ಕಾಪ್ಟರ್‌ಗಳಿಗೆ ಕರ್ನಾಟಕದಲ್ಲಿ ಭಾರೀ ಬೇಡಿಕೆ: ಬೇರೆ-ಬೇರೆ ರಾಜ್ಯಗಳಿಂದ ಹಾರಿಬಂದ ನೂರಾರು ಹೆಲಿಕಾಪ್ಟರ್​ಗಳು, ದರ ಎಷ್ಟು?

|

Updated on: Apr 17, 2023 | 8:12 AM

ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಚಾರಕ್ಕಾಗಿ ರಾಜಕೀಯ ನಾಯಕರು ಹೆಚ್ಚಾಗಿ ಹೆಲಿಕಾಪ್ಟರ್​ಗಳ ಬಳಕೆ ಮಾಡುತ್ತಿದ್ದು ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಹೊರ ರಾಜ್ಯಗಳಿಂದಲೂ ಹೆಲಿಕಾಪ್ಟರ್​ಗಳನ್ನು ಕರೆಸಿಕೊಳ್ಳಲಾಗುತ್ತಿದೆ.

ಕಾಪ್ಟರ್‌ಗಳಿಗೆ ಕರ್ನಾಟಕದಲ್ಲಿ ಭಾರೀ ಬೇಡಿಕೆ: ಬೇರೆ-ಬೇರೆ ರಾಜ್ಯಗಳಿಂದ ಹಾರಿಬಂದ ನೂರಾರು ಹೆಲಿಕಾಪ್ಟರ್​ಗಳು, ದರ ಎಷ್ಟು?
Follow us on

ಬೆಂಗಳೂರು: ರಾಜ್ಯ ವಿಧಾನಸಭಾ ರಣಕಣ ರಂಗೇರಿದೆ(Karnataka Assembly Elections 2023). ಎಲೆಕ್ಷನ್​ಗೆ ಕೆಲವೇ ಕೆಲವು ದಿನ ಬಾಕಿ ಇರುವುದರಿಂದ, ಬಿಜೆಪಿ-ಕಾಂಗ್ರೆಸ್-ಜೆಡಿಎಸ್​ನ ಘಟಾನುಘಟಿ ನಾಯಕರು, ಬೇಗ ಬೇಗನೇ ರಾಜ್ಯ ಸುತ್ತಾಡಲು, ಪ್ರಚಾರಕ್ಕೆ ಹೋಗಲು ಹೆಲಿಕಾಪ್ಟರ್​ಗಳಿಗೆ(Helicopter) ಮೊರೆ ಹೋಗ್ತಿದ್ದಾರೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಹೆಲಿಕಾಪ್ಟರ್‌ಗಳಿಗೆ ಭಾರೀ ಬೇಡಿಕೆ ಬಂದಿದೆ. ಹಾಗಾದ್ರೆ, ಎಷ್ಟು ಹೆಲಿಕಾಪ್ಟರ್ ಬುಕ್ ಆಗಿವೆ. ಇದಕ್ಕೆಲ್ಲ ಬಾಡಿಗೆ ಎಷ್ಟು ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

150ಹೆಲಿಕಾಪ್ಟರ್​ಗಳು, ಮಿನಿ ವಿಮಾನಗಳು ಬುಕ್ಕಿಂಗ್

ಅಂದಹಾಗೆ ರಾಜ್ಯದಲ್ಲಿ 100ಕ್ಕೂ ಅಧಿಕ ಹೆಲಿಕಾಪ್ಟರ್​ಗಳು ಹಾಗೂ ಮಿನಿ ವಿಮಾನಗಳಿವೆ. ಚುನಾವಣೆ ಪ್ರಚಾರ ಮತ್ತು ಸ್ಟಾರ್ ಪ್ರಚಾರಕರಿಗಾಗಿ ಹೆಲಿಕಾಪ್ಟರ್ ಬೇಡಿಕೆ ಬಂದಿದ್ದು, ರಾಜಕಾರಣಿಗಳು ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಹೆಲಿಕಾಪ್ಟರ್​ಗಳನ್ನು ತರಿಸಿಕೊಳ್ತಿದ್ದಾರಂತೆ. ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜೈಪುರ, ದೆಹಲಿ, ಕೋಲ್ಕತಾ ಹಾಗೂ ಕೊಚ್ಚಿಯಿಂದ ಹೆಲಿಕಾಪ್ಟರ್​ಗಳನ್ನು ತರಿಸಿಕೊಳ್ಳಲಾಗ್ತಿದೆ. ಸುಮಾರು 150ಹೆಲಿಕಾಪ್ಟರ್​ಗಳು ಹಾಗೂ ಮಿನಿ ವಿಮಾನಗಳನ್ನ ರಾಜಕಾರಣಿಗಳು ಬುಕ್ಕಿಂಗ್ ಮಾಡಿದ್ದಾರಂತೆ. ಹೆಲಿಕಾಪ್ಟರ್‌, ಮಿನಿ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಬಾಡಿಗೆ ದರವನ್ನು ಹಾಲಿ ದರಕ್ಕಿಂತ ಶೇ.15ರಷ್ಟು ಹೆಚ್ಚಳ ಮಾಡಿವೆಯಂತೆ.

ಎರಡು ಆಸನದ ಹೆಲಿಕಾಪ್ಟರ್‌ಗೆ ಒಂದು ಗಂಟೆ ಅವಧಿಗೆ 2 ಲಕ್ಷದ 10 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. 4 ಆಸನದ ಹೆಲಿಕಾಪ್ಟರ್​ಅನ್ನು ಗಂಟೆಗೆ ಬುಕ್ಕಿಂಗ್ ಮಾಡೋರು 2 ಲಕ್ಷ 30 ಸಾವಿರ ರೂಪಾಯಿ ವ್ಯಯಿಸಬೇಕು. ಇನ್ನು 6 ಆಸನದ ಮಿನಿ ವಿಮಾನಕ್ಕೆ ಗಂಟೆಗೆ 2 ಲಕ್ಷ 60 ಸಾವಿರ ರೂಪಾಯಿ ಇದ್ರೆ, 8 ಆಸನದ ಮಿನಿ ವಿಮಾನಕ್ಕಾಗಿ ಗಂಟೆಗೆ ಮೂರುವರೆ ಲಕ್ಷ ರೂಪಾಯಿ ಫಿಕ್ಸ್ ಮಾಡಲಾಗಿದೆ. ಇನ್ನು 13 ಆಸನದ ಮಿನಿ ವಿಮಾನಕ್ಕಾಗಿ ಗಂಟೆಗೆ ಜಿಎಸ್​ಟಿ ಸಮೇತ 4 ಲಕ್ಷ ರೂಪಾಯಿ ವ್ಯಯಿಸಬೇಕಿದೆ. ಹಾಗೆಯೇ ಮೂರು ಪಕ್ಷದ ನಾಯಕರು ಬುಕ್ಕಿಂಗ್ ಮಾಡುತ್ತಿರುವ ಹೆಲಿಕಾಪ್ಟರ್ ಮತ್ತು ಮಿನಿ ವಿಮಾನಗಳ ಲ್ಯಾಂಡಿಂಗ್​ಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಹೆಲಿಪ್ಯಾಡ್​ಗಳನ್ನ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಉಡುಪಿ: ಸಿಎಂ ಬೊಮ್ಮಾಯಿ ಹೆಲಿಕಾಪ್ಟರ್ ಲ್ಯಾಂಡ್​ ಆಗುತ್ತಿದ್ದ ಹೆಲಿಪ್ಯಾಡ್ ಬಳಿ ಬೆಂಕಿ

ಎಲ್ಲೆಲ್ಲಿ ಹೆಲಿಕಾಪ್ಟರ್ ಲ್ಯಾಂಡ್?

ಬೆಂಗಳೂರಿನ ಜಕ್ಕೂರು, ಹೆಚ್​ಎಎಲ್ ವಿಮಾನ ನಿಲ್ದಾಣ, ವೈಟ್ ಫೀಲ್ಡ್ ಭಾಗದಲ್ಲಿ ಹೆಲಿಕಾಪ್ಟರ್​ಗಳ ನಿಲ್ದಾಣವಿದೆ. ಇನ್ನು ಹುಬ್ಬಳ್ಳಿ, ಬೆಳಗಾವಿ, ಬೀದರ್, ಬಳ್ಳಾರಿ, ಕಲಬುರಗಿ ಸೇರಿದಂತೆ ರಾಜ್ಯದ ಹಲೆವೆಡೆ ಹೆಲಿಕಾಪ್ಟರ್​ಗಳ ನಿಲ್ದಾಣಕ್ಕೆ ಜಾಗ ನಿಗದಿ ಮಾಡಲಾಗಿದೆ.

ಒಟ್ಟಿನಲ್ಲಿ ಉತ್ತರದಿಂದ ದಕ್ಷಿಣಕ್ಕೆ, ದಕ್ಷಿಣದಿಂದ ಉತ್ತರ ಕರ್ನಾಟಕಕ್ಕೆ ಅತಿ ಕಡಿಮೆ ಸಮಯದಲ್ಲಿ ಓಡಾಡಲು, ಅದೇ ಸಮಯವನ್ನ ಮತಬೇಟೆಗೆ ಬಳಸಲು ರಾಜ್ಯ ನಾಯಕರು ಹೆಲಿಕಾಪ್ಟರ್‌ಗಳ ಮೊರೆ ಹೋಗಿದ್ದು, ಸಹಜವಾಗಿಯೇ ಅವುಗಳ ಬಾಡಿಗೆಯೂ ಕೂಡ ಹೆಚ್ಚಾಗಿದೆ.

ಕರ್ನಾಟಕ ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 8:12 am, Mon, 17 April 23