ಬೆಂಗಳೂರು: ಬೆಂಗಳೂರಿನ ಕೇಂದ್ರ ಭಾಗದಲ್ಲಿ ಎರಡು ಪ್ರಮುಖವಾದ ಯೋಜನೆಗೆ ಚಾಲನೆ ನೀಡಲಾಗಿದೆ. ನಿಜವಾಗಿಯೂ ಆರೋಗ್ಯ ಸೇವೆ ಸಾಮಾನ್ಯರಿಗೆ ಮುಟ್ಟುವ ಯೋಜನೆ ಮಲ್ಲೇಶ್ವರಂನಿಂದ ಪ್ರಾರಂಭ ಆಗಿದೆ. ಸಮಸ್ಯೆಯನ್ನು ಸವಾಲು ಆಗಿ ಸ್ವೀಕರಿಸಿ ಅದನ್ನು ಮೆಟ್ಟಿಲಾಗಿ ನಿಂತು ಅಶ್ವತ್ಥ್ ನಾರಾಯಣ್ ಧೀಮಂತಿಕೆ ತೋರಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಮಲ್ಲೇಶ್ವರಂ ಕ್ಷೇತ್ರದಲ್ಲಿ ಹೈ-ಟೆಕ್ ಡಯಾಗ್ನೋಸ್ಟಿಕ್ ವ್ಯವಸ್ಥೆಯುಳ್ಳ ಎಕ್ಸ್‌ಪ್ರೆಸ್ ಕ್ಲಿನಿಕ್, ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಳ್ಳಾರಿ ರಸ್ತೆಯಲ್ಲಿ ಸ್ಕೈವಾಕ್ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಅತ್ಯಂತ ಸುಲಭವಾಗಿ ಚಿಕಿತ್ಸೆ ಸಿಗುವ ಆರೋಗ್ಯ ಕೇಂದ್ರ ನೋಡಿ ಬಹಳ ಸಂತೋಷ ಆಗಿದೆ. ಡಿಜಿಟಲ್ ತಂತ್ರಜ್ಞಾನ ನೋಡಿದಾಗ ಬಹಳ ಸಂತೋಷ ಆಯ್ತು ಎಂದು ಹೇಳಿದರು.
80 ಕೋಟಿ ಹಣ ಬಿಡುಗಡೆ: ಸಿಎಂ ಬೊಮ್ಮಾಯಿ
ವಿಜ್ಞಾನ, ತಂತ್ರಜ್ಞಾನ ಅಳವಡಿಸಿಕೊಂಡಾಗ ಬಹಳ ಬೇಗ ಸಮಸ್ಯೆ ಸುಧಾರಣೆ ಆಗುತ್ತದೆ. ಇಲ್ಲಿ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಪಡೆಯಬಹುದು. ಆದರೆ ಖಾಸಗಿಯಲ್ಲಿ ಅತಿ ಹೆಚ್ಚು ಹಣ ಖರ್ಚು ಮಾಡುವುದು ಬಡವರಿಗೆ ಆಗಲ್ಲ. ಅದಕ್ಕಾಗಿ ಮೋದಿ ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು. ವಿಶೇಷವಾಗಿ ಇಲ್ಲಿಗೆ 80 ಕೋಟಿ ಹಣವನ್ನು ನೀಡಿದ್ದೇನೆ. ಈಗಾಗಲೇ ಮಲ್ಲೇಶ್ವರಂನಲ್ಲಿ 50 ಬೆಡ್ ಜಯದೇವ ಆಸ್ಪತ್ರೆ ಕಾರ್ಯ ಆರಂಭ ಆಗಿದೆ. ಬಿಬಿಎಂಪಿಯ ಪ್ರತಿಯೊಂದು ವಾರ್ಡ್ಗೆ ನಮ್ಮ ಕ್ಲಿನಿಕ್ ಮಾಡಬೇಕಾಗಿದೆ. ಮಲ್ಲೇಶ್ವರಂನಿಂದಲೇ ಈಗಾಗಲೇ ಪ್ರಾರಂಭ ಆಗಿದೆ. 243 ವಾರ್ಡ್ನಲ್ಲಿ ಪ್ರತಿಯೊಂದು ನಮ್ಮ ಕ್ಲಿನಿಕ್ ಆಗಬೇಕು. ಮಲ್ಲೇಶ್ವರಂನ ಪ್ರಗತಿ ಹೀಗೆ ಮುಂದುವರಿಯಲಿ. ಬರೀ ಆರೋಗ್ಯ ಅಷ್ಟೇ ಅಲ್ಲ. ಶಿಕ್ಷಣ, ಉದ್ಯೋಗ ಈ ಕ್ಷೇತ್ರದಲ್ಲಿ ಸಿಗಲಿ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಸಚಿವ ಹಾಗೂ ಸ್ಥಳೀಯ ಶಾಸಕ ಡಾ.ಅಶ್ವತ್ಥ್ ನಾರಾಯಣ ಉಪಸ್ಥಿತರಿದ್ದರು.
ಬೊಮ್ಮಾಯಿ ಭೇಟಿ ಮಾಡಲಿರುವ ಪಿಣರಾಯಿ ವಿಜಯನ್
ನಾಳೆ ಬೆಂಗಳೂರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಭೇಟಿ ನೀಡಲಿದ್ದು, ನಾಳೆ ಬೆಳಗ್ಗೆ 9.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಬೊಮ್ಮಾಯಿ ಭೇಟಿ ಆಗಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:06 pm, Sat, 17 September 22