Gold Silver Rate Today| ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು (ಜುಲೈ 3, ಶನಿವಾರ) ಏರಿಕೆಯಾಗಿದೆ. ಜುಲೈ ತಿಂಗಳ ಆರಂಭದಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ ನಿನ್ನೆ (ಶುಕ್ರವಾರ) ಆಭರಣಗಳ ಬೆಲೆ ಏರಿಕೆ ಆಗಿದ್ದು, ಇಂದು ಕೂಡ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಗ್ರಾಹಕರಲ್ಲಿ ಕೊಂಚ ಬೇಸರ ಮೂಡಿದೆ. ಇಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,220 ರೂಪಾಯಿ ಆಗಿದೆ. ಅಂತೆಯೇ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,200 ರೂಪಾಯಿ ಆಗಿದೆ. ಸರಿಸುಮಾರು 200 ರೂಪಾಯಿ ಏರಿಕೆಯಾಗಿದೆ. ಆದರೆ ಬೆಳ್ಳಿ ಬೆಲೆ ಇಂದು ಕೊಂಚ ಕುಸಿತ ಕಂಡಿದ್ದು, 1 ಕೆಜಿ ಬೆಳ್ಳಿಗೆ 68,500 ರೂಪಾಯಿ ಆಗಿದೆ. ಆ ಮೂಲಕ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಿದೆ.
ಚಿನ್ನ, ಬೆಳ್ಳಿ ದರ ಏರಿಳಿತ ಕಾಣುವುದು ಸರ್ವೇ ಸಾಮಾನ್ಯ. ನೀವು ಸಂಗ್ರಹಿಸಿದ ಹಣಕ್ಕೆ ಆಭರಣ ಖರೀದಿಸಬೇಕು ಎಂದೆನಿಸಿದರೆ ದರ ವಿವರ ಪರಿಶೀಲಿಸಿ. ಸರಿಹೊಂದುವುದಾದರೆ ಆಭರಣ ಕೊಳ್ಳುವತ್ತ ಯೋಚಿಸಬಹುದು. ಕೇವಲ ಆಭರಣಗಳನ್ನು ತೊಟ್ಟು ಸಂತೋಷ ಪಡುವುದೊಂದೇ ಅಲ್ಲದೇ ಹೂಡಿಕೆಯ ದೃಷ್ಟಿಯಿಂದ ಚಿನ್ನವನ್ನು ಖರೀದಿಸುವುದುಂಟು. ಹಾಗಾಗಿ ಚಿನ್ನದ ಮಾರುಕಟ್ಟೆಯ ಕುರಿತಾಗಿ ಕುತೂಹಲ ಇದ್ದೇ ಇರುತ್ತದೆ.
ಪ್ರಮುಖ ನಗರಗಳಲ್ಲಿ ದಾಖಲಾದ ಚಿನ್ನ ದರ
ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,350 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 50,360 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,650 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,710 ರೂಪಾಯಿಗೆ ಏರಿಕೆಯಾಗಿದೆ. ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,240 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,240 ರೂಪಾಯಿಗೆ ಏರಿಕೆಯಾಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,550 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 49,260 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,200 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,220 ರೂಪಾಯಿಗೆ ಏರಿಕೆಯಾಗಿದೆ. ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,200 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,220 ರೂಪಾಯಿಗೆ ಏರಿಕೆಯಾಗಿದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,200 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,220 ರೂಪಾಯಿಗೆ ಏರಿಕೆಯಾಗಿದೆ. ವಿಜಯವಾಡದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,200 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,220 ರೂಪಾಯಿಗೆ ಏರಿಕೆಯಾಗಿದೆ.
ಪ್ರಮುಖ ನಗರಗಳಲ್ಲಿನ ಬೆಳ್ಳಿ ದರ
ರಾಷ್ಟ್ರ ರಾಜಧಾನಿಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 68,500 ರೂಪಾಯಿ, ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 73,900 ರೂಪಾಯಿ, ಮುಂಬೈಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 68,500 ರೂಪಾಯಿ, ಕೋಲ್ಕತ್ತಾದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 68,500 ರೂಪಾಯಿ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 68,700 ರೂಪಾಯಿ, ಕೇರಳದಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 68,500 ರೂಪಾಯಿ, ಹೈದರಾಬಾದ್‌ನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 73,900 ರೂಪಾಯಿ, ವಿಜಯವಾಡದಲ್ಲಿ 73,900 ರೂಪಾಯಿಗೆ ಇಳಿಕೆಯಾಗಿದೆ.
ಚಿನ್ನದ ಬೆಲೆ ಏರಿಕೆಗೆ ಹಲವು ಕಾರಣಗಳಿವೆ ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಬುಲಿಯನ್ ಮಾರುಕಟ್ಟೆ ತಜ್ಞರ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆ ಕರೆನ್ಸಿ ಬೆಲೆಗಳು, ಹಣದುಬ್ಬರ, ಕೇಂದ್ರ ಬ್ಯಾಂಕುಗಳಲ್ಲಿನ ಚಿನ್ನದ ನಿಕ್ಷೇಪಗಳು, ಅವುಗಳ ಬಡ್ಡಿದರಗಳು, ಕೊರೊನಾ, ಆಭರಣ ಮಾರುಕಟ್ಟೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ವ್ಯಾಪಾರದಲ್ಲಿನ ಏರಿಳಿತ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.
ಇದನ್ನೂ ಓದಿ:
Gold Rate Today: ಶುಭ ಶುಕ್ರವಾರದಂದು ಆಭರಣ ಖರೀದಿಸುವುದಾದರೆ ಚಿನ್ನ, ಬೆಳ್ಳಿ ದರ ವಿವರ ಹೀಗಿದೆ
Gold Rate Today: ಜುಲೈ ತಿಂಗಳ ಆರಂಭದಲ್ಲಿ ಗ್ರಾಹಕರಿಗೆ ಖುಷಿ ಸುದ್ದಿ; ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ
Published On - 9:32 am, Sat, 3 July 21