Gold Rate Today: ಜುಲೈ ತಿಂಗಳ ಆರಂಭದಲ್ಲಿ ಗ್ರಾಹಕರಿಗೆ ಖುಷಿ ಸುದ್ದಿ; ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ
Gold Silver Price Today: ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,750 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,37,500 ರೂಪಾಯಿಗೆ ಕುಸಿತ ಕಂಡಿದೆ. ಸರಿಸುಮಾರು 3,600 ರೂಪಾಯಿ ಇಳಿಕೆ ಕಂಡು ಬಂದಿದೆ.
Gold Silver Rate Today | ಬೆಂಗಳೂರು: ಕಳೆದ ಜೂನ್ ತಿಂಗಳಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಳಿತ ಕಂಡಿತ್ತು. ತಿಂಗಳ ಕೊನೇ ದಿನ ಬೆಂಗಳೂರು ನಗರದಲ್ಲಿ ಚಿನ್ನದ ದರ ಸ್ಥಿರತೆಯನ್ನು ಕಾಪಾಡಿಕೊಂಡಿತ್ತು. ಅದೇ ರೀತಿ ಇನ್ನಿತರ ಕೆಲವು ನಗರಗಳಲ್ಲಿ ಚಿನ್ನದ ದರ ಇಳಿಕೆ ಕಂಡಿದ್ದರೆ ಇನ್ನು ಕೆಲವೆಡೆ ಸ್ಥಿರವಾಗಿಯೇ ಉಳಿದಿತ್ತು. ಬೆಳ್ಳಿ ದರದಲ್ಲಿಯೂ ಸಹ ಏರಿಳಿತಗಳು ಕಂಡು ಬಂದಿದ್ದವು. ಆದರೀಗ ಇಂದು (ಗುರುವಾರ, ಜುಲೈ 1) ಹೊಸ ತಿಂಗಳ ಆರಂಭದಲ್ಲಿ ಚಿನ್ನದ ದರ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಕಂಡು ಬಂದಿರುವುದು ಆಭರಣ ಪ್ರಿಯರಿಗೆ ಖುಷಿ ನೀಡುವ ವಿಚಾರ.
ಚಿನ್ನಕೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಅದರಲ್ಲಿಯೂ ಮಹಿಳೆಯರಿಗೆ ಕೊಂಚ ಜಾಸ್ತಿ ಆಸೆ ಎಂದರೆ ತಪ್ಪಾಗಲಾರದು. ಚಿನ್ನ ಖರೀದಿಸಲು ಮನಸ್ಸು ವಾಲಿದರೂ ಕೂಡಿಟ್ಟ ಹಣಕ್ಕೆ ಸರಿ ಹೊಂದಬೇಕಲ್ವೇ? ಎಂಬುದು ಆಭರಣ ಪ್ರಿಯರ ಪ್ರಶ್ನೆ. ಇಂದಿನ ದರ ವಿವರ ಗಮನಿಸಿ ನೀವು ಕೂಡಿಟ್ಟ ಹಣಕ್ಕೆ ಚಿನ್ನಕೊಳ್ಳಲು ಅವಕಾಶ ಕೂಡಿ ಬಂದರೆ ಖರೀದಿಯ ಬಗ್ಗೆ ಯೋಚಿಸಬಹುದು.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,750 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,37,500 ರೂಪಾಯಿಗೆ ಕುಸಿತ ಕಂಡಿದೆ. ಸರಿಸುಮಾರು 3,600 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,730 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,77,300 ರೂಪಾಯಿಗೆ ಕುಸಿತ ಕಂಡಿದೆ. ಬರೋಬ್ಬರಿ 3,800 ರೂಪಾಯಿ ಇಳಿಕೆ ಮಾಡಲಾಗಿದೆ. ಬೆಳ್ಳಿ ದರದಲ್ಲಿಯೂ ಸಹ 400 ರೂಪಾಯಿ ಇಳಿಕೆ ಕಂಡು ಕೆಜಿ ಬೆಳ್ಳಿಗೆ 67,600 ರೂಪಾಯಿ ನಿಗದಿಯಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,100 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,41,000 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಸರಿಸುಮಾರು 2,500 ರೂಪಾಯಿ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 48,100 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,81,000 ರೂಪಾಯಿಗೆ ಇಳಿಕೆ ಆಗಿದೆ. ಬರೋಬ್ಬರಿ 3,000 ರೂಪಾಯಿ ಕುಸಿತ ಕಂಡು ಬಂದಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 400 ರೂಪಾಯಿ ಕಡಿತವಾಗಿದೆ. ಆ ಮೂಲಕ ಕೆಜಿ ಬೆಳ್ಳಿ ಬೆಲೆ 72,900 ರೂಪಾಯಿ ನಿಗದಿಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,900 ರೂಪಾಯಿ ಇದೆ. 100 ಗ್ರಾಂ ಚಿನಕ್ಕೆ 4,59,000 ರೂಪಾಯಿ ನಿಗದಿ ಮಾಡಲಾಗಿದೆ. ಸರಿಸುಮಾರು 2,500 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 49,900 ರೂಪಾಯಿಗೆ ಕುಸಿದಿದೆ. 100 ಗ್ರಾಂ ಚಿನ್ನಕ್ಕೆ 4,99,000 ರೂಪಾಯಿ ನಿಗದಿ ಮಾಡಲಾಗಿದೆ. ಬರೋಬ್ಬರಿ 3,500 ರೂಪಾಯಿ ಇಳಿಕೆ ಕಂಡಿ ಬಂದಿದೆ. ಬೆಳ್ಳಿ ದರದಲ್ಲಿಯೂ ಕೊಂಚ ಇಳಿಕೆ ಕಂಡು ಬಂದಿದೆ. ಕೆಜಿ ಬೆಳ್ಳಿಗೆ 67,600 ರೂಪಾಯಿ ನಿಗದಿ ಮಾಡಲಾಗಿದೆ. ಸುಮಾರು 400 ರೂಪಾಯಿಯಷ್ಟು ಇಳಿಕೆ ಆಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,740 ರೂಪಾಯಿಗೆ ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರ 4,57,400 ರೂಪಾಯಿಗೆ ಇಳಿಕೆಯಾಗಿದೆ. ಸರಿಸುಮಾರು 4,600 ರೂಪಾಯಿಯಷ್ಟು ಇಳಿಕೆಯಾಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 400 ರೂಪಾಯಿ ಇಳಿಕೆ ಕಂಡು ಬಂದಿದ್ದು 67,600 ರೂಪಾಯಿ ನಿಗದಿ ಮಾಡಲಾಗಿದೆ.
ಒಟ್ಟಾರೆಯಾಗಿ ಪ್ರಮುಖ ನಗರಗಳಲ್ಲಿ ಚಿನ್ನದ ದರ ಕುಸಿತ ಕಂಡಿದೆ. ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಆಗಿದೆ. ಹೊಸ ತಿಂಗಳ ಆರಂಭದಲ್ಲಿಯೇ ಚಿನ್ನದ ದರ ಇಳಿಕೆ ಕಂಡು ಬಂದಿರುವುದು ಗ್ರಾಹಕರಿಗೆ ಖುಷಿ ತರುವುದಂತೂ ಸತ್ಯ. ಅದೆಷ್ಟೋ ವರ್ಷಗಳಿಂದ ಹಣವನ್ನು ಕೂಡಿಟ್ಟು, ಚಿನ್ನ ಖರೀದಿಸಬೇಕು ಅಂದುಕೊಂಡಿರುತ್ತೀರಿ. ಆಭರಣ ದರ ಸರಿ ಹೊಂದುವುದಾದರೆ ಆಭರಣಕೊಳ್ಳುವ ಕುರಿತು ಯೋಚಿಸಬಹುದು.
ಇದನ್ನೂ ಓದಿ:
Gold Rate Today: ಇಂದು ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆ ಇಳಿಕೆ; ವಿವಿಧ ನಗರಗಳಲ್ಲಿನ ದರ ವಿವರ ಇಲ್ಲಿದೆ
Gold Rate Today: ಅಮ್ಮನಿಗೆ ಚಿನ್ನದ ಸರವನ್ನು ಗಿಫ್ಟ್ ಕೊಡಬೇಕೆಂದಿದ್ದೀರಾ? ಇಳಿಕೆಯಲ್ಲಿದೆ ಚಿನ್ನದ ದರ ಗಮನಿಸಿ
Published On - 8:38 am, Thu, 1 July 21