ಬೆಂಗಳೂರನ್ನ ಬಿಟ್ಟೂ ಬಿಡದೆ ಕಾಡ್ತಿದೆ ಮಹಾಮಳೆ: ಕೆರೆಗಳಾದ ರಸ್ತೆಗಳು, ಮನೆಗಳು ಜಲಾವೃತ

| Updated By: ಆಯೇಷಾ ಬಾನು

Updated on: Nov 22, 2021 | 8:44 AM

ಬೆಂಗಳೂರಿನ ವಿದ್ಯಾರಣ್ಯಪುರಂ, ಹೆಬ್ಬಾಳ, ಯಲಹಂಕ, ಆನೆಕಲ್‌ ಹಾಗೂ ಸುತ್ತಮುತ್ತಲಿನ ಲೇಔಟ್‌ಗಳಲ್ಲಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅದ್ರಲ್ಲೂ ವಿದ್ಯಾರಣ್ಯಪುರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಗಿದೆ.

ಬೆಂಗಳೂರು: ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದಾನೆ, ಧಾರಾಕಾರ ಮಳೆಗೆ ರಸ್ತೆಗಳೇ ಕೆರೆಗಳಂತಾಗಿವೆ, ಹುಳ, ಹಪಟೆಗಳು ಮನೆ ಹೊಕ್ಕಿವೆ, ಸಂಡೇ ಹಿನ್ನೆಲೆ ಸಂಜೆವೇಳೆ ಮನೆಯಿಂದ ಹೊರಬಂದಿದ್ದ ಮಂದಿ ವರುಣನ ಆರ್ಭಟಕ್ಕೆ ಬೆಚ್ಚಿ ಬಿದ್ದಿದ್ದಾರೆ.

ಬೆಂಗಳೂರಿನ ವಿದ್ಯಾರಣ್ಯಪುರಂ, ಹೆಬ್ಬಾಳ, ಯಲಹಂಕ, ಆನೆಕಲ್‌ ಹಾಗೂ ಸುತ್ತಮುತ್ತಲಿನ ಲೇಔಟ್‌ಗಳಲ್ಲಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅದ್ರಲ್ಲೂ ವಿದ್ಯಾರಣ್ಯಪುರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಗಿದೆ.

YouTube video player

ಕಳೆದೊಂದು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಸುರೀತಿರೋ ಅಕಾಲಿಕ ಮಳೆ ಭಾರಿ ಅವಾಂತರಗಳನ್ನು ಸೃಷ್ಟಿಸಿದೆ. ನಿನ್ನೆ ಬೆಳಗ್ಗೆ ವೇಳೆಗೆ ಬೆಂಗಳೂರಿಗರಿಗೆ ಸೂರ್ಯನ ದರ್ಶನ ಸಿಕ್ಕಿತ್ತಾದ್ರೂ, ಸಂಜೆ ವೇಳೆಗೆ ಮಳೆರಾಯ ಮತ್ತೆ ಎಂಟ್ರಿಕೊಟ್ಟಿದ್ದ. ಧಾರಾಕಾರ ಮಳೆಯಿಂದ ವಿದ್ಯಾರಣ್ಯಪುರದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಮನೆಯಲ್ಲಿದ್ದ ವಸ್ತುಗಳು ನೀರುಪಾಲಾದ್ವು. ಯಲಹಂಕದ ಜಕ್ಕೂರು ರಸ್ತೆ ಜಲಾವೃತವಾದ ಕಾರಣ ಸುರಭಿ ಲೇಔಟ್‌ಗೂ ಮಳೆ ನೀರು ನುಗ್ಗಿದೆ, ರಾಜಕಾಲುವೆ ತುಂಬಿ ರಸ್ತೆಯಲ್ಲೇ ನೀರು ಹರಿದಿದ್ದು, ಭಾರಿ ಅವಾಂತರ ಸೃಷ್ಟಿಯಾಗಿದೆ.

Published on: Nov 22, 2021 08:39 AM