ಕರ್ನಾಟಕ ಕಾನೂನು ವಿವಿ ಸೆಮಿಸ್ಟರ್ ಪರೀಕ್ಷೆಗಳಿಗೆ ಅನುಮತಿ ನೀಡಿದ ಹೈಕೋರ್ಟ್

| Updated By: sandhya thejappa

Updated on: Nov 25, 2021 | 1:15 PM

ತಡೆ ಪ್ರಶ್ನಿಸಿ ಕರ್ನಾಟಕ ಕಾನೂನು ವಿವಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆಗೆ ಅಂಗೀಕರಿಸಿದ್ದ ಹೈಕೋರ್ಟ್ ಇದೀಗ ಪರೀಕ್ಷೆಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಕರ್ನಾಟಕ ಕಾನೂನು ವಿವಿ ಸೆಮಿಸ್ಟರ್ ಪರೀಕ್ಷೆಗಳಿಗೆ ಅನುಮತಿ ನೀಡಿದ ಹೈಕೋರ್ಟ್
ಹೈಕೋರ್ಟ್
Follow us on

ಬೆಂಗಳೂರು: ತಡೆ ನೀಡಲಾಗಿದ್ದ ಕರ್ನಾಟಕ ಕಾನೂನು ವಿವಿ ಸೆಮಿಸ್ಟರ್ ಪರೀಕ್ಷೆಗಳಿಗೆ ಇದೀಗ ಅನುಮತಿ ಸಿಕ್ಕಿದೆ. ಹೈಕೋರ್ಟ್ ವಿಭಾಗೀಯ ಪೀಠ ಕರ್ನಾಟಕ ಕಾನೂನು ವಿವಿ ಸೆಮಿಸ್ಟರ್ ಪರೀಕ್ಷೆಗಳಿಗೆ ಅನುಮತಿ ನೀಡಿದೆ. ಈ ಹಿಂದೆ ಏಕಸದಸ್ಯ ಪೀಠ ಪರೀಕ್ಷೆಗಳಿಗೆ ತಡೆ ನೀಡಿತ್ತು. ತಡೆ ಪ್ರಶ್ನಿಸಿ ಕರ್ನಾಟಕ ಕಾನೂನು ವಿವಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆಗೆ ಅಂಗೀಕರಿಸಿದ್ದ ಹೈಕೋರ್ಟ್ ಇದೀಗ ಪರೀಕ್ಷೆಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ.

ನವೆಂಬರ್‌ 15 ರಿಂದ ನಿಗದಿಯಾಗಿದ್ದ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಸೆಮಿಸ್ಟರ್ ಪರೀಕ್ಷೆಗಳಿಗೆ ತಡೆ ನೀಡಲಾಗಿತ್ತು. ಹೈಕೋರ್ಟ್‌ ಏಕಸದಸ್ಯ ಪೀಠದಿಂದ ಮಧ್ಯಂತರ ತಡೆಯಾಜ್ಞೆ ನೀಡಲಾಗಿತ್ತು. ಯುಜಿಸಿ, ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಪರೀಕ್ಷೆ ನಡೆಸಿದ್ದ ಹಿನ್ನೆಲೆ, ಕೆಲ ವಿದ್ಯಾರ್ಥಿಗಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಇತರೆ ವಿವಿಗಳ ಮಾನದಂಡ ಅನುಸರಿಸದ ಕಾನೂನು ವಿವಿ ಹಿನ್ನೆಲೆಯಲ್ಲಿ ಸಮಾನತೆ ಮಾನದಂಡ ಅನುಸರಿಸಿ ಪರೀಕ್ಷೆಗೆ ತಡೆ ಆಜ್ಞೆ ನೀಡಲಾಗಿತ್ತು. ಕೊವಿಡ್ ಹಿನ್ನೆಲೆ ಹೊರಡಿಸಿದ್ದ ನಿಯಮಾವಳಿ ಉಲ್ಲಂಘನೆ ಮಾಡಲಾಗಿತ್ತು. ಈ ಸಂಬಂಧ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳಿಗೆ ಹೈಕೋರ್ಟ್ ತಡೆ ಹಿಡಿಯಲಾಗಿತ್ತು. ಆದರೆ ಇಂದು ಕರ್ನಾಟಕ ಹೈಕೋರ್ಟ್​ ಕಾನೂನು ವಿವಿ ಸೆಮಿಸ್ಟರ್ ಪರೀಕ್ಷೆಗಳಿಗೆ ಅನುಮತಿ ನೀಡಿದೆ.

ಇದನ್ನೂ ಓದಿ

Shocking Video: ರಸ್ತೆ ಖಾಲಿಯಿದ್ದರೂ ಮೂರು ಕಾರುಗಳು ಡಿಕ್ಕಿ; ಶಾಕಿಂಗ್ ವಿಡಿಯೊ ವೈರಲ್

ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅಂಬರೀಷ್​ಗೂ ಸಿಕ್ಕಿದಂತೆ: ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ

Published On - 12:48 pm, Wed, 24 November 21