಗಿದೆ. ಸುಮಾರು 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಮುಂಬೈನಲ್ಲಿ ಕೆಜಿ ಬೆಳ್ಳಿ ಬೆಲೆ 69,700 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ಇದನ್ನೂ ಓದಿ:
Gold Rate Today: ಇಂದು ಅಲ್ಪವೇ ಏರಿದ ಚಿನ್ನದ ದರ; ವಿವಿಧ ನಗರಗಳಲ್ಲಿ ಆಭರಣದ ಬೆಲೆ ಎಷ್ಟಿದೆ? ಪರಿಶೀಲಿಸಿ
Gold Rate Today: ಇಂದು ಚಿನ್ನದ ದರದಲ್ಲಿ ಕೊಂಚ ಏರಿಕೆ; ಪ್ರಮುಖ ನಗರಗಳಲ್ಲಿ ಆಭರಣದ ಬೆಲೆ ಎಷ್ಟಿದೆ ತಿಳಿಯಿರಿ