ಯತೀಂದ್ರ ಲಿಸ್ಟ್ ವಿಡಿಯೋ ವೈರಲ್: ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಕುಮಾರಸ್ವಾಮಿ

ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್​ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಈಗ ಸಿದ್ದರಾಮಯ್ಯ ಸರ್ಕಾರದ್ದೂ ಪೋಸ್ಟರ್ ಹಾಕಬೇಕೋ ಬೇಡವೋ ಎಂದು ಕಿಡಿ ಕಾರಿದ್ದಾರೆ. ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.

ಯತೀಂದ್ರ ಲಿಸ್ಟ್ ವಿಡಿಯೋ ವೈರಲ್: ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಕುಮಾರಸ್ವಾಮಿ
ಹೆಚ್‌ಡಿ ಕುಮಾರಸ್ವಾಮಿ
Follow us
ಪ್ರಸನ್ನ ಗಾಂವ್ಕರ್​
| Updated By: ಆಯೇಷಾ ಬಾನು

Updated on:Nov 16, 2023 | 1:14 PM

ಬೆಂಗಳೂರು, ನ.16: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳು ದಿನಕ್ಕೊಂದು ಆರೋಪ ಮಾಡುತ್ತಿವೆ. ವರ್ಗಾವಣೆ ದಂಧೆ, ಕಮಿಷನ್ ದಂಧೆ ಅಂತೆಲ್ಲ ಸಿಎಂ, ಡಿಸಿಎಂ ವಿರುದ್ಧ ವಿಪಕ್ಷಗಳ ನಾಯಕರು ಹರಿಹಾಯ್ತಾರೆ. ಇದೇ ಹೊತ್ತಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಾನ್ ಹೇಳಿರೋ ಲಿಸ್ಟ್ ಫೈನಲ್ ಮಾಡಿ ಅಂತಾ ಹೇಳಿರುವ ಸಂಭಾಷಣೆ ಇದೀಗ ಮತ್ತೆ ವಿಪಕ್ಷಗಳಿಗೆ ಅಸ್ತ್ರವಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇತ್ತ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರು (HD Kumaraswamy) ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್​ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಈಗ ಸಿದ್ದರಾಮಯ್ಯ ಸರ್ಕಾರದ್ದೂ ಪೋಸ್ಟರ್ ಹಾಕಬೇಕೋ ಬೇಡವೋ ಎಂದು ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ದೀಪಾವಳಿ ಆಚರಣೆ ನಂತರ ದಿನಕ್ಕೊಂದು ಸುದ್ದಿಗಳು ನಿಮಗೇ ಹುಡುಕಿಕೊಂಡು ಬರುತ್ತಿವೆ. ಹೆಚ್​ಡಿ ಕುಮಾರಸ್ವಾಮಿ ಮನೆಗೆ ಸಾರ್ವಜನಿಕ ಲೈಟ್ ಕಂಬದಿಂದ ವಿದ್ಯುತ್‌ ಕದ್ದಿದ್ದಾರೆ ಅಂತಾ ಕಾಂಗ್ರೆಸ್ ಮಹಾನ್ ನಾಯಕರು ಎಲೆಕ್ಟ್ರಿಕಲ್ ಸ್ಪೀಡ್‌ನಲ್ಲಿ ಬಂದ್ರು. ಯಾರೋ ಮಾಡಿದ ಅಚಾತುರ್ಯಕ್ಕೆ ನಾನೇ ಅದರ ಹೊಣೆ ಹೊರುತ್ತೇನೆ ಅಂದಿದ್ದೇನೆ. JDS ಕಚೇರಿ ಮುಂದೆ ನಾಲ್ಕೈದು ವೆರೈಟಿ ಪೋಸ್ಟರ್ ಮಾಡಿ ಅಂಟಿಸಿದ್ರು. ಇದೊಂದು ಚಾಳಿ ಕಾಂಗ್ರೆಸ್ ನಾಯಕರಿಗೆ ಶುರುವಾಗಿದೆ. ಕಳೆದ ಬಾರಿ ಪೇಸಿಎಂ ಪೋಸ್ಟರ್ ಹಾಕಿ ದೊಡ್ಡಮಟ್ಟದ ಪ್ರಚಾರ ಮಾಡಿದ್ರು. ಹೈದರಾಬಾದ್‌ಗೂ ಹೋಗಿ ಪೇಸಿಎಂ ಪೋಸ್ಟರ್ ಹಾಕಿ ಬಂದ್ರು. ಈಗ ಚುನಾವಣೆಗೆ ಸೂಟ್‌ಕೇಸ್‌ ಗಂಟು ಸಮೇತ ಹೈದರಾಬಾದ್‌ಗೆ ಹೋಗ್ತಿದ್ದಾರೆ. ಈಗ ಸಿದ್ದರಾಮಯ್ಯ ಸರ್ಕಾರದ್ದೂ ಪೋಸ್ಟರ್ ಹಾಕಬೇಕೋ ಬೇಡವೋ? ಎಂದು ಹೆಚ್​ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್: ಹಲವು ಸಚಿವರ ಕೆಂಗಣ್ಣಿಗೂ ಗುರಿಯಾದ ಈ ಮಹದೇವ್ ಯಾರು?

ಟ್ರಾನ್ಸಫರ್ ದಂಧೆ ಬಗ್ಗೆ ಹಲವಾರು ವಿಚಾರ ನಾನು ಹೇಳಿದ್ದೆ. ಕುಮಾರಸ್ವಾಮಿ ಅಸಹಾಯಕತೆ ಬುದ್ದಿಭ್ರಮಣೆ ಅಂತ ಹೇಳಿದ್ರು. ಎಲ್ಲ ಮಂತ್ರಿಗಳೂ ನನ್ನ ಒಬ್ಬನ ಮೇಲೆ ಹೋರಾಟ ಮಾಡಿದರು. ಆದರೆ ಏಕಾಂಗಿ ಕೂಗು ನನ್ನದಾಗಿತ್ತು. ಇವತ್ತಿನ ವಿಡಿಯೋ ಹೊರಗೆ ಬಂದಿದೆ. ಶಾಸಕರ ಪತ್ರ ಸಿಎಂ ಕಚೇರಿಗೆ ಕೊಂಡೊಯ್ದರೆ ಕಾಗದ ಸಾಕಾಗಲ್ಲ 30 ಲಕ್ಷ ದುಡ್ಡೆಲ್ಲಿ ಅಂತ ಕೇಳ್ತಾರೆ ಅಂದಿದ್ದೆ. ಎಸ್ ಎಸ್ ಡಿ ಓಎಸ್ಡಿ ಎಲ್ಲರನ್ನೂ ಫಿಕ್ಸ್ ಮಾಡಿಕೊಂಡಿದ್ದಾರೆ.

ಸಾರ್ವಜನಿಕವಾಗಿ ಈ ರೀತಿಯಾದ್ರೆ 4 ಗೋಡೆ ಮಧ್ಯೆ ಇನ್ನೇನು ಆಗ್ತಿದೆ?

ಡಾ.ಯತೀಂದ್ರಗೆ ಫೋನ್ ಕರೆ ಮಾಡಿದ್ದು ಯಾರು? ಹಲೋ ಅಪ್ಪ ಅಂತಾ ಯತೀಂದ್ರ ಹೇಳಿದ್ದು ಯಾರಿಗೆ? ವಿವೇಕಾನಂದ ಯಾರು?. ನಾಲ್ಕೈದು ಲಿಸ್ಟ್​ ಕೊಟ್ಟಿದ್ದು ಏನು? ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಫೋನ್ ಮಾಡಿ ಕೇಳಿದ್ಯಾರು? ಅದು ಸಿಎಂ ಪರಿಹಾರ ನಿಧಿಯ ಹೆಸರುಗಳು. ಒಬ್ಬ ಮುಖ್ಯಮಂತ್ರಿ ಫೋನ್ ಮಾಡಿ ಲಿಸ್ಟ್ ಬಗ್ಗೆ ಮಾತಾಡ್ತಾರೆ. ಯಾರು ಮಹದೇವ?, ಯಾರೋ ಲೇಬರ್​ ಇನ್ಸ್​​ಪೆಕ್ಟರ್​ ಅವನು. ಆರ್​.ಮಹದೇವ್​ನ ವಿಶೇಷ ಕರ್ತವ್ಯ ಏನು. ಸಾರ್ವಜನಿಕವಾಗಿ ಈ ರೀತಿಯಾದ್ರೆ 4 ಗೋಡೆ ಮಧ್ಯೆ ಇನ್ನೇನು ಆಗ್ತಿದೆ. ಸಿಎಂ ಕೆಲಸ ಅಂದರೆ ಮಗನಿಗೆ ಫೋನ್​ ಮಾಡಿ ಕೇಳಬಹುದಾ? ಸಾರ್ವಜನಿಕರ ಹಣ ಲೂಟಿ ಮಾಡಿ ಎಂದು ಅಧಿಕಾರ ಕೊಟ್ಟಿದ್ದಾರಾ? ಫೋನ್ ಮಾಡಿ ಹೇಳಿದ್ದಾರಲ್ಲ ಅದರ ದಾಖಲೆ ಬಿಡುಗಡೆ ಮಾಡಿ. ಯಾವ ಶಾಲೆಗಳ ಸಿಎಸ್​​ಆರ್​ ಫಂಡ್​ ಅಂತಾ ಬಿಡುಗಡೆ ಮಾಡಲಿ ಎಂದು ಸಿಎಂ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

H.D.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಟಿವಿ9 ವಿಡಿಯೋ ಪ್ರಸಾರ

H.D.ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹೇಳಿದ್ದ ಟಿವಿ9 ವಿಡಿಯೋ ಪ್ರಸಾರ ಮಾಡಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ದಾವಣಗೆರೆಯಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಹೇಳಿಕೆ ಕೊಟ್ಟಿದ್ರು. ಯಡಿಯೂರಪ್ಪ ಸರ್ಕಾರದಲ್ಲಿ ವಿಜಯೇಂದ್ರದೆ ಎಲ್ಲ ಅಧಿಕಾರ ಅಂತ ಸಿದ್ದರಾಮಯ್ಯ ಹೇಳಿದ್ರು. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಚೆಕ್ ನಲ್ಲಿ ಹಣ ತೆಗೆದುಕೊಳ್ಳಿತ್ತಿದ್ರು ಊಗ ಆರ್ಟಿಜಿಎಸ್ ನಲ್ಲಿ ತೆಗೆದುಕೊಳ್ತಾರೆ ಅಂತ ಸಿದ್ದರಾಮಯ್ಯ ಅವತ್ತು ಹೇಳಿದ್ರು ಎಂಬ ವಿಡಿಯೋವನ್ನು ಹೆಚ್​ಡಿಕೆ ಪ್ರಸಾರ ಮಾಡಿದರು.

ಸಿದ್ದರಾಮಯ್ಯ ಹಳೆಯದನ್ನ ಮರೆತಿದ್ರೆ ನೆನಪು ಈಗ ಮಾಡಿಕೊಳ್ಳಲಿ. ಕೆರೆ ಕುಂಟೆ ನುಂಗಿ ಹಾಕಿದ್ದೀರಿ. ಮಾನ ಮರ್ಯಾದೆ ಆತ್ಮಸಾಕ್ಷಿ ಇದ್ರೆ. ಇದಕ್ಕಿಂತ ಏನು ಸಾಕ್ಷಿ ಬೇಕು? ಕೋಮುವಾದಿ ಜನತಾದಳ ಅಂತ ನಿನ್ನೆ ಹೇಳಿದ್ರಲ್ಲ ದೊಡ್ಡ ದೊಡ್ಡದಾಗಿ, ಕಾಂಗ್ರೆಸ್ ಒಳ್ಳೆ ನೀರು ತೆಗೆದುಕೊಳ್ಳಲ್ಲ ಚರಂಡಿ ನೀರೇ ತೆಗೆದುಕೊಳ್ಳುವುದು ಎಂದು ಕಿಡಿಕಾರಿದರು.

ಜೆಡಿಎಸ್​ನವ್ರು ಮಾಯ, ಮಂತ್ರ ಮಾಡ್ತಾರೆಂದು ಸಿಎಂ ಹೇಳಿಕೆ ವಿಚಾರಕ್ಕೆ ಹೆಚ್​.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 2ನೇ ಬಾರಿ ಸಿಎಂ ಆಗಿ ಎಲ್ಲಿಗೆ ಹೋಗ್ತಿದ್ರಿ ಎಂದು ಆತ್ಮಸಾಕ್ಷಿ ಕೇಳಿಕೊಳ್ಳಿ. ತನಿಖೆಗೆ ಹೆದರಿ ಬಿಜೆಪಿ ಜತೆ ಸೇರಿದ್ದಾರೆಂದು ಸಚಿವರೊಬ್ಬರು ಹೇಳಿದ್ದಾರೆ. ತನಿಖೆ ಬಗ್ಗೆ ಹೇಳಿದವರು ಆಗ ನನ್ನ ಜೊತೆ ಹೋರಾಟ ಮಾಡಿದ್ದರು. ದಾಸನಪುರ ಹೋಬಳಿಯಲ್ಲಿ ಕೆರೆಯನ್ನೇ ಮಾಯ ಮಾಡಿದ್ದರಲ್ಲಾ? ಆ ಕೆರೆಯನ್ನು ನಾನು ನುಂಗಿ ಹಾಕಿದ್ನಾ? H.D.ಕುಮಾರಸ್ವಾಮಿ ರಾಜಕೀಯ ಮಾಡಿದ್ದು ಕಲೆಕ್ಷನ್​​ಗಾಗಿ ಅಲ್ಲ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:05 pm, Thu, 16 November 23

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್