
ಬೆಂಗಳೂರು, ಜ.12: ಸಿಲಿಕಾನ್ ಸಿಟಿಯಲ್ಲಿ ಜೀವನ ನಡೆಸುವುದು ಸುಲಭ, ಆದರೆ ಈ ಐಟಿ, ಬಿಟಿ ಕಂಪನಿಯಲ್ಲಿ ಕೆಲಸ ಮಾಡೋದೇ ದೊಡ್ಡ ತಲೆನೋವು, ಜೀವನದಲ್ಲಿ ಏನು ಬೇಕಾದರೂ ಸಹಿಸಿಕೊಳ್ಳಬಹುದು, ಆದರೆ ಐಟಿ ಕಂಪನಿಗಳಲ್ಲಾಗುವ ಕಿರಿಕಿರಿ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಲವು ಟೆಕ್ಕಿಗಳು ದೂರಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಂತಹದೇ ಒಂದು ಪೋಸ್ಟ್ ವೈರಲ್ ಆಗಿದೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ (Google Engineer) ಒಬ್ಬರು ಗೂಗಲ್ ತೊರೆದ ನಂತರ ತನ್ನ ಜೀವನದ ಕಹಿ ಕ್ಷಣಗಳನ್ನು ಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕಂಪನಿಯ ಹೊರಗಿನ ಕೆಲಸದಿಂದ ಉಂಟಾದ ಸಂಘರ್ಷದಿಂದ ಕೆಲಸ ಬಿಡಬೇಕಾದ ಪರಿಸ್ಥಿತಿ ಬಂತು. ಇದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ ಎಂದು ತಮ್ಮ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಅರ್ಪಿತ್ ಭಯಾನಿ ಎಂಬುವವರು ಎಕ್ಸ್ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಗೂಗಲ್‌ನಲ್ಲಿ ತಮ್ಮ ಕೊನೆಯ ದಿನ ಅನಿರೀಕ್ಷಿತ ಕ್ಷಣದ ಬಗ್ಗೆ ಈ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಇದು ಸಿಹಿ-ಕಹಿಯ ಕ್ಷಣ ಅಲ್ಲ, ಸಂಪೂರ್ಣವಾಗಿ ಕಹಿಯ ಕ್ಷಣ ಎಂದು ಹೇಳಿದ್ದಾರೆ. “ನಾನು ಇಲ್ಲಿ ಕೆಲಸ ಬಿಡಬೇಕು ಎಂಬ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ ನನಗೆ ಬೇರೆ ದಾರಿ ಇರಲಿಲ್ಲ. ಆನ್‌ಲೈನ್ ಕೋರ್ಸ್‌ಗಳು ಮತ್ತು ಯೂಟ್ಯೂಬ್ ವಿಷಯಕ್ಕೆ ಸಂಬಂಧಿಸಿದಂತೆ ಹೊರಗಿನ ಕೆಲಸದಿಂದ ಈ ಸಮಸ್ಯೆ ಉಂಟಾಗಿದೆ. ಒಮ್ಮೆ ಕೆಲಸ ಬಿಡುವ ನಿರ್ಧಾರ ಮಾಡಿಕೊಂಡರೆ ಮತ್ತೆ ಅದನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ನಾನು ತುಂಬಾ ಪ್ರೀತಿಸುವ ಒಂದು ಡೊಮೇನ್ ಅನ್ನು ಬಿಡಲು ನನಗೆ ಬೇಸರವಾಗುತ್ತಿದೆ. ಇದು ಇನ್-ಮೆಮೊರಿ ಡೇಟಾಬೇಸ್‌ಗಳು” ಎಂದು ಬರೆದುಕೊಂಡಿದ್ದಾರೆ.
Yesterday was my last day at Google. It is not bittersweet, but a purely bitter moment. I had no plans of leaving, but I had no choice left.
I had to leave because of a conflict with my outside work (courses and YouTube), and once legal gets involved, there is not much you can… pic.twitter.com/6jbsyAfF55
— Arpit Bhayani (@arpit_bhayani) January 10, 2026
ನಾನು ಒಬ್ಬ ಒಳ್ಳೆಯ ಕೆಲಸಗಾರನಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದೇನೆ. ಅದಕ್ಕಿಂತಲ್ಲೂ ಹೆಚ್ಚು ಒಳ್ಳೆಯ ಜೊತೆಗಾರರ ಜತೆಗೆ ಕೆಲಸ ಮಾಡಿದ್ದೇನೆ. ಇನ್ನು ಒಳ್ಳೆಯ ವಿಚಾರಗಳನ್ನು ಕಲಿಯುವುದನ್ನು ಮಿಸ್ ಮಾಡಿಕೊಂಡೆ ಎಂದು ಹೇಳಿದ್ದಾರೆ. ಗೂಗಲ್‌ನಲ್ಲಿ ಎರಡು ವರ್ಷ ಕೆಲಸ ಮಾಡಿರುವ ಭಯಾನಿಗೆ ತುಂಬಾ ತೃಪ್ತಿಕರವಾಗಿತ್ತು ಎಂದು ಹೇಳಿದ್ದಾರೆ. ಇದು ನನಗೆ ಎಂಜಿನಿಯರ್ ಮತ್ತು ಆಪರೇಟರ್ ಆಗಿ ಬೆಳೆಯಲು ಸಹಾಯ ಮಾಡಿದೆ. ನನಗೆ ಈ ಎರಡು ವರ್ಷ ಅವಕಾಶ ನೀಡಿದ್ದಕ್ಕಾಗಿ ನಾನು ಗೂಗಲ್‌ಗೆ ಎಂದೆಂದಿಗೂ ಕೃತಜ್ಞನಾಗಿರುತ್ತೇನೆ. ನನ್ನನ್ನು ಉತ್ತಮ ಎಂಜಿನಿಯರ್ ಮತ್ತು ಆಪರೇಟರ್ ಆಗಿ ಮಾಡಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನನ್ನನ್ನು ಬಲಶಾಲಿಯನ್ನಾಗಿಸಿದ ಬೆಂಗಳೂರಿಗೆ ಧನ್ಯವಾದ ತಿಳಿಸಿದ ಯುವತಿ
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ನೀವು ಎಷ್ಟು ಪ್ರಮಾಣಿಕವಾಗಿ ಕೆಲಸ ಮಾಡಿದ್ದೀರಿ ಎಂಬುದಕ್ಕೆ ಈ ನಿಮ್ಮ ಮಾತೇ ಸಾಕ್ಷಿ, ಗೂಗಲ್ ನಿಮ್ಮ ಕಳೆದುಕೊಂಡು ನಷ್ಟ ಪಡುತ್ತದೆ ಎಂದು ಒಬ್ಬರು ಹೇಳಿದ್ದಾರೆ. ಗೂಗಲ್ನಲ್ಲೂ ಇಂತಹ ಸಂಘರ್ಷಗಳು ನಡೆಯುತ್ತದೆ ಎಂಬುದನ್ನು ನಂಬಲು ಅಸಾಧ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಒಳ್ಳೆಯದಾಗಲಿ ಮುಂದೆ ನಿಮಗೆ ಉತ್ತಮ ಅವಕಾಶ ಸಿಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ