ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್(Tipu Sulthan) ಭಾವ ಚಿತ್ರ ಇದ್ದ ಬ್ಯಾನರ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೀಣ್ಯದ ನಾಗಸಂದ್ರದಲ್ಲಿ ಹಲಸೂರು ಗೇಟ್ ಠಾಣೆ ಪೊಲೀಸರು ಪುನೀತ್ ವಶಕ್ಕೆ ಪಡೆದಿದ್ದಾರೆ.
ಆಗಸ್ಟ್ 13ರ ರಾತ್ರಿ ನಗರದ ಕೆ.ಆರ್.ವೃತ್ತದಲ್ಲಿ ಹಾಕಿದ್ದ ಕಾಂಗ್ರೆಸ್ನ ಟಿಪ್ಪು ಬ್ಯಾನರ್ ಹರಿದು ಪುನೀತ್ ಕೆರೆಹಳ್ಳಿ ದರ್ಪ ಮೆರೆದಿದ್ದ. ಅಲ್ಲದೆ ಕೃತ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿದ್ದ. ಈ ಬಗ್ಗೆ ಕಾಂಗ್ರೆಸ್ ಮುಖಂಡ ಮಂಜುನಾಥ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಶಿವಮೊಗ್ಗದಲ್ಲಿನ ಸಾವರ್ಕರ್ ಭಾವಚಿತ್ರದ ವಿವಾದ ಹಿನ್ನಲೆ ಪ್ರತಿಕಾರವಾಗಿ ಕಾಂಗ್ರೆಸ್ ಅಳವಡಿಸಿದ್ದ ಟಿಪ್ಪು ಭಾವ ಚಿತ್ರವನ್ನು ಪುನೀತ್ ಹರಿದಿದ್ದ. ಸದ್ಯ ಪ್ರಕರಣ ಸಂಬಂಧ ಪೊಲೀಸರು, ಚಿಕ್ಕಪ್ಪನ ಮನೆಯಲ್ಲಿ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗಿದ್ದ ಪುನೀತ್ ಮತ್ತು ಸ್ನೇಹಿತರನ್ನು ವಶಕ್ಕೆ ಪಡೆದಿದ್ದಾರೆ.
ಪುನೀತ್ ಕೆರೆಹಳ್ಳಿ, ಅನಂತ್ ರಾವ್, ಕಿರಣ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಠಾಣೆಗೆ ಕರೆತಂದು ಬಂಧನ ಪ್ರಕ್ರಿಯೆ ಮುಗಿಸಿದ್ದಾರೆ. ಇಂದು ಸಂಜೆಯ ನಂತರ ನ್ಯಾಯಾಧೀಶರ ನಿವಾಸಕ್ಕೆ ಬಂಧಿತರನ್ನು ಕರೆ ತರಲಾಗುತ್ತೆ.
ಇದನ್ನೂ ಓದಿ: ಟಿಪ್ಪು ಭಾವಚಿತ್ರ ಇದ್ದ ಬ್ಯಾನರ್ ಹರಿದುಹಾಕಿದ ಪುನೀತ್ ಕೆರೆಹಳ್ಳಿ ಆ್ಯಂಡ್ ಟೀಂ; ಹೋರಾಟದ ಎಚ್ಚರಿಕೆ ನೀಡಿದ ಡಿಕೆಶಿ
ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ನಡುವೆ ಹೋಲಿಕೆ ಸರಿಯಲ್ಲ
ಇನ್ನು ಮತ್ತೊಂದು ಕಡೆ ಬ್ಯಾನರ್ಗಳ ಬಗ್ಗೆ ಆಕ್ಷೇಪ ಇದ್ದರೆ ದೂರು ಸಲ್ಲಿಸಬೇಕು ಎಂದು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ. ಯಾರೂ ಸೌಹಾರ್ದತೆ ಹಾಳುಮಾಡುವ ಕೆಲಸ ಮಾಡಬಾರದು. ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ನಡುವೆ ಹೋಲಿಕೆ ಸರಿಯಲ್ಲ ಎಂದರು. ಇದೇ ವೇಳೆ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಮೈದಾನ ಪಾಲಿಕೆಗೆ ಸೇರಿರುವ ಜಾಗ. ಗಣೇಶ ಪ್ರತಿಷ್ಠಾಪನೆ ಬಗ್ಗೆ ಪಾಲಿಕೆ ನಿರ್ಧಾರ ಕೈಗೊಳ್ಳುತ್ತೆ ಎಂದರು.
Published On - 2:44 pm, Sun, 14 August 22