‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಹಣ ಗೆಲ್ಲದೆ ಹೋದವರಿಗೆ ಚೆಕ್​ ಬರೆದುಕೊಡ್ತಿದ್ರು ಪುನೀತ್

‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಹಣ ಗೆಲ್ಲದೆ ಹೋದವರಿಗೆ ಚೆಕ್​ ಬರೆದುಕೊಡ್ತಿದ್ರು ಪುನೀತ್

TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 23, 2021 | 10:07 PM

ಕಷ್ಟಗಳಿಗೆ ಅಂತ್ಯ ಹಾಡಬೇಕು ಎಂದು ‘ಕನ್ನಡದ ಕೋಟ್ಯಧಿಪತಿ’ ಆಡೋಕೆ ಬರುವವರು ಅನೇಕರಿದ್ದಾರೆ. ಇಲ್ಲಿಗೆ ಬಂದು ಹಣ ಗೆಲ್ಲೋಕೆ ಸಾಧ್ಯವಾಗದೆ ಇದ್ದರೆ ಅಂಥ ಸಂದರ್ಭದಲ್ಲಿ ಪುನೀತ್​ ಅವರೇ ಚೆಕ್​ ಬರೆದು ಕೊಟ್ಟ ಉದಾಹರಣೆ ಇದೆಯಂತೆ.

ಪುನೀತ್​ ರಾಜ್​ಕುಮಾರ್​ ನಟನೆ ಜತೆಗೆ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದರು. ಆದರೆ, ಅವರು ಮಾಡಿದ ಸಹಾಯವನ್ನು ಎಂದೂ, ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಅವರು ನಿಧನ ಹೊಂದಿದ ಬಳಿಕ ಈ ವಿಚಾರಗಳು ಹೊರಗೆ ಬರುತ್ತಿವೆ. ಪುನೀತ್​ ಇಷ್ಟೊಂದು ಸಹಾಯ ಮಾಡಿದ್ರಾ ಎಂದು ಎಲ್ಲರೂ ಅಚ್ಚರಿಪಡುವಷ್ಟು ಒಳ್ಳೆಯ ಕೆಲಸಗಳನ್ನು ಅವರು ಮಾಡಿದ್ದಾರೆ. ಕಷ್ಟಗಳಿಗೆ ಅಂತ್ಯ ಹಾಡಬೇಕು ಎಂದು ‘ಕನ್ನಡದ ಕೋಟ್ಯಧಿಪತಿ’ ಆಡೋಕೆ ಬರುವವರು ಅನೇಕರಿದ್ದಾರೆ. ಇಲ್ಲಿಗೆ ಬಂದು ಹಣ ಗೆಲ್ಲೋಕೆ ಸಾಧ್ಯವಾಗದೆ ಇದ್ದರೆ ಅಂಥ ಸಂದರ್ಭದಲ್ಲಿ ಪುನೀತ್​ ಅವರೇ ಚೆಕ್​ ಬರೆದು ಕೊಟ್ಟ ಉದಾಹರಣೆ ಇದೆಯಂತೆ. ಈ ಬಗ್ಗೆ ಪುನೀತ್  ಮ್ಯಾನೇಜರ್​ ಆಗಿದ್ದ ವಜ್ರೇಶ್ವರಿ ಕುಮಾರ್ ಟಿವಿ9 ಜೊತೆ ಮಾತನಾಡಿದ್ದಾರೆ. ಅವರು ಹಂಚಿಕೊಂಡ ವಿಚಾರಗಳು ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಅಂಬರೀಷ್​ ಫ್ಯಾನ್ಸ್​ ನಿರ್ಧಾರಕ್ಕೆ ಸುಮಲತಾ ಬೇಸರ; ಪುನೀತ್​ ಮತ್ತು ಪ್ರಶಸ್ತಿ ಬಗ್ಗೆ ಹೇಳಿದ್ದೇನು?

ಪಿಎಂ ಮೋದಿ ಟೀಂನಿಂದ ರಾಜಕೀಯಕ್ಕೆ ಬರುವಂತೆ ಪುನೀತ್​ಗೆ ಬಂದಿತ್ತು ಆಹ್ವಾನ; ನಕ್ಕು ಎದ್ದು ಹೋಗಿದ್ದ ಅಪ್ಪು

Published on: Nov 23, 2021 09:07 PM