ತನ್ನ ಜತೆ ಮಾತನಾಡುತ್ತಿಲ್ಲ ಎಂದು ಬಾಲಕಿಯ ಮೇಲೆ ಗುಂಡು ಹಾರಿಸಿದ ಇಬ್ಬರು ಆರೋಪಿಗಳ ಬಂಧನ
16 ವರ್ಷದ ಶಾಲಾ ಬಾಲಕಿಯ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ದೆಹಲಿ: ಸಂಗಮ್ ವಿಹಾರ್‌ನಲ್ಲಿ 16 ವರ್ಷದ ಶಾಲಾ ಬಾಲಕಿಯ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮೂರನೇ ಆರೋಪಿ ಅರ್ಮಾನ್ ಅಲಿ ನಿರ್ದೇಶನದ ಮೇರೆಗೆ ದಾಳಿ ನಡೆಸುತ್ತಿದ್ದ ಆರೋಪಿಗಳನ್ನು ಬಾಬಿ ಮತ್ತು ಪವನ್ ಎಂದು ಪೊಲೀಸರು ಗುರುತಿಸಿದ್ದಾರೆ. ಅಲಿಯನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಬಳಿಯಿದ್ದ ಎರಡು ದೇಶ ನಿರ್ಮಿತ ಪಿಸ್ತೂಲ್‌ಗಳು, ಮೂರು ಕಾಟ್ರಿಡ್ಜ್‌ಗಳು ಮತ್ತು ಒಂದು ಖಾಲಿ ಫೈರ್ಡ್ ಕಾರ್ಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಗಸ್ಟ್ 25 ರಂದು ಸುಮಾರು 3 ಗಂಟೆಗೆ, ಸಂಗಮ್ ವಿಹಾರ್ ಪ್ರದೇಶದಲ್ಲಿ 16 ವರ್ಷ ವಯಸ್ಸಿನ ಬಾಲಕಿಗೆ ಗುಂಡೇಟಿನಿಂದ ಗಾಯವಾಗಿರುವ ಬಗ್ಗೆ ತಿಗ್ರಿ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಗುಂಡಿನ ದಾಳಿ ನಡೆದಿದ್ದು, ಬಾಲಕಿಯ ಭುಜಕ್ಕೆ ಗುಂಡೇಟಿನಿಂದ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ನಡೆದಿರುವ ಘಟನೆ
ನೈನಾ ಮಿಶ್ರಾ ಎಂಬ ಬಾಲಕಿ ದೇವ್ಲಿ ರಸ್ತೆಯಲ್ಲಿರುವ ಕೇಂಬ್ರಿಡ್ಜ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಹನ್ನೊಂದನೇ ತರಗತಿ ಓದುತ್ತಿದ್ದಾಳೆ. ಅಂದು ಶಾಲೆಯಿಂದ ಹಿಂತಿರುಗುತ್ತಿದ್ದಾಗ ಸೈಕಲ್‌ನಲ್ಲಿ ಮೂವರು ಹುಡುಗರು ತನ್ನನ್ನು ಹಿಂಬಾಲಿಸುತ್ತಿದ್ದರು ಎಂದು ಹೇಳಿದ್ದಾಳೆ. ಆಕೆ ಬಿ ಬ್ಲಾಕ್, ಸಂಗಮ್ ವಿಹಾರ್ ತಲುಪಿದಾಗ, ಒಬ್ಬ ಹುಡುಗ ಪಿಸ್ತೂಲಿನಿಂದ ಅವಳ ಮೇಲೆ ಗುಂಡು ಹಾರಿಸಿ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಪೋಲೀಸರ ಪ್ರಕಾರ, ವಿಚಾರಣೆಯ ಸಮಯದಲ್ಲಿ, ಇಬ್ಬರೂ ಆರೋಪಿಗಳು ಹುಡುಗಿ ಮೂರನೇ ಆರೋಪಿ ಅಲಿಯೊಂದಿಗೆ ಎರಡು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ. ಆಕೆ 5 ತಿಂಗಳ ಹಿಂದೆ ಅರ್ಮಾನ್ ಅಲಿ ಜೊತೆಗಿನ ಸಂಪರ್ಕದಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
ಅದೇ ಸಮಯದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಹರಿದಾಡುತ್ತಿದೆ, ಅದರಲ್ಲಿ ವ್ಯಕ್ತಿಯೊಬ್ಬರು ತನ್ನನ್ನು ನೈನಾ ಮಿಶ್ರಾ ಅವರ ತಂದೆ ಎಂದು ಹೇಳಿದ್ದಾರೆ ಮತ್ತು ಈ ವಿಡಿಯೋದಲ್ಲಿ ತಮ್ಮ ನೋವು ಮತ್ತು ಅಸಹಾಯಕತೆಯನ್ನು ಹಂಚಿಕೊಳ್ಳುತ್ತಿದ್ದಾರೆ. ನನ್ನ ಹೆಸರು ಪಂಕಜ್ ಮಿಶ್ರಾ, ನಾನು ಬ್ರಾಹ್ಮಣ ಸಮಾಜಕ್ಕೆ ಸೇರಿದವನು. ನನ್ನ ಮಗಳು ನೈನಾ ಮಿಶ್ರಾ ತನ್ನ ತಾಯಿಯೊಂದಿಗೆ ಶಾಲೆಯಿಂದ ಬರುತ್ತಿದ್ದಳು. ಬಹಳ ದಿನಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದ ಅಲಿ ಎಂಬ ಮುಸ್ಲಿಂ ಹುಡುಗ ಶಾಲೆಯಿಂದ ಬರುತ್ತಿದ್ದಾಗ ಹಿಂದಿನಿಂದ ಗುಂಡು ಹಾರಿಸಿದ್ದಾನೆ ಎಂದು ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಹುಡುಗಿಯ ಈ ಬದಲಾವಣೆಯಿಂದ ಅಲಿ ಅತೃಪ್ತಿ ಹೊಂದಿದ್ದೇನೆ. ಅಲಿ ನಂತರ ಬಾಬಿ ಮತ್ತು ಪವನ್ ಅವರನ್ನು ಸಂಪರ್ಕಿಸಿ ಹುಡುಗಿಯ ಮೇಲೆ ದಾಳಿ ಮಾಡುವ ಯೋಜನೆಯನ್ನು ಹಾಕಿಕೊಂಡು ಅವರ ಸಹಾಯ ಪಡೆದಿದ್ದಾನೆ. ಆರೋಪಿಗಳು ಮದ್ಯವ್ಯಸನಿಗಳಾಗಿದ್ದರು. ಭಾರತೀಯ ದಂಡ ಸಂಹಿತೆಯ 307, ಮತ್ತು 34 – ಮತ್ತು ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 27,54, 59 ರ ಅನೇಕ ವಿಭಾಗಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ಬಾಬಿ ಮತ್ತು ಪವನ್ ಇಬ್ಬರನ್ನೂ ಬಂಧಿಸಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ದಕ್ಷಿಣ ಡಿಸಿಪಿ ತಿಳಿಸಿದ್ದಾರೆ.
Published On - 11:00 am, Thu, 1 September 22