AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವನ ಬಂಧನ

ಬೈಕ್​ನಲ್ಲಿ ಅಕ್ರಮವಾಗಿ ಗಾಂಜಾ ಸಾಗಟ ಮಾಡುತ್ತಿದ್ದ ಓರ್ವನನ್ನು ಕ್ಯಾಸಂಬಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವನ ಬಂಧನ
ಸಾಂಧರ್ಬಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on:Aug 31, 2022 | 10:13 PM

Share

ಕೋಲಾರ: ಬೈಕ್​ನಲ್ಲಿ ಅಕ್ರಮವಾಗಿ ಗಾಂಜಾ (Ganja) ಸಾಗಾಟ ಮಾಡುತ್ತಿದ್ದ ಓರ್ವನನ್ನು ಕ್ಯಾಸಂಬಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂದ್ರ ಮೂಲದ‌ ವೆಂಕಟರಾಮಪ್ಪ‌ ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 45 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಆಂದ್ರದಿಂದ ಕರ್ನಾಟಕಕ್ಕೆ ಗಡಿಯಿಂದ ಗಾಂಜಾ ಸಾಗಾಟ ಮಾಡುತ್ತಿದ್ದನು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಸಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಣಿಘಟ್ಟೆಮಿಟ್ಟೆ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆ ಸಾವು: ಮುಳಬಾಗಿಲು ತಾಲೂಕಿನ ಮಣಿಘಟ್ಟೆಮಿಟ್ಟೆ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ರವಳಿ(28) ಮೃತ ಮಹಿಳೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗುದನಾಳದಲ್ಲಿ ಚಿನ್ನವಿಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಬೆಂಗಳೂರು: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುದನಾಳದಲ್ಲಿ ಚಿನ್ನವಿಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೆಐಎಬಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ‌ ಬಂಧಿಸಿದ್ದಾರೆ. ವ್ಯಕ್ತಿ ಬ್ಯಾಂಕಕ್​ ನಿಂದ ಬೆಂಗಳೂರಿಗೆ ಬಂದಿದ್ದನು.

ಈ ವೇಳೆ‌ ಸ್ಮಗ್ಲರ್ ಅಧಿಕಾರಿಗಳ ‌ಕಣ್ಣುತಪ್ಪಿಸಲು ಮಾತ್ರೆ ಮಾದರಿಯಲ್ಲಿ ಪ್ಲಾಸ್ಟಿಕ್​ ಕವರ್ ನಲ್ಲಿ ಸುತ್ತಿಕೊಂಡು ಗುದನಾಳದಲ್ಲಿ ಚಿನ್ನ ಅಡಗಿಸಿಟ್ಟಿಕೊಂಡಿದ್ದನು. ಖಚಿತ ಮಾಹಿತಿ ಮೆರೆಗೆ ತಡೆದು ತಪಾಸಣೆ ನಡೆಸಿದಾಗ ಪತ್ತೆಯಾಗಿದೆ. ಬಂಧಿತನಿಂದ 22 ಲಕ್ಷ 33 ಸಾವಿರದ 817 ರೂ ಮೌಲ್ಯದ 442 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಮುಳ್ಳಯ್ಯನಗಿರಿ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಜೀಪ್​

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ ನಡೆದಿದೆ. ಮಂಜು, ಮಳೆಯಿಂದ ಜೀಪ್​ ನಿಯಂತ್ರಣ ತಪ್ಪಿ ಮೇಲಿನ ರಸ್ತೆಯಿಂದ ಉರುಳಿ ಕೆಳಭಾಗದ ರಸ್ತೆಗೆ ಬಿದ್ದಿದೆ. ಜೀಪ್​ನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು,  ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಎಸ್​ಆರ್​ಟಿಸಿ ಬಸ್  2 ಕಾರುಗಳ ನಡುವೆ ಡಿಕ್ಕಿ-ಇಬ್ಬರು ಸ್ಥಳದಲ್ಲೇ ಸಾವು

ವಿಜಯಪುರ: ಕೆಎಸ್​ಆರ್​ಟಿಸಿ  ಬಸ್ ಮತ್ತು 2 ಕಾರುಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಲ್ಹಾರ ತಾಲೂಕಿನ  ಕುಪಕಡ್ಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ನಡೆದಿದೆ. ಕಲಬುರಗಿ ಮೂಲದ ಮಹಿಳೆ, ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಸೇರಿ ಐವರ ಸ್ಥಿತಿ ಗಂಭೀರವಾಗಿದ್ದು,  ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೊಂದು ಕಾರಿನಲ್ಲಿದ್ದ ವಿಜಯಪುರ ಮೂಲದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತದ ನಂತರ ಸ್ಥಳದಲ್ಲೇ ಕಾರು ಬಿಟ್ಟು ಗಾಯಾಳುಗಳು ಪರಾರಿಯಾಗಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ್ ಅಗ್ನಿ ಅವಘಡ‌ದಿಂದ ಉರಿದ ಟೈರ್, ಪೈಂಟ್ ಮತ್ತು ವೀಲ್ ಅಲೈನ್ಮೆಂಟ್ ಅಂಗಡಿಗಳು

ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಆಕಸ್ಮಿಕ್ ಅಗ್ನಿ ಅವಘಡ‌ದಿಂದ ಉರಿದ ಟೈರ್, ಪೈಂಟ್ ಮತ್ತು ವೀಲ್ ಅಲೈನ್ಮೆಂಟ್ ಅಂಗಡಿಗಳು ಧಗಧಗನೆ ಹೊತ್ತಿ ಉರಿದಿವೆ. ಉಜಿರೆ ಚಾರ್ಮಾಡಿ ರಸ್ತೆಯಲ್ಲಿರುವ ಅನಾರು ಪೈಂಟ್ ಅಂಗಡಿ ಹಾಗೂ ಅನಾರ್ ವಿಲ್ ಅಲೈಮೆಂಟ್ ಅಂಗಡಿ ಬೆಂಕಿಗಾಹುತಿಯಾಗಿವೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Wed, 31 August 22