ಬೆಂಗಳೂರು: ನಗರದಲ್ಲಿ ಎಲ್ಲೆಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಸಮಸ್ಯೆ ಆಗಿದೆಯೋ ಅಂತಹ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತೆ ಎಂದು ಬೆಂಗಳೂರಿನಲ್ಲಿ (Bengaluru) ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಕಳೆದ ಬಾರಿ ಭೇಟಿ ಮಾಡಿದ ಸ್ಥಳಗಳಲ್ಲಿ ಕೆಲಸ ನಡೀತಿದೆ. ಮಹದೇವಪುರ, ಬೊಮ್ಮನಹಳ್ಳಿ ಭಾಗದಲ್ಲಿ ಅನಾಹುತವಾಗಿದೆ. ಹೊಸ ಕಾಲುವೆಗಳ ನಿರ್ಮಾಣ ಮಾಡಿ ನೀರು ಆಚೆ ಹೋಗಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಮರ್ಸಿಲೆಸ್ಲಿ, ಎಷ್ಟೇ ಪ್ರಭಾವಿಯಾಗಿದ್ದರು ಮುಲಾಜಿಲ್ಲದೆ ಒತ್ತವರಿ ಮಾಡಿದರೆ ತೆರವು ಮಾಡುತ್ತೇವೆ. ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಅಡಿ ನೋಟಿಸ್ ಕೊಡುವ ಅವಶ್ಯಕತೆಯಿಲ್ಲ. ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರು ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಎಲ್ಲಾ ಕೆರೆಗಳು ತುಂಬಿ ಹೋಗಿವೆ. ಸರ್ಕಾರ ಯಾರ ಮನೆಗೆ ನೀರು ನುಗ್ಗಿದೆಯೊ ತೊಂದರೆ ಆಗಿದೆಯೊ ಅಂತವರಿಗೆ ಪರಿಹಾರ ನೀಡುತ್ತೆ. ಬೆಳೆ ಪರಿಹಾರ ಕೂಡ ನೀಡಲಾಗುತ್ತೆ. ಸೆಪ್ಟೆಂಬರ್ 3ನೇ ತಾರೀಖು ಹಾಸನ ತುಮಕೂರು ಮಂಗಳೂರು ಭಾಗದಲ್ಲಿ ಪ್ರವಾಸ ಮಾಡುತ್ತೇನೆ. ನೊಂದವರಿಗೆ ಸರ್ಕಾರ ಸಹಾಯ ಮಾಡಲಿದೆ. ಸಾರ್ವಜನಿಕರಲ್ಲಿ ವಿನಂತಿ ಮಾಡುತ್ತೇನೆ. ಬೇಸಿಗೆ ಬರದ ರೀತಿ ಮಳೆ ಬರತಾ ಇದ್ದು, ನಾಳೆ ಮುಖ್ಯಮಂತ್ರಿಗಳು ನೆರೆ ಬಂದು ಹಾನಿಯಾಗಿರೊ ಕಡೆ ಸಿಟಿಯಲ್ಲಿ ರೌಂಡ್ಸ್ ಮಾಡುತ್ತಾರೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:26 pm, Wed, 31 August 22