ಇನ್ನು ಮೇಲೆ ನಿಮ್ಮ ವಾಹನಗಳಿಗೆ ಸೈಡ್ ಮಿರರ್ ಮತ್ತು ಇಂಡಿಕೇಟರ್ ಅಳವಡಿಕೆ ಕಡ್ಡಾಯ!

|

Updated on: Apr 10, 2021 | 12:22 AM

ಒಂದು ಪಕ್ಷ ಸೈಡ್ ಮಿರರ್ ಅಳವಡಿಸದೆ ಮತ್ತು ಇಂಡಿಕೇಟರ್​ಗಳನ್ನು ಬಳಸದೆ ನಗರದಲ್ಲಿ ವಾಹನಗಳನ್ನು ಓಡಿಸಿದರೆ ಅದು ಎರಡು ನಿಯಮಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಮತ್ತು ಪ್ರತಿ ಉಲ್ಲಂಘನೆಗೆ ರೂ 500 ದಂಡ ವಿಧಿಸಲಾಗುವದೆಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

ಇನ್ನು ಮೇಲೆ ನಿಮ್ಮ ವಾಹನಗಳಿಗೆ ಸೈಡ್ ಮಿರರ್ ಮತ್ತು ಇಂಡಿಕೇಟರ್ ಅಳವಡಿಕೆ ಕಡ್ಡಾಯ!
ಪೊಲೀಸ್
Follow us on

ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಾಹನಗಳಿಗೆ ಇನ್ನು ಮುಂದೆ ಸೈಡ್ ಮಿರರ್ ಅಳವಡಿಕೆ ಮತ್ತು ಇಂಡಿಕೇಟರ್ ಬಳಕೆ ಕಡ್ಡಾಯಗೊಳಿಸಿ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಆದೇಶವೊದನ್ನು ಹೊರಡಿಸಿದ್ದಾರೆ.

ಬೆಂಗಳೂರು ನಗರ ಸಂಚಾರಿ ಪೊಲೀಸರಿಂದ ಹೊಸ ಸಂಚಾರಿ ನಿಯಮವನ್ನು ಜಾರಿಗೆ ತರಲಾಗಿದೆ. ರಸ್ತೆ ತಿರುವುಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಸೈಡ್ ಮಿರರ್ ಹಾಗೂ ಇಂಡಿಕೇಟರ್ ಅತ್ಯಗತ್ಯ ಅದೇಶದಲ್ಲಿ ತಿಳಿಸಿಲಾಗಿದೆ.

ಒಂದು ಪಕ್ಷ ಸೈಡ್ ಮಿರರ್ ಅಳವಡಿಸದೆ ಮತ್ತು ಇಂಡಿಕೇಟರ್​ಗಳನ್ನು ಬಳಸದೆ ನಗರದಲ್ಲಿ ವಾಹನಗಳನ್ನು ಓಡಿಸಿದರೆ
ಅದು ಎರಡು ನಿಯಮಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಮತ್ತು ಪ್ರತಿ ಉಲ್ಲಂಘನೆಗೆ ರೂ 500 ದಂಡ ವಿಧಿಸಲಾಗುವದೆಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

ಇತ್ತೀಚಿಗೆ ಬೆಂಗಳೂರು ನಗರ ಪ್ರದೇಶದಲ್ಲಿ ಸೈಡ್ ಮಿರರ್ ಮತ್ತು ಇಂಡಿಕೇಟರ್​ಗಳನ್ನು ಬಳಸದೆ ಅಥವಾ ಅವುಗಳನ್ನು ಅಳವಡಿಸದೆ ವಾಹನಗಳನನ್ನು ಓಡಿಸುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ವಾಹನ ಸವಾರರು ಬೇಕಾಬಿಟ್ಟಿಯಾಗಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ.

ರಸ್ತೆ ತಿರುವುಗಳಲ್ಲಿ ಇಂಡಿಕೇಟರ್​ಗಳನ್ನು ಬಳಸುವುದು ಸುರಕ್ಷಿತ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿಯೇ, ಆದರೆ ಕೆಲ ವಾಹನ ಚಾಲಕರು ಅವುಗಳನ್ನು ಅಳವಡಿಸಿಕೊಳ್ಳದೆ ಮತ್ತು ಬಳಸುವ ಅವಶ್ಯಕತೆ ಇರುವಾಗ ನಿರ್ಲಕ್ಷ್ಯ ತೋರಿ ಬೇರೆಯವೆ ಪಾಲಿಗೆ ಕಂಟಕವಾಗುತ್ತಿದ್ದಾರೆ, ಇದನ್ನು ಗಮನಿಸಿರುವ ನಗರ ಟ್ರಾಫಿಕ್ ವಿಭಾಗ ಸೈಡ್ ಮಿರರ್ ಮತ್ತು ಇಂಡಿಕೇಟರ್​ಗಳ ಅಳವಡಿಕೆ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: National Safety Day 2021: ರಾಷ್ಟ್ರೀಯ ಸುರಕ್ಷತಾ ದಿನ; ವಾಹನ ಚಾಲನೆ ಮಾಡುವಾಗ ಮರೆಯದೇ ರಸ್ತೆ ನಿಯಮ ಪಾಲಿಸಿ

Published On - 12:22 am, Sat, 10 April 21