ಸದನದಲ್ಲಿ ಪರಸ್ಪರ ಪರಮ ವೈರಿಗಳಂತೆ ಆಡುವ ಬಿಜೆಪಿ-ಕಾಂಗ್ರೆಸ್ ನಾಯಕರು ಹೊರಗಡೆ ಆತ್ಮೀಯ ಸ್ನೇಹಿತರು!

ವಿಶ್ವನಾಥ ಹಿಂಬದಿಯಿಂದ ಬರುವ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ನಾಯಕನ ಬೆನ್ನಿಗೆ ಚುರುಗುಟ್ಟುವಂತೆ ಬಾರಿಸುತ್ತಾರೆ.

ವಿಧಾನಸಭೆ ಮತ್ತು ಮಾಧ್ಯಮದ ಎದುರು ಹಾವು ಮುಂಗುಸಿಗಳಂತೆ ಅಡುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರು ಬೇರೆ ಸಂದರ್ಭಗಳಲ್ಲಿ ಆಪ್ತಮಿತ್ರರ ಹಾಗೆ ವರ್ತಿಸುತ್ತಾರೆ. ಮಾಜಿ ಮುಖ್ಯಮಂತ್ರಿಗಳು-ಸಿದ್ದರಾಮಯ್ಯ ಮತ್ತು ಬಿ ಎಸ್ ಯಡಿಯೂರಪ್ಪನವರ ನಡುವೆ ಆತ್ಮೀಯ ಸ್ನೇಹವಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಅವರ ನಡುವೆಯೂ ಉತ್ತಮ ಬಾಂಧವ್ಯ ಇದೆ. ನಿಮಗೆ ನೆನಪಿರಿಬಹುದು, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿ(ಎಸ್) ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಪರ ಪ್ರಚಾರ ಮಾಡುವಾಗ ಕುಮಾರಸ್ವಾಮಿ ಅವರು ತಾವು ಮತ್ತು ಶಿವಕುಮಾರ್ ಜೋಡೆತ್ತುಗಳು ಅಂತ ಹೇಳಿಕೊಂಡಿದ್ದರು. ಇಂಥ ಸ್ನೇಹದ ಅನೇಕ ಉದಾಹರಣೆಗಳಿವೆ.

ಈ ವಿಡಿಯೋನಲ್ಲಿ ಶಿವಕುಮಾರ ಮತ್ತು ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ಎದುರು ಲೋಕಾಭಿರಾಮವಾಗಿ ಹರಟುತ್ತಾ ನಿಂತಿರುವುದನ್ನು ನೋಡಬಹುದು. ವಿಶ್ವನಾಥ ಹಿಂಬದಿಯಿಂದ ಬರುವ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ನಾಯಕನ ಬೆನ್ನಿಗೆ ಚುರುಗುಟ್ಟುವಂತೆ ಬಾರಿಸುತ್ತಾರೆ. ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಇವರೆಲ್ಲ ತಮ್ಮ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ಬಂದಿದ್ದರು. ನಾಯಕರ ನಡುವೆ ಉತ್ತಮ ಸ್ನೇಹವಿರೋದು ಖುಷಿಯ ವಿಚಾರ.

ಈ ವಿಡಿಯೋನಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯಿದೆ. ವಿಶ್ವನಾಥ್ ಅವರ ಎಡಭಾಗದಲ್ಲಿ ಆಗಮಿಸಿ ಅವರಿಗೆ ನಮಸ್ಕರಿಸುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಹಾವಭಾವಗಳನ್ನು ಗಮನಿಸಿ. ಅವರು ವಿಶ್ವನಾಥ ಅವರಿಗೆ ತಾನು ಸೋನಿಯಾ ಗಾಂಧಿಗೆ ತೋರಿಸಬಹುದಾದ ಭಕ್ತಿ, ನಿಷ್ಠೆ ಮತ್ತು ಗೌರವಾದರಗಳನ್ನು ಪ್ರಕಟಿಸುತ್ತಾರೆ. ಇವರೇನಾದರೂ ಮೊದಲು ಬಿಜೆಪಿಯ ಕಾರ್ಯಕರ್ತರಾಗಿದ್ದರೆ ಮತ್ತು ವಿಶ್ವನಾಥ ಅವರ ಕೃಪಾಪೋಷಿತರೇ ಅಂತ ಅನುಮಾನ ಮೂಡುತ್ತದೆ.

ಈ ನಾಯಕ ಶಿವಕುಮಾರ್ ಆಗಲೀ ಅಥವಾ ಸಿದ್ದರಾಮಯ್ಯನವರ ಮುಂದೆ ಆಗಲೀ ಇಷ್ಟು ಭಯ-ಭಕ್ತಿ, ನಯ-ವಿನಯ ಪ್ರದರ್ಶಿಸಿರಲಾರರು!

ಇದನ್ನೂ ಓದಿ:  ವಿಡಿಯೋ ಮಾಡಿದ್ದಕ್ಕೆ ಅಭಿಮಾನಿಯ ಮೊಬೈಲ್​ ಕಸಿದುಕೊಂಡ ಜಾನ್​ ಅಬ್ರಾಹಂ; ಮುಂದೇನಾಯ್ತು?

Click on your DTH Provider to Add TV9 Kannada