ಕೋಟಿ ಕೋಟಿ ಆಸ್ತಿ ಒಡೆಯ ಹೆಚ್​ಡಿ ರೇವಣ್ಣ ಪುತ್ರ ಡಾ.ಸೂರಜ್ ರೇವಣ್ಣ!

ದೇವೇಗೌಡರ ಮೊಮ್ಮಗ ಒಟ್ಟು 18 ಕೆಜಿ ಬೆಳ್ಳಿ ಹೊಂದಿದ್ದಾರೆ. ಜತೆಗೆ ಸೂರಜ್ ಬಳಿ 45 ಲಕ್ಷದ 75 ಸಾವಿರ ಮೌಲ್ಯದ 1 ಕೆಜಿ ಚಿನ್ನಾಭರಣವಿದೆ.

ಬೆಂಗಳೂರು: ಹೆಚ್.ಡಿ ರೇವಣ್ಣ ಅವರ ಪುತ್ರ ಡಾ. ಸೂರಜ್ ರೇವಣ್ಣ ಕೋಟಿ ಕೋಟಿ ರೂಪಾಯಿ ಆಸ್ತಿ ಒಡೆಯರಾಗಿದ್ದಾರೆ. 3 ಕೋಟಿ 53 ಲಕ್ಷದ 16 ಸಾವಿರದ 463 ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲದೇ 61 ಕೋಟಿ 68 ಲಕ್ಷದ 22 ಸಾವಿರದ 761ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ. ಅಫಿಡವಿಟ್ನಲ್ಲಿ ಡಾ. ಸೂರಜ್ ರೇವಣ್ಣ ಸಲ್ಲಿಸಿರುವ ಆಸ್ತಿ ವಿವರ ದಾಖಲಾಗಿದೆ. ದೇವೇಗೌಡ, ಚೆನ್ನಮ್ಮ, ಅತ್ತೆಯರು, ಅಪ್ಪ ಅಮ್ಮನಿಂದ ಸೂರಜ್ 14 ಕೋಟಿ 97 ಲಕ್ಷದ 74 ಸಾವಿರದ 989 ರೂಪಾಯಿಗಳ ಸಾಲ ಪಡೆದಿದ್ದಾರೆ. ದೇವೇಗೌಡರ ಮೊಮ್ಮಗ ಒಟ್ಟು 18 ಕೆಜಿ ಬೆಳ್ಳಿ ಹೊಂದಿದ್ದಾರೆ. ಜತೆಗೆ ಸೂರಜ್ ಬಳಿ 45 ಲಕ್ಷದ 75 ಸಾವಿರ ಮೌಲ್ಯದ 1 ಕೆಜಿ ಚಿನ್ನಾಭರಣವಿದೆ.

ಇದನ್ನೂ ಓದಿ:
ACB Raids: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ: ಬೆಂಗಳೂರು ಸೇರಿದಂತೆ ಕರ್ನಾಟಕದ 60 ಕಡೆ ಎಸಿಬಿ ದಾಳಿ

ಬೆಳಗಾವಿ ವೈಭವನಗರದ ‘ಲಂಚ ವೈಭವ’ ಮನೆ ಮೇಲೆ ಎಸಿಬಿ ದಾಳಿ; ಡಾಲರ್‌ ನೋಟುಗಳು ಪತ್ತೆ- ಇದು ಗ್ರೂಪ್ ಸಿ ನೌಕರನ ಮನೆ

 

 

Click on your DTH Provider to Add TV9 Kannada