ಕರ್ನಾಟಕ ರಾಜ್ಯ ‘ಗುರುಧರ್ಮ ಪ್ರಚಾರಣ ಯುವಜನ ಸಭಾ’ಕ್ಕೆ ನೂತನ ಸಾರಥಿ; ಗೋಪಿ ಕೃಷ್ಣಪ್ಪ ಅಧ್ಯಕ್ಷರಾಗಿ ನೇಮಕ!

ಕೇರಳದ ಶಿವಗಿರಿ ಮಠವು ಕರ್ನಾಟಕ ರಾಜ್ಯ ಗುರುಧರ್ಮ ಪ್ರಚಾರಣ ಯುವಜನ ಸಭಾದ ಅಧ್ಯಕ್ಷರಾಗಿ ಗೋಪಿ ಕೃಷ್ಣಪ್ಪ ಅವರನ್ನು ನೇಮಿಸಿದೆ. ಯುವಜನತೆಯಲ್ಲಿ ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪಸರಿಸುವ ಗುರಿಯನ್ನು ಮಠ ಹೊಂದಿದ್ದು, ಕೃಷ್ಣಪ್ಪ ಅವರ ನಾಯಕತ್ವದಲ್ಲಿ ಗುರುಗಳ ತತ್ವಗಳು ಕರ್ನಾಟಕದ ಯುವಜನತೆಯಲ್ಲಿ ಆಳವಾಗಿ ಬೇರೂರಿ, ಸಮಾಜ ಸುಧಾರಣೆಗೆ ಹೊಸ ವೇಗ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಕರ್ನಾಟಕ ರಾಜ್ಯ ಗುರುಧರ್ಮ ಪ್ರಚಾರಣ ಯುವಜನ ಸಭಾಕ್ಕೆ ನೂತನ ಸಾರಥಿ; ಗೋಪಿ ಕೃಷ್ಣಪ್ಪ ಅಧ್ಯಕ್ಷರಾಗಿ ನೇಮಕ!
ಕರ್ನಾಟಕ ರಾಜ್ಯ 'ಗುರುಧರ್ಮ ಪ್ರಚಾರಣ ಯುವಜನ ಸಭಾ'ಕ್ಕೆ ನೂತನ ಸಾರಥಿ

Updated on: Dec 31, 2025 | 3:11 PM

ಬೆಂಗಳೂರು, ಡಿಸೆಂಬರ್ 31: ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪಸರಿಸುವ ನಿಟ್ಟಿನಲ್ಲಿ ಕೇರಳದ ಶಿವಗಿರಿ ಮಠದ ಶ್ರೀ ನಾರಾಯಣ ಧರ್ಮ ಸಂಘಂ ಟ್ರಸ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ರಾಜ್ಯ ಗುರುಧರ್ಮ ಪ್ರಚಾರಣ ಯುವಜನ ಸಭಾದ ನೂತನ ಅಧ್ಯಕ್ಷರಾಗಿ ಗೋಪಿ ಕೃಷ್ಣಪ್ಪ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ.

ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಯುವಜನತೆಯಲ್ಲಿ ಮೂಡಿಸುವ ನಿಟ್ಟಿನಲ್ಲಿ ಶಿವಗಿರಿ ಮಠದ ಗುರುಧರ್ಮ ಪ್ರಚಾರಣ ಸಭಾ (GDPS) ಈಗ ರಾಜ್ಯದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಸಮಾಜಸೇವೆ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಗೋಪಿ ಕೃಷ್ಣಪ್ಪ ಅವರಿಗೆ ಈಗ ದೊಡ್ಡ ಜವಾಬ್ದಾರಿ ಹೆಗಲಿಗೇರಿದೆ. ಕರ್ನಾಟಕ ರಾಜ್ಯ ಗುರುಧರ್ಮ ಪ್ರಚಾರಣ ಯುವಜನ ಸಭಾದ ಅಧ್ಯಕ್ಷರನ್ನಾಗಿ ಇವರನ್ನು ನೇಮಿಸಿ ಮಠ ಅಧಿಕೃತ ಆದೇಶ ಹೊರಡಿಸಿದೆ.

ಶ್ರೀ ನಾರಾಯಣ ಗುರುಗಳ ದೃಷ್ಟಿಕೋನ ಮತ್ತು ಆದರ್ಶಗಳ ಬಗ್ಗೆ ಗೋಪಿ ಕೃಷ್ಣಪ್ಪ ಅವರಿಗಿರುವ ಬದ್ಧತೆಯನ್ನು ಪರಿಗಣಿಸಿ ಈ ನೇಮಕಾತಿ ಮಾಡಲಾಗಿದೆ. ಸಾಮಾಜಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಅವರು ನೀಡುತ್ತಿರುವ ಸತತ ಕೊಡುಗೆಯೇ ಈ ಉನ್ನತ ಸ್ಥಾನಕ್ಕೆ ಕಾರಣವಾಗಿದೆ. ಅವರ ನಾಯಕತ್ವದಲ್ಲಿ ಕರ್ನಾಟಕದ ಯುವಜನತೆಯಲ್ಲಿ ಗುರುಗಳ ತತ್ವಗಳು ಮತ್ತಷ್ಟು ಆಳವಾಗಿ ಬೇರೂರಲಿವೆ ಎಂಬ ವಿಶ್ವಾಸವನ್ನು ಮಠ ವ್ಯಕ್ತಪಡಿಸಿದೆ. ಶಿವಗಿರಿ ಮಠದ ಈ ನಿರ್ಧಾರದಿಂದ ಕರ್ನಾಟಕದಲ್ಲಿ ಗುರುಧರ್ಮ ಪ್ರಚಾರದ ಕಾರ್ಯಕ್ಕೆ ಹೊಸ ವೇಗ ಸಿಕ್ಕಂತಾಗಿದೆ. ತನ್ನ ಸಾಮಾಜಿಕ ಕಾಳಜಿಯ ಮೂಲಕವೇ ಗುರುತಿಸಿಕೊಂಡಿದ್ದ ಗೋಪಿ ಕೃಷ್ಣಪ್ಪ ಅವರು ಈಗ ಯುವಜನತೆಯನ್ನು ಸಂಘಟಿಸುವ ಸವಾಲನ್ನು ಸ್ವೀಕರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.