‘ಸರ್ವೆ ಜನೋ ಸುಖಿನೋ ಭವಂತು’ ಎಂಬ ವಾಜಪೇಯಿ ತತ್ತ್ವವನ್ನು ಸಿಎಂ ಬೊಮ್ಮಾಯಿ ಪಾಲಿಸುತ್ತಿಲ್ಲ ಎಂದು HDK ಟ್ವೀಟ್

| Updated By: ಆಯೇಷಾ ಬಾನು

Updated on: Jul 29, 2022 | 6:12 PM

ಮುಖ್ಯಮಂತ್ರಿ ನಡೆ ಹಿಂಸೆಯನ್ನು ಪ್ರಚೋದಿಸುವಂತಿದೆ. ಕೊಲೆಯಾದ ಇಬ್ಬರೂ ಯುವಕರ ಮನೆಗಳಿಗೆ ಸಿಎಂ ಭೇಟಿ ನೀಡಿ. ಕೊಲೆಗೆಡುಕರಿಗೆ ಕಠಿಣ ಸಂದೇಶ ರವಾನಿಸಬೇಕಿತ್ತು, ಹಾಗೆ ಮಾಡಲಿಲ್ಲ.

‘ಸರ್ವೆ ಜನೋ ಸುಖಿನೋ ಭವಂತು’ ಎಂಬ ವಾಜಪೇಯಿ ತತ್ತ್ವವನ್ನು ಸಿಎಂ ಬೊಮ್ಮಾಯಿ ಪಾಲಿಸುತ್ತಿಲ್ಲ ಎಂದು HDK ಟ್ವೀಟ್
ಹೆಚ್ ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆ ವಿಚಾರವಾಗಿ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಟ್ವೀಟ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಯವರ(Basavaraj Bommai) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಧರ್ಮ ಪಾಲಿಸಿ ಎಂದು ಹಿಂದೊಮ್ಮೆ ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee) ಹೇಳಿದ್ದರು. ರಾಜಧರ್ಮ ಪಾಲಿಸುವುದಿರಲಿ ಸ್ವಧರ್ಮದ ತತ್ತ್ವವನ್ನೇ ಪಾಲಿಸುತ್ತಿಲ್ಲ ಎಂದು ಗುಡುಗಿದ್ದಾರೆ.

ಬೆಳಗ್ಗೆ ಎಷ್ಟೇ ಹೆಚ್ಡಿಕೆ ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿಯವರಿಗೆ ಪ್ರಶ್ನೆಗಳನ್ನು ಕೇಳಿ ವಾಗ್ದಾಳಿ ನಡೆಸಿದ್ದರು. ಸಿಎಂ ಬೊಮ್ಮಾಯಿಯವರು ಮಂಗಳೂರಿನಲ್ಲಿ ಇದ್ದಾಗಲೇ ಮೂರನೇ ಕೊಲೆಯಾಗಿದೆ. ಅಷ್ಟರಲ್ಲಿ ಸಿಎಂ ಸಾಹೇಬರು ಜಿಲ್ಲೆಯಿಂದ ಕಾಲ್ಕಿತ್ತಿದ್ದಾರೆ. ಅಲ್ಲೇ ಉಳಿದು ಪರಿಸ್ಥಿತಿ ಅವಲೋಕಿಸಿ, ಹಂತಕರನ್ನ ಬಂಧಿಸುವಂತೆ ಕಟ್ಟಾಜ್ಞೆ ಮಾಡುವ ಧೈರ್ಯ ತೋರಲಿಲ್ಲ. ಅವರ ಅಧೈರ್ಯಕ್ಕೆ ಕಾರಣವೇನು?, ಕಾಣದ ಕೈಗಳ ಒತ್ತಡವೇನಾದರೂ ಉಂಟಾ? ಎಂದು ಪ್ರಶ್ನಿಸಿದ್ದರು. ಈಗ ಮತ್ತೆ ಸರಣಿ ಟ್ವೀಟ್ ಮೂಲಕ ಟೀಕೆ ಮಾಡಿದ್ದಾರೆ.

ಕೊಲೆಯಾದ ಇಬ್ಬರೂ ಯುವಕರ ಮನೆಗಳಿಗೆ ಸಿಎಂ ಭೇಟಿ ನೀಡಿ

‘ಸರ್ವೇ ಜನ ಸುಖಿನೋ ಭವಂತು’ ತತ್ತ್ವವನ್ನು ಸಿಎಂ ಪಾಲಿಸುತ್ತಿಲ್ಲ. ಬೊಮ್ಮಾಯಿ ಇಡೀ ಕರ್ನಾಟಕಕ್ಕೆ ಸಿಎಂ, ಕೇವಲ ಬಿಜೆಪಿಗಷ್ಟೇ ಅಲ್ಲ. ಸಾಂವಿಧಾನಿಕವಾಗಿ ಸ್ವೀಕರಿಸಿದ ಪ್ರಮಾಣವಚನದ ಪಾವಿತ್ರ್ಯತೆಗೆ ಚ್ಯುತಿಯಾಗುತ್ತಿದೆ. ನಿನ್ನೆಯ ದಿನ ಸಿಎಂ ಬಸವರಾಜ ಬೊಮ್ಮಾಯಿ ಚ್ಯುತಿ ತಂದಿದ್ದಾರೆ. ಹತ್ಯೆಹತ್ಯೆಯೇ ಉತ್ತರವಲ್ಲ, ಪ್ರತೀಕಾರಕ್ಕೆ ಪ್ರತೀಕಾರ ಪ್ರತ್ಯುತ್ತರವಲ್ಲ. ಮುಖ್ಯಮಂತ್ರಿ ನಡೆ ಹಿಂಸೆಯನ್ನು ಪ್ರಚೋದಿಸುವಂತಿದೆ. ಕೊಲೆಯಾದ ಇಬ್ಬರೂ ಯುವಕರ ಮನೆಗಳಿಗೆ ಸಿಎಂ ಭೇಟಿ ನೀಡಿ. ಕೊಲೆಗೆಡುಕರಿಗೆ ಕಠಿಣ ಸಂದೇಶ ರವಾನಿಸಬೇಕಿತ್ತು, ಹಾಗೆ ಮಾಡಲಿಲ್ಲ. ಮಂಗಳೂರಿನಲ್ಲಿ ಸಿಎಂ ಇದ್ದಾಗಲೇ ಇನ್ನೊಂದು ಕೊಲೆ ನಡೆಯಿತು. ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ? ವೈಫಲ್ಯ ಮುಚ್ಚಿಕೊಳ್ಳಲು ಈಗ ‘ಬುಲ್ಡೋಜರ್’ ಜಪ ಮಾಡ್ತಿದ್ದಾರೆ. ರಾಜ್ಯದಲ್ಲಿ ಯುಪಿ ಸಿಎಂ ಯೋಗಿ ಅದಿತ್ಯನಾಥ್ ಮಾದರಿ ಎನ್ನುತ್ತಿದ್ದಾರೆ. ಯುಪಿ ಎನ್ನುವುದು ಕರ್ನಾಟಕಕ್ಕೆ ಮಾತ್ರವಲ್ಲ, ಯಾರಿಗೂ ಮಾದರಿ ಅಲ್ಲ. ಮಾದರಿ ಅನುಕರಣೆ ಎನ್ನುವುದು ಹೊಣೆಗೇಡಿತನದ ಪರಮಾವಧಿ ಎಂದು ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.

Published On - 6:12 pm, Fri, 29 July 22