Gold Silver Rate Today | ಬೆಂಗಳೂರು: ಚಿನ್ನವನ್ನು ತೊಟ್ಟು ಅಲಂಕಾರ ಮಾಡಿಕೊಳ್ಳಲು ಮಾತ್ರ ಖರೀದಿಗೆ ಮುಂದಾಗುವುದಿಲ್ಲ. ಹೂಡಿಕೆ ಮಾಡುವ ಪದ್ಧತಿ ಮೊದಲಿನಿಂದಲೂ ಇದೆ. ಹಾಗಾಗಿಯೇ ಚಿನ್ನ ಖರೀದಿಸುವ ಕುರಿತಾಗಿ ಭಾರತೀಯರಿಗೆ ಒಲವು ಜಾಸ್ತಿ. ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಚಿನ್ನದ ದರ (Gold Rate) ಮತ್ತು ಬೆಳ್ಳಿ ದರ (silver Rate) ಎಷ್ಟಿದೆ ಎಂಬ ಕುತೂಹಲವೂ ಹೆಚ್ಚು. ದರ ಕಡಿಮೆ ಇದ್ದಾಗ ಚಿನ್ನ ಕೊಳ್ಳಬೇಕು ಅನಿಸುವುದು ಸಹಜ. ಹಾಗಾಗಿ ಇಂದು ( ಜುಲೈ 11, ಭಾನುವಾರ) ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ ಗಮನಿಸಿ.
ಮದುವೆ ಸಮಾರಂಭಗಳಿಗೆಂದು ಚಿನ್ನ ತೊಟ್ಟು ಸಂಭ್ರಮಿಸುವವರೂ ಇದ್ದಾರೆ. ಕಷ್ಟ ಕಾಲದಲ್ಲಿ ನೆರವಾಗಬಹುದು ಎಂಬ ನಿರೀಕ್ಷೆಯೊಂದಿಗೆ ಆಭರಣ ಕೊಂಡುಕೊಳ್ಳುವವರೂ ಇದ್ದಾರೆ. ಒಟ್ಟಾರೆಯಾಗಿ ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಲು ಸರಿ ಹೊಂದುವುದಾದರೆ ಖರೀದಿಸುವ ಕುರಿತಾಗಿ ಯೋಚಿಸಬಹುದು. ಇಂದು ಬೆಂಗಳೂರು ಸೇರಿ ದೆಹಲಿ, ಚೆನ್ನೈ ಹಾಗೂ ಮುಂಬೈನಲ್ಲಿ ದರ ಎಷ್ಟಿದೆ ಎಂಬುದನ್ನು ತಿಳಿಯೋಣ.
ಬೆಂಗಳೂರಿನಲ್ಲಿ ನಿನ್ನೆಯ ದರವೇ ಮುಂದುವರೆದಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,750 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,47,500 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,820 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,88,200 ರೂಪಾಯಿ ನಿಗದಿಯಾಗಿದೆ. ಇಂದು ಆಭರಣದ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.
ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಚೆನ್ನೈನಲ್ಲಿ ಇಂದು ದರ ಸ್ವಲ್ಪ ಹೆಚ್ಚಳವಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,250 ರೂಪಾಯಿ ಮಾಡಲಾಗಿದೆ. 100 ಗ್ರಾಂ ಚಿನ್ನಕ್ಕೆ 4,52,500 ರೂಪಾಯಿ ನಿಗದಿಯಾಗಿದೆ. ಸರಿಸುಮಾರು 500 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,370 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ 4,93,700 ರೂಪಾಯಿ ನಿದಿಯಾಗಿದೆ. ಸುಮಾರು 600 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,900 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ 4,69,000 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,950 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 5,09,500 ರೂಪಾಯಿ ನಿಗದಿಯಾಗಿದೆ. ಇನ್ನು ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,810 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,68,100 ರೂಪಾಯಿ ನಿಗದಿ ಮಾಡಲಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,810 ರೂಪಾಯಿ ಇದ್ದು, 100 ಗ್ರಾಂ ಚಿನ್ನದ ದರ 4,78,100 ರೂಪಾಯಿ ಇದೆ.
ಒಟ್ಟಾರೆಯಾಗಿ ಪ್ರಮುಖ ಎಲ್ಲಾ ನಗರಗಳಲ್ಲಿಯೂ ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಇತರ ರಾಜ್ಯಗಳಲ್ಲಿ ಬೆಲೆ ಏರಿಳಿತ ಕಂಡು ಬರುತ್ತದೆ. ಕಳೆದ ವಾರಗಳಿಂದ ಚಿನ್ನದ ದರ ಏರುತ್ತಲೇ ಇದೆ. ಬೆಳ್ಳಿ ದರದಲ್ಲಿಯೂ ಸಹ ಏರಿಕೆ ಕಂಡು ಬಂದಿದೆ. ಇಂದು ಪ್ರಮುಖ ಎಲ್ಲಾ ನಗರಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿರುವುದರಿಂದ ಆಭರಣ ಖರೀದಿಸುವ ಕುರಿತಾಗಿ ಯೋಚಿಸಬಹುದು. ಬುಲಿಯನ್ ಮಾರುಕಟ್ಟೆ ತಜ್ಞರ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆ ಕರೆನ್ಸಿ ಬೆಲೆಗಳು, ಹಣದುಬ್ಬರ, ಕೇಂದ್ರ ಬ್ಯಾಂಕುಗಳಲ್ಲಿನ ಚಿನ್ನದ ಮೀಸಲು, ಅವುಗಳ ಬಡ್ಡಿದರಗಳು, ಕೊರೊನಾ, ಆಭರಣ ಮಾರುಕಟ್ಟೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ವ್ಯಾಪಾರದಲ್ಲಿನ ಏರಿಳಿತ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.
ಬೆಳ್ಳಿ ದರ ವಿವರ
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೊಂಚ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 69,300 ರೂಪಾಯಿ ನಿಗದಿಯಾಗಿದೆ. ಸುಮಾರು 500 ರೂಪಾಯಿಯಷ್ಟು ಏರಿಕೆ ಕಂಡಿದೆ. ಚೆನ್ನೂನಲ್ಲಿಯೂ ಸಹ ಬೆಳ್ಳಿ ದರದಲ್ಲಿ 700 ರೂಪಾಯಿಯಷ್ಟು ಏರಿಕೆ ಕಂಡಿದ್ದು, ಕೆಜಿ ಬೆಳ್ಳಿಗೆ 74,100 ರೂಪಾಯಿ ನಿಗದಿ ಮಾಡಲಾಗಿದೆ. ದೆಹಲಿಯಲ್ಲಿ 500 ರೂಪಾಯಿ ಏರಿಕೆ ಆಗಿದ್ದು, ಕೆಜಿ ಬೆಳ್ಳಿಗೆ 69,300 ರೂಪಾಯಿ ನಿದಿಯಾಗಿದೆ.
ಇದನ್ನೂ ಓದಿ:
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆ ಇಳಿಕೆ; ಆಭರಣದ ದರ ವಿವರ ಇಲ್ಲಿದೆ