ಬೆಂಗಳೂರಲ್ಲಿ ಭಾರೀ ಮಳೆ: ಕೋಡಿ ಒಡೆದ ಹೊಸಕೆರೆಹಳ್ಳಿ ಕೆರೆ, ಜಲಾವೃತಗೊಂಡ ಮನೆಗಳು

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಅಪಾರ ಹಾನಿಯಾಗಿದೆ. ಭಾರೀ ಮಳೆಯಿಂದ ಹೊಸಕೆರೆಹಳ್ಳಿಯ ಕೆರೆ ಉಕ್ಕಿ ಹರಿದಿದ್ದು, ಕೋಡಿ ಒಡೆದು ಹೊಸಕೆರೆಹಳ್ಳಿಯಲ್ಲಿನ ಮನೆ, ಅಂಗಡಿಗಳು, ವಾಹನಗಳು ಜಲಾವೃತಗೊಂಡಿವೆ.

ಬೆಂಗಳೂರಲ್ಲಿ ಭಾರೀ ಮಳೆ: ಕೋಡಿ ಒಡೆದ ಹೊಸಕೆರೆಹಳ್ಳಿ ಕೆರೆ, ಜಲಾವೃತಗೊಂಡ ಮನೆಗಳು
ರಸ್ತೆಯಲ್ಲಿ ಚರಂಡಿ ನೀರು
Follow us
ವಿವೇಕ ಬಿರಾದಾರ
|

Updated on:May 09, 2023 | 7:46 AM

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ (Bengaluru) ಸುರಿದ ಧಾರಾಕಾರ ಮಳೆಯಿಂದ ಅಪಾರ ಹಾನಿಯಾಗಿದೆ. ಭಾರೀ ಮಳೆಯಿಂದ ಹೊಸಕೆರೆಹಳ್ಳಿಯ ಕೆರೆ ಉಕ್ಕಿ ಹರಿದಿದ್ದು, ಕೋಡಿ ಒಡೆದು ಹೊಸಕೆರೆಹಳ್ಳಿಯಲ್ಲಿನ ಮನೆ, ಅಂಗಡಿಗಳು, ವಾಹನಗಳು ಜಲಾವೃತಗೊಂಡಿವೆ. ಜಲಾವೃತಗೊಂಡಿದ್ದ ವಾಹನಗಳ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಿಬ್ಬಂದಿ ತೆರವುಗೊಳಿಸಿದ್ದಾರೆ. ಜೆಸಿಬಿ, ಟ್ರ್ಯಾಕ್ಟರ್​ ಮೂಲಕ ಸಿಬ್ಬಂದಿಯಿಂದ ಸ್ಪಚ್ಛತಾ ಕಾರ್ಯ ನಡೆದಿದೆ.

ಮನೆಗಳಿಗೆ ನುಗ್ಗಿದ ಚರಂಡಿ ನೀರು

ಮೈಸೂರು: ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಧಾರಾಕಾರ ಮಳೆಯಾಗಿದ್ದು, ಅಂಗಡಿ, ಮನೆಗಳಿಗೆ ನುಗ್ಗಿದ ಚರಂಡಿ ನೀರು ನುಗ್ಗಿದೆ. ಹುಣಸೂರಿನ ಶಬ್ಬೀರ್‌ ನಗರದ ಮುಖ್ಯರಸ್ತೆ ಬಳಿ ಘಟನೆ ನಡೆದಿದೆ. ಗುಜರಿ ಅಂಗಡಿ, ಹೋಟೆಲ್, ಕಾರ್ ಶೋರೂಂಗೂ ನೀರು ನುಗ್ಗಿದ್ದು, ಮುಖ್ಯ ರಸ್ತೆಗಳು ನದಿಯಂತಾಗಿವೆ.

ಭಾರೀ ಮಳೆಗೆ ಕುಸಿದುಬಿದ್ದ ಮನೆಗಳು

ಸೋಮವಾರ (ಮೇ.08) ಸುರಿದ ಮಳೆಯಿಂದ ಮನೆ ಕುಸಿದುಬಿದ್ದು, ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಅನಾಹುತ ತಪ್ಪಿತ್ತು. ರಿಂಗ್​​ ರೋಡ್​ನ ವೀರಭದ್ರೇಶ್ವರ ನಗರದಲ್ಲಿ ಘಟನೆ ಸಂಭವಿಸಿತ್ತು. ಅಪಾರ್ಟ್​​ಮೆಂಟ್​ನ ತಡೆಗೋಡೆ ಸಮೇತ ಮನೆ ಕುಸಿದುಬಿದಿದ್ದು, ತಡೆಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ಜಖಂಗೊಂಡಿದ್ದವು. ಅವಘಡದಲ್ಲಿ ಮತ್ತೆರಡು ಕಾರುಗಳಿಗೆ ಹಾನಿ ಆಗಿತ್ತು. ಗೋಪಾಲ್ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸಂಪೂರ್ಣ ಹಾನಿ ಆಗಿದ್ದವು.

ಬಸ್ ಮೇಲೆ ಧರೆಗುರುಳಿ ಬೃಹತ್ ಮರ: ಯುವತಿ ಗಂಭೀರ

ಗದಗ: ಭಾರೀ ಗಾಳಿ ಮಳೆಗೆ ಬೃಹತ್ ಮರ ಧರೆಗುರುಳಿ ಸಾರಿಗೆ ಸಂಸ್ಥೆಯ ಬಸ್ ಮೇಲೆ ಬಿದಿದ್ದಿತ್ತು. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದ ಬಳಿ ಘಟನೆ ನಡೆದಿತ್ತು. ಬಸ್​ನಲ್ಲಿದ್ದ ಯುವತಿಗೆ ಗಂಭೀರವಾದ ಗಾಯವಾಗಿದ್ದು, ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಗಜೇಂದ್ರಗಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 am, Tue, 9 May 23