ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಆ್ಯಂಬುಲೆನ್ಸ್ ಚಾಲನೆ: 4 ವಾಹನಗಳಿಗೆ ಡಿಕ್ಕಿ
ಉತ್ತರಕರ್ನಾಟಕದಲ್ಲಿ ಮಳೆ ಜೀವಗಳಿಗೆ ಕಂಟಕವಾಗಿದೆ. ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು 25 ವರ್ಷದ ಕವಿತಾ ಎಂಬ ಯುವತಿಯೊಬ್ಬಳು ಸಾವನಪ್ಪಿದ್ದಾಳೆ.
ಬೆಂಗಳೂರು: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಆ್ಯಂಬುಲೆನ್ಸ್ ಚಲಾಯಿಸಿ, 4 ವಾಹನಗಳಿಗೆ ಡಿಕ್ಕಿ ಹೊಡೆದಿರುವಂತಹ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯ 10ನೇ ಕ್ರಾಸ್ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕ ಸಂಜೀವ್ನನ್ನು ಹಿಡಿದು ಜನ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸಿಡಿಲು ಬಡಿದು ಯುವತಿ ಸಾವು:
ಬೆಳಗಾವಿ: ಉತ್ತರಕರ್ನಾಟಕದಲ್ಲಿ ಮಳೆ ಜೀವಗಳಿಗೆ ಕಂಟಕವಾಗಿದೆ. ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು 25 ವರ್ಷದ ಕವಿತಾ ಎಂಬ ಯುವತಿಯೊಬ್ಬಳು ಸಾವನಪ್ಪಿದ್ದಾಳೆ. ಸವದತ್ತಿ ತಾಲೂಕಿನ ದಡೇರಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಇನ್ನು ಬೆಳಗಾವಿ ನಗರದ ವಂಟಮೂರಿ ಕಾಲೋನಿಯ ಗಣಪತಿ ಮಂಟಪಕ್ಕೆ ನುಗ್ಗಿದ ನೀರು, ಮೂರ್ತಿ ಪ್ರತಿಷ್ಠಾಪನಗೆೆ ತೊಂದರೆಯಾಗಿದೆ.
ಇದನ್ನೂ ಓದಿ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವನ ಬಂಧನ
ಸಿಡಿಲು ಬಡಿದು ಮಹಿಳೆ ದುರ್ಮರಣ:
ಕೋಲಾರ: ಕೋಲಾರದಲ್ಲೂ ಸಿಡಿಲು ಬಡಿದು ಹೊಲದಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯೊಬ್ರು ಬಲಿಯಾಗಿದ್ದಾರೆ. ಮುಳಬಾಗಿಲು ತಾಲೂಕಿನ ಮಣಿಘಟ್ಟೆ ಮಿಟ್ಟೆ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, 28ವರ್ಷದ ರವಳಿ ಎಂಬಾಕೆ ಮೃತ ದುರ್ದೈವಿಯಾಗಿದ್ದಾರೆ.
ಗುದನಾಳದಲ್ಲಿ ಚಿನ್ನವಿಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಬೆಂಗಳೂರು: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುದನಾಳದಲ್ಲಿ ಚಿನ್ನವಿಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೆಐಎಬಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ ಬಂಧಿಸಿದ್ದಾರೆ. ವ್ಯಕ್ತಿ ಬ್ಯಾಂಕಕ್ ನಿಂದ ಬೆಂಗಳೂರಿಗೆ ಬಂದಿದ್ದನು. ಈ ವೇಳೆ ಸ್ಮಗ್ಲರ್ ಅಧಿಕಾರಿಗಳ ಕಣ್ಣುತಪ್ಪಿಸಲು ಮಾತ್ರೆ ಮಾದರಿಯಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿಕೊಂಡು ಗುದನಾಳದಲ್ಲಿ ಚಿನ್ನ ಅಡಗಿಸಿಟ್ಟಿಕೊಂಡಿದ್ದನು. ಖಚಿತ ಮಾಹಿತಿ ಮೆರೆಗೆ ತಡೆದು ತಪಾಸಣೆ ನಡೆಸಿದಾಗ ಪತ್ತೆಯಾಗಿದೆ. ಬಂಧಿತನಿಂದ 22 ಲಕ್ಷ 33 ಸಾವಿರದ 817 ರೂ ಮೌಲ್ಯದ 442 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:14 am, Thu, 1 September 22