AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohandas Pai: ನರೇಂದ್ರ ಮೋದಿಯವರೇ ಬೆಂಗಳೂರು ಉಳಿಸಿ; ನಗರದ ಅವ್ಯವಸ್ಥೆಯ ಬಗ್ಗೆ ಗಮನ ಹರಿಸಲು ಪ್ರಧಾನಿಗೆ ಮೋಹನ್​ದಾಸ್ ಪೈ ಮನವಿ

Bengaluru Rain: ಇನ್ನೆರೆಡು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯಮಿ ಮೋಹನ್ ದಾಸ್ ಪೈ ಅವರು ಮೋದಿ ಅವರಿಗೆ ಟ್ಯಾಗ್ ಮಾಡಿ ಮಾಡಿರುವ ಟ್ವೀಟ್ ಮಹತ್ವ ಪಡೆದಿದೆ.

Mohandas Pai: ನರೇಂದ್ರ ಮೋದಿಯವರೇ ಬೆಂಗಳೂರು ಉಳಿಸಿ; ನಗರದ ಅವ್ಯವಸ್ಥೆಯ ಬಗ್ಗೆ ಗಮನ ಹರಿಸಲು ಪ್ರಧಾನಿಗೆ ಮೋಹನ್​ದಾಸ್ ಪೈ ಮನವಿ
ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಟಿ.ವಿ.ಮೋಹನ್​ದಾಸ್ ಪೈ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 31, 2022 | 5:18 PM

Share

ಬೆಂಗಳೂರು: ಒಂದು ಸಣ್ಣ ಮಳೆಗೂ ಪರದಾಡುವ ಪರಿಸ್ಥಿತಿ ತಲುಪುವ ಬೆಂಗಳೂರಿನ ಪರಿಸ್ಥಿತಿ ಬಗ್ಗೆ ಉದ್ಯಮಿ ಟಿ.ವಿ.ಮೋಹನದಾಸ್​ (TV Mohandas Pai) ಪೈಕಿ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ. ಬೆಂಗಳೂರು ನಗರ ನಿರ್ವಹಣೆ ಕುರಿತು ಕರ್ನಾಟಕ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಹರಿಹಾಯ್ದಿರುವ ಅವರು, ‘ನರೇಂದ್ರ ಮೋದಿಯವರೇ ಬೆಂಗಳೂರು ಉಳಿಸಿ’ ಎಂದು ವಿನಂತಿಸಿದ್ದಾರೆ. ತಮ್ಮ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಟ್ಯಾಗ್ ಮಾಡಿ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

ಬೆಂಗಳೂರು ನಗರದ ರಾಜಕಾಲುವೆಗಳು ಹೂಳಿನಿಂದ ತುಂಬಿವೆ. ಹಲವೆಡೆ ಕಸ ಬಿದ್ದಿದೆ, ಮುಖ್ಯ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿ. ಬೆಂಗಳೂರನ್ನು ಭ್ರಷ್ಟಾಚಾರ ಮುಕ್ತ ನಗರವನ್ನಾಗಿಸಿ, ರಾಷ್ಟ್ರ ರಾಜಧಾನಿ ದೆಹಲಿಯನ್ನು ಭ್ರಷ್ಟಾಚಾರ ಮುಕ್ತ ಮಾಡುವುದಾದರೇ ಕರ್ನಾಟಕವನ್ನು ಯಾಕೆ ಭ್ರಷ್ಟಾಚಾರ ಮುಕ್ತ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಬೆಂಗಳೂರಿನ ಯೋಜನೆಗಳು ಪೂರ್ಣಗೊಳ್ಳುವುದಕ್ಕೆ, ಇಲ್ಲಿನ ಜನಜೀವನ ಸುಧಾರಿಸಲು ಹೆಚ್ಚು ಹಣ ಬೇಕೇ? ಅಥವಾ ಉತ್ತಮ ಆಡಳಿತ ಬೇಕೇ? ನಮ್ಮ ಮೆಟ್ರೋ ಯೋಜನೆಗಳು ಕಾಲಮಿತಿಯನ್ನು ಮೀರಿವೆ. ಇದು ಸಂಪೂರ್ಣವಾಗಿ ಆಡಳಿತದ ವೈಫಲ್ಯ. ನಮ್ಮ ಪ್ರಮುಖ ಯೋಜನೆಗಳ ಸ್ಥಿತಿಗತಿಯನ್ನು ದಯವಿಟ್ಟು ಪರಿಶೀಲಿಸಿ’ ಎಂದು ಮೋಹನ್​ದಾಸ್ ಪೈ ಕೋರಿದ್ದಾರೆ.

ಇನ್ನೆರೆಡು ದಿನಗಳಲ್ಲಿ, ಅಂದರೆ ಸೆಪ್ಟೆಂಬರ್ 2ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಬೆಂಗಳೂರಿಗೆ ಬರಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯಮಿ ಮೋಹನ್ ದಾಸ್ ಪೈ ಅವರು ಮೋದಿ ಅವರಿಗೆ ಟ್ಯಾಗ್ ಮಾಡಿ ಮಾಡಿರುವ ಟ್ವೀಟ್ ಮಹತ್ವ ಪಡೆದಿದೆ. ಮಳೆ ನೀರು ಹರಿದುಹೋಗಲು ರೂಪಿಸಿರುವ ಕಾಲುವೆಗಳು ಹೂಳಿನಿಂದ ತುಂಬಿವೆ. ಕೆಲ ಕಾಲುವೆಗಳನ್ನು ಅವೈಜ್ಞಾನಿಕವಾಗಿ ಮುಚ್ಚಲಾಗಿದೆ. ನಿಯಮಿತ ನಿರ್ವಹಣೆ ಕೊರತೆಯಿಂದಾಗಿ ಸಣ್ಣ ಮಳೆಯಾದರೂ ಬೆಂಗಳೂರಿನ ಜನ ಪರದಾಡುವಂತಾಗುತ್ತದೆ.

ಮೋಹನ್ ದಾಸ್​ ಪೈ ಅವರು ಸ್ವತಃ ಉದ್ಯಮಿ. ಹಲವು ನವೋದ್ಯಮಗಳಲ್ಲಿ ಅವರು ಬಂಡವಾಳವನ್ನೂ ಹೂಡಿದ್ದಾರೆ. ಯಾವುದೇ ರಾಜ್ಯದ ಪ್ರಗತಿಗೆ ಉದ್ಯಮಗಳು ಅತ್ಯಗತ್ಯ ಎಂದು ಮನಗಂಡಿರುವ ಅವರು ಉದ್ಯಮಸ್ನೇಹಿ ವಾತಾವರಣ ರೂಪಿಸಲು ರಾಜ್ಯ ಸರ್ಕಾರಕ್ಕೆ ಈ ಹಿಂದೆಯೂ ಹಲವು ಬಾರಿ ಸಲಹೆ ಮಾಡಿದ್ದರು. ನಗರದಲ್ಲಿ ಅತಿಹೆಚ್ಚು ಐಟಿಬಿಟಿ ಕಂಪನಿಗಳಿರುವ ಮಾರತ್ತಹಳ್ಳಿ, ಔಟರ್​ರಿಂಗ್ ರೋಡ್, ಬೆಳ್ಳಂದೂರು, ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಮಳೆ ನೀರಿನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಉದ್ಯೋಗಿಗಳು ಸಕಾಲಕ್ಕೆ ಕಚೇರಿಗಳನ್ನು ತಲುಪಲೂ ಕಷ್ಟಪಡುವಂತಾಗಿದೆ.

Published On - 5:18 pm, Wed, 31 August 22

ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
ವೃಥಾ ಹೇಳಿಕೆ ನೀಡುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ತಗೊಳ್ಳುತ್ತೆ: ಸಚಿವ
ವೃಥಾ ಹೇಳಿಕೆ ನೀಡುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ತಗೊಳ್ಳುತ್ತೆ: ಸಚಿವ
ಸರ್ವೆ ವೇಳೆ ಬಿಬಿಎಂಪಿ ಸಿಬ್ಬಂದಿ ಗೂಂಡಾಗಿರಿ: ಮಾಲೀಕನ ಮೇಲೆ ಹಲ್ಲೆಗೆ ಯತ್ನ
ಸರ್ವೆ ವೇಳೆ ಬಿಬಿಎಂಪಿ ಸಿಬ್ಬಂದಿ ಗೂಂಡಾಗಿರಿ: ಮಾಲೀಕನ ಮೇಲೆ ಹಲ್ಲೆಗೆ ಯತ್ನ
ಡಿಪೋ ಮ್ಯಾನೇಜರ್ ಬೇರೆ ಗ್ರಹದವನಿರಬೇಕು ಎನ್ನುತ್ತಿರುವ ಜನ
ಡಿಪೋ ಮ್ಯಾನೇಜರ್ ಬೇರೆ ಗ್ರಹದವನಿರಬೇಕು ಎನ್ನುತ್ತಿರುವ ಜನ
VIDEO: ಭಾರತ vs ಇಂಗ್ಲೆಂಡ್ ಟೆಸ್ಟ್​: ಹೀಗೂ ಔಟಾಗ್ತಾರಾ?
VIDEO: ಭಾರತ vs ಇಂಗ್ಲೆಂಡ್ ಟೆಸ್ಟ್​: ಹೀಗೂ ಔಟಾಗ್ತಾರಾ?
ಬಾಲಿಯಲ್ಲಿ 65 ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಿ ಇಬ್ಬರು ಸಾವು
ಬಾಲಿಯಲ್ಲಿ 65 ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಿ ಇಬ್ಬರು ಸಾವು