Gold Silver Rate Today | ಬೆಂಗಳೂರು: ಭಾರತೀಯ ಮಾರುಕಟ್ಟೆಯಲ್ಲಿ ಇಂದು (ರವಿವಾರ, ಜೂನ್ 13) ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಬೆಳ್ಳಿ ದರವು ಸಹ ಇಳಿಕೆಯಾಗಿದೆ. ನಿನ್ನೆ ಆಭರಣದ ದರ ಇಳಿಕೆ ಕಂಡಿದ್ದನ್ನು ಕಂಡ ಗ್ರಾಹಕರು ಸಂತೋಷ ಪಟ್ಟಿದ್ದರು. ಇಂದು ಮತ್ತೆ ಚಿನ್ನದ ದರ ಇಳಿಕೆಯಾಗಿರುವುದು ಚಿನ್ನ ಪ್ರಿಯರಿಗೆ ನಿರಾಳ ಭಾವ. ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಇಳಿಕೆಯಾಗಿದೆ ಎಂಬುದನ್ನು ತಿಳಿಯೋಣ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 100 ಗ್ರಾಂ ಚಿನ್ನದ ದರ ಬರೋಬ್ಬರಿ 3,500 ರೂಪಾಯಿ ಇಳಿಕೆಯಾಗಿದೆ. ಆ ಮೂಲಕ 4,99,000 ರೂಪಾಯಿ ದಾಖಲಾಗಿದೆ. 10 ಗ್ರಾಂ ಚಿನ್ನದ ದರದಲ್ಲಿ 350 ರೂ. ಇಳಿಕೆ ಬಳಿಕ 45,750 ರೂ. ನಿಗದಿ ಮಾಡಲಾಗಿದೆ. ಹಾಗೆಯೇ 24 ಕ್ಯಾರೆಟ್ 100 ಗ್ರಾಂ ಚಿನ್ನದ ದರ 4,000 ರೂಪಾಯಿ ಕುಸಿತ ಕಂಡಿದೆ. ಆ ಮೂಲಕ 4,99,000 ರೂಪಾಯಿ ನಿಗದಿಯಾಗಿದೆ. 10 ಗ್ರಾಂ ಚಿನ್ನದ ದರ 49,900 ರೂಪಾಯಿಗೆ ಇಳಿದಿದೆ. ಜತೆಗೆ 1 ಕೆಜಿ ಬೆಳ್ಳಿ ದರದಲ್ಲಿ 200 ರೂಪಾಯಿ ಇಳಿಕೆ ಬಳಿಕ 72,200 ರೂಪಾಯಿ ಆಗಿದೆ.
ಮದುವೆ ಸಮಾರಂಭಗಳಿಗೆ ಆಭರಣಗಳನ್ನು ಕೊಳ್ಳುವುದು ಸಾಮಾನ್ಯ. ಆದರೆ ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳುವಂತಿರಬೇಕು ಎಂಬುದು ಗ್ರಾಹಕರ ಆಸೆ. ಚಿನ್ನ ಇಳಿಕೆ ಕಂಡಿರುವಾಗ ಆಭರಣ ಕೊಳ್ಳಲು ಮುಂದಾಗುವುದು ಸಾಮಾನ್ಯ. ಹೀಗಾಗಿ ಚಿನ್ನದ ದರ ಕುಸಿತ ಕಂಡಿರುವ ಸಮಯದಲ್ಲಿ ಚಿನ್ನ ಕೊಳ್ಳುವತ್ತ ಯೋಚಿಸಬಹುದು.
ಆಪತ್ಕಾಲದಲ್ಲಿ ಸಹಾಯಕ್ಕೆ ಬರುವ ಚಿನ್ನಕ್ಕೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಬಂಗಾರವನ್ನು ತೊಟ್ಟು ಖುಷಿಪಡುವುದರ ಜತೆಗೆ ಹೂಡಿಕೆಯ ದೃಷ್ಟಿಯಿಂದ ಖರೀದಿ ಮಾಡುವುದರಿಂದ ಕಷ್ಟ ಕಾಲದಲ್ಲಿ ನೆರವಾಗುತ್ತದೆ ಎಂಬ ಯೋಚನೆಯೂ ಇದೆ. ಹೀಗಿರುವಾಗ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಎಂಬುದರ ಕುರಿತಾಗಿ ಕುತೂಹಲ ಮೂಡುವುದು ಸಹಜ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,050 ರೂಪಾಯಿಗೆ ಕುಸಿತ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನದ ದರ 4,60,500 ರೂಪಾಯಿಗೆ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,230 ರೂಪಾಯಿಗೆ ಇಳಿಕೆ ಆಗಿದ್ದು, 100 ಗ್ರಾಂ ಚಿನ್ನಕ್ಕೆ 5,02,300 ರೂಪಾಯಿ ನಿಗದಿ ಮಾಡಲಾಗಿದೆ. ಹಾಗೆಯೇ ಕೆಜಿ ಬೆಳ್ಳಿ ಬೆಲೆ 77,300 ರೂಪಾಯಿ ಇದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,900 ರೂಪಾಯಿ ಇದ್ದು, 100 ಗ್ರಾಂ ಚಿನ್ನದ ದರ 4,79,000 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 52,200 ರೂಪಾಯಿಗೆ ಇಳಿಕೆ ಆಗಿದೆ. ಇನ್ನು, 100 ಗ್ರಾಂ ಚಿನ್ನದ ಬೆಲೆ 5,22,000 ರೂಪಾಯಿಗೆ ಕುಸಿದಿದೆ. ಕೆಜಿ ಬೆಳ್ಳಿ ಬೆಲೆ 72,200 ರೂಪಾಯಿ ಇದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,740 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ಬೆಲೆ 4,77,400 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,740 ರೂಪಾಯಿ ಆಗಿದ್ದು, 100 ಗ್ರಾಂ ಚಿನ್ನದ ದರ 4,87,400 ರೂಪಾಯಿಗೆ ಇಳಿಕೆಯಾಗಿದೆ. ಇನ್ನು, ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಕುಸಿತ ಕಂಡಿದೆ. ಆ ಮೂಲಕ 72,200 ರೂಪಾಯಿ ನಿದಿಯಾಗಿದೆ.
ಇದನ್ನೂ ಓದಿ: