AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ-ಖಾತಾದಿಂದ ಎ-ಖಾತಾಗೆ ಕನ್ವರ್ಟ್​ ಆಗಲು ನಿಯಮವನ್ನು ಕಠಿಣಗೊಳಿಸಿದ ಜಿಬಿಎ; ಯಾವೆಲ್ಲಾ ದಾಖಲೆಗಳು ಬೇಕು?

ಬೆಂಗಳೂರಿನಲ್ಲಿ ಬಿ-ಖಾತಾ ಆಸ್ತಿಗಳನ್ನು ಎ-ಖಾತಾಗೆ ಪರಿವರ್ತಿಸಲು ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ. ಪಾರದರ್ಶಕತೆ ಹೆಚ್ಚಿಸಲು, ಇ-ಖಾತಾ ಹೊಂದಿರುವುದು ಕಡ್ಡಾಯ. ನಂತರವೇ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು. ಅನುಮೋದಿತ ಅಪಾರ್ಟ್‌ಮೆಂಟ್‌ಗಳಿಗೆ ಇದು ಅನ್ವಯವಾಗಿತ್ತದೆ. ಹಾಗಿದ್ದರೆ ಬಿ-ಖಾತಾ ಹೊಂದಿರುವ ಅಪಾರ್ಟ್​ಮೆಂಟ್ ಮಾಲೀಕರು ಹೇಗೆ ಎ-ಖಾತಾಗೆ ಕನ್ವರ್ಟ್​ ಆಗಬಹುದೆಂಬ ಮಾಹಿತಿ ಇಲ್ಲಿದೆ.

ಬಿ-ಖಾತಾದಿಂದ ಎ-ಖಾತಾಗೆ ಕನ್ವರ್ಟ್​ ಆಗಲು ನಿಯಮವನ್ನು ಕಠಿಣಗೊಳಿಸಿದ ಜಿಬಿಎ; ಯಾವೆಲ್ಲಾ ದಾಖಲೆಗಳು ಬೇಕು?
ಬಿ-ಖಾತಾ ಹೊಂದಿರುವ ಅಪಾರ್ಟ್​ಮೆಂಟ್ ಮಾಲೀಕರು ಎ-ಖಾತಾಗೆ ಕನ್ವರ್ಟ್​ ಆಗೋದು ಹೇಗೆ? ಇಲ್ಲಿದೆ ಮಾಹಿತಿ
ಭಾವನಾ ಹೆಗಡೆ
|

Updated on: Jan 12, 2026 | 3:01 PM

Share

ಬೆಂಗಳೂರು, ಜನವರಿ 12: ನವೆಂಬರ್ 1 ರಿಂದ ಬಿ-ಖಾತಾ ಆಸ್ತಿ ದಾಖಲೆಗಳ ಎ-ಖಾತಾ ಪರಿವರ್ತನೆಗೆ ಇ- ಖಾತಾ ಹೊಂದಿರುವುದು ಅಗತ್ಯ ಎಂದು GBA ಹೇಳಿತ್ತು. ಈ ಹಿನ್ನೆಲೆ ರಾಜ್ಯದಲ್ಲಿ ಆಸ್ತಿ ನೋಂದಣಿ ಹಾಗೂ ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಎ-ಖಾತಾ ನೀಡುವ ಪ್ರಕ್ರಿಯೆಗೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ . ಈ ನಿಯಮಗಳು ವಿಶೇಷವಾಗಿ ಬಿ-ಖಾತಾ ಹೊಂದಿರುವ ಅನುಮೋದಿತ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್​ಗಳಿಗೆ ಮಹತ್ವದ್ದಾಗಿವೆ.

ಇ-ಖಾತಾ ದೊರಕಿದ ನಂತರವೇ ಎ-ಖಾತಾಗೆ ಅರ್ಜಿ

ಅಧಿಕಾರಿಗಳು ಹೇಳುವಂತೆ ಅನುಮೋದಿತ ಲೇಔಟ್‌ಗಳು ಹಾಗೂ ಅನುಮೋದಿತ ಕಟ್ಟಡಗಳಲ್ಲಿನ ಫ್ಲಾಟ್ ಮಾಲೀಕರು ಈಗ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು. ಆದರೆ ಅದಕ್ಕೂ ಮೊದಲು ಪ್ರತಿಯೊಬ್ಬ ಫ್ಲಾಟ್ ಮಾಲೀಕರು ಕಡ್ಡಾಯವಾಗಿ ಆನ್‌ಲೈನ್ ಪೋರ್ಟಲ್ ಮೂಲಕ ಇ-ಖಾತಾ ಪಡೆಯಬೇಕು. ಇ-ಖಾತಾ ದೊರಕಿದ ನಂತರವೇ ಎ-ಖಾತಾ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಪ್ರತ್ಯೇಕ ಫ್ಲಾಟ್ ಮಾಲೀಕರಿಂದ ವೈಯಕ್ತಿಕ ಅರ್ಜಿಯೇ ಕಡ್ಡಾಯವಾಗಿದೆ.

ಇದನ್ನೂ ಓದಿ B ಖಾತೆಯಿಂದ A ಖಾತೆಗೆ ಕನ್ವರ್ಟ್​ ಮಾಡಲು ಬೇಕೇ ಬೇಕು E ಖಾತೆ

ಪರಿಷ್ಕೃತ ವ್ಯವಸ್ಥೆಯಡಿ ಮಾಲೀಕರು ತಮ್ಮ ಮಾಲೀಕತ್ವದ ದಾಖಲೆಗಳು ಹಾಗೂ ಆಸ್ತಿ ತೆರಿಗೆ ಪಾವತಿ ವಿವರಗಳನ್ನು ಅಪ್‌ಲೋಡ್ ಮಾಡಿ ಇ-ಖಾತಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹತೆಗೆ ಪ್ರಸ್ತುತ ವರ್ಷದ ಆಸ್ತಿ ತೆರಿಗೆಯ ಸಂಪೂರ್ಣ ಪಾವತಿ, ಮಂಜೂರಾದ ಕಟ್ಟಡ ಯೋಜನೆ ಹಾಗೂ ಬಿ-ಖಾತಾ ಹೊಂದಿರುವ ಭೂಮಿಯ ದಾಖಲೆಗಳನ್ನು ಹೊಂದಿರುವುದು ಅಗತ್ಯವಾಗಿದೆ. 1961ರ ಪುರಸಭೆ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ ಅಪಾರ್ಟ್‌ಮೆಂಟ್‌ಗಳನ್ನೂ ಎ-ಖಾತಾಗೆ ಪರಿಗಣಿಸಬಹುದು. ಆದರೆ ಉಲ್ಲಂಘನೆಯ ಪ್ರಮಾಣದ ಆಧಾರದಲ್ಲಿ ದಂಡ ವಿಧಿಸಲಾಗುತ್ತದೆ. ಪ್ರಮುಖ ನಿರ್ಮಾಣ ಉಲ್ಲಂಘನೆಗಳಿದ್ದರೆ ಮಾರ್ಗದರ್ಶನ ಮೌಲ್ಯದ ಶೇಕಡಾ 5 ರಿಂದ 50 ರವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ