ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳಿಗೆ ಇಲ್ಲಿದೆ ಸಿಹಿಸುದ್ದಿ

| Updated By: ಅಕ್ಷತಾ ವರ್ಕಾಡಿ

Updated on: Nov 23, 2022 | 10:54 AM

ಸಾಂಪ್ರದಾಯಿಕ ಹಳೆಯ ಮಾರಾಟದ ಬಂಡಿಗಳನ್ನು ಮೊಬೈಲ್ ಎಲೆಕ್ಟ್ರಿಕ್ ಆಹಾರ ಬಂಡಿಗಳಾಗಿ ಪರಿವರ್ತಿಸುವ ಯೋಜನೆ ಇದಾಗಿದ್ದು , ಪ್ರಾರಂಭದಲ್ಲಿ ಮಹಿಳಾ ಮಾರಾಟಗಾರರು ಇದರ ಫಲಾನುಭಾವಿಗಳಾಗಿರುತ್ತಾರೆ.

ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳಿಗೆ ಇಲ್ಲಿದೆ ಸಿಹಿಸುದ್ದಿ
street vendors of Bangalore
Image Credit source: The Hindu
Follow us on

ಮಹಿಳಾ ಬೀದಿ ಆಹಾರ ಮಾರಾಟಗಾರರಿಗೆ ತಮ್ಮ ಮಾರಾಟದ ಮೂಲಸೌಕರ್ಯಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಿಂದ ಮೊಬೈಲ್ ಎಲೆಕ್ಟ್ರಿಕ್ ಆಹಾರ ಕಾರ್ಟ್‌ಗಳನ್ನು (ತ್ರಿಚಕ್ರ ವಾಹನ) ಒದಗಿಸುವ ನಿಟ್ಟಿನಿಂದ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂದು ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನ ಡೀಲರ್‌ಗಳಿಂದ ಬೀದಿ ವ್ಯಾಪಾರಿಗಳನ್ನು ರಕ್ಷಿಸಲು ನವೆಂಬರ್ 8 ರಂದು ಟೆಂಡರ್ ಕರೆದಿತ್ತು.

ನಗರದಲ್ಲಿ ಈಗಾಗಲೇ 70,000 ರಿಂದ 80,000 ನೋಂದಾಯಿತ ಬೀದಿ ವ್ಯಾಪಾರಿಗಳಿದ್ದಾರೆ. ಇದರಲ್ಲಿ ಪ್ರತ್ಯೇಕವಾಗಿ ಮಹಿಳಾ ಮಾರಾಟಗಾರರ ಸಂಖ್ಯೆ ಎಷ್ಟಿದೆ ಎಂದು ತಿಳಿದು ಬಂದಿಲ್ಲ. ಈಗಾಗಲೇ ಯೋಜನೆಗಳ ಬಗ್ಗೆ ಮಾತುಕತೆ ನಡೆದಿದ್ದು, ಟೆಂಡರ್ ಅಂತಿಮಗೊಂಡ ನಂತರ, ಫಲಾನುಭಾವಿಗಳು ವಾಹನಕ್ಕಾಗಿ ಅರ್ಜಿ ಸಲ್ಲಿಸಬಹುದು. ಬಿಬಿಎಂಪಿ ಕೂಡ ವಾಹನದ ವೆಚ್ಚದಲ್ಲಿ ಶೇ.50ರಷ್ಟು ಹಣ ನೀಡಿ ಮಾರಾಟಗಾರರಿಗೆ ಸಹಾಯ ಮಾಡಲಿದೆ ಎಂದು ತಿಳಿದು ಬಂದಿದೆ.

ಈ ಸಿಹಿ ಸುದ್ದಿಯ ಕುರಿತು ಶ್ಲಾಘನೆ ವ್ಯಕ್ತ ಪಡಿಸಿದ ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್ ಬಾಬು ಈ ಉಪಕ್ರಮವು ಸಮರ್ಥನೀಯವಾಗಿದೆ, ಆದರೆ ಅನೇಕ ಮಹಿಳಾ ಮಾರಾಟಗಾರರಿಗೆ ವಾಹನಗಳ ಬಗ್ಗೆ ಅಷ್ಟೋಂದು ಮಾಹಿತಿ ಇಲ್ಲ. ಮಹಿಳೆಯ ಪತಿ, ಮಗ ಅಥವಾ ಮಗಳು ವಾಹನವನ್ನು ಹೊಂದಿದ್ದರೆ ಪಾಲಿಕೆಯು ವಾಹನಗಳನ್ನು ಒದಗಿಸಬೇಕು ಎಂದು ಹೇಳಿದ್ದಾರೆ.

ಹಣಕಾಸಿನ ವಿಚಾರದಲ್ಲಿ, ಮೊಬೈಲ್ ಎಲೆಕ್ಟ್ರಿಕ್ ಫುಡ್ ಕಾರ್ಟ್‌ಗಳನ್ನು ಖರೀದಿಸಲು ಅರ್ಹ ಮಹಿಳಾ ಬೀದಿ ಆಹಾರ ಮಾರಾಟಗಾರರಿಗೆ ಅಗತ್ಯವಿರುವ ಫ್ಯಾಬ್ರಿಕೇಶನ್ ಸೇರಿದಂತೆ ಇವಿ ವೆಚ್ಚದ 50% ಅಥವಾ ರೂ 2.5 ಲಕ್ಷ, ಯಾವುದು ಕಡಿಮೆಯೋ ಅದನ್ನು ಬಿಬಿಎಂಪಿ ನೀಡುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇಂದೂ ಸಾಕಷ್ಟು ಬೀದಿ ವ್ಯಾಪಾರಿಗಳು ಸರಿಯಾದ ಮಾರಾಟ ಸ್ಥಳಗಳ ಕೊರತೆ, ನೀರು, ಕಸ-ವಿಲೇವಾರಿ ಕಾರ್ಯವಿಧಾನಗಳು ಹೀಗೆವ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿಸುವ ಉದ್ದೇಶದಿಂದ , ವಿಶೇಷವಾಗಿ ಮಹಿಳೆಯರು ಸ್ವಾವಲಂಬಿಯಾಗಿದ್ದುಕೊಂಡು ಬೀದಿ ವ್ಯಾಪಾರಗಳಲ್ಲಿ ತೊಡಗಿಕೊಂಡಿದ್ದು, ಇವರ ಈ ಕೆಲಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾವು ಈ ತಿರ್ಮಾನ ಕೈಗೊಂಡಿದ್ದೇವೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂಪ್ರದಾಯಿಕ ಹಳೆಯ ಮಾರಾಟದ ಬಂಡಿಗಳನ್ನು ಮೊಬೈಲ್ ಎಲೆಕ್ಟ್ರಿಕ್ ಆಹಾರ ಬಂಡಿಗಳಾಗಿ ಪರಿವರ್ತಿಸುವ ಯೋಜನೆ ಇದಾಗಿದ್ದು , ಪ್ರಾರಂಭದಲ್ಲಿ ಮಹಿಳಾ ಮಾರಾಟಗಾರರಿಗೆ ನಂತರದ ದಿನಗಳಲ್ಲಿ ಇತರ ಬೀದಿ ವ್ಯಾಪಾರಿಗಳಿಗೂ ಈ ಯೋಜನೆಯನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಹುಡುಕುವುದು ಹೇಗೆ? ಇಲ್ಲಿದೆ ಸರಳ ವಿಧಾನಗಳು

ಬೀದಿ ವ್ಯಾಪಾರಿಗಳಿಗೆ ಎಲೆಕ್ಟ್ರಿಕ್ ಫುಡ್ ಕಾರ್ಟ್‌ಗಳನ್ನು ಒದಗಿಸುವ ಕ್ರಮವು ಶ್ಲಾಘನೀಯವಾಗಿದ್ದರೂ, ಆದರೆ ಈ ನಿರ್ಧಾರವನ್ನು ಕೂಲಂಕಷವಾಗಿ ಯೋಚಿಸಬೇಕು. ಉದಾಹರಣೆಗೆ, ಈ ವಾಹನಗಳನ್ನು ಚಾರ್ಜ್ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ವ್ಯಾಪಾರಿಗಳ ಪಾರ್ಕಿಂಗ್ ಜಾಗ, ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪರಿಶೀಲಿಸಿ ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕಾದುದು ಅಗತ್ಯವಿದೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 10:54 am, Wed, 23 November 22