Raghavendra Rajkumar: ಡಾ.ರಾಜ್ ಪುತ್ಥಳಿ ಪಕ್ಕದಲ್ಲೇ ಪುನೀತ್ ಪುತ್ಥಳಿ: ರಾಘವೇಂದ್ರ ರಾಜ್ಕುಮಾರ್ ಮಾಹಿತಿ
Puneeth Rajkumar: ಪುನೀತ್ ರಾಜ್ಕುಮಾರ್ ಪುತ್ಥಳಿಯನ್ನು ವೀಕ್ಷಿಸಲು ತೆರಳಿರುವ ರಾಘವೇಂದ್ರ ರಾಜ್ಕುಮಾರ್ ನಂತರ ಮಾತನಾಡಿ ಹಲವು ವಿಚಾರ ಹಂಚಿಕೊಂಡಿದ್ದಾರೆ.
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಅದನ್ನು ನಿರ್ಮಿಸುವ ಜವಾಬ್ದಾರಿಯನ್ನು ಬನಶಂಕರಿ ನಿವಾಸಿ ಮತ್ತು ಕ್ರಿಯೇಟಿವ್ ಆರ್ಟ್ ಡೈರೆಕ್ಟರ್ ಶಿವದತ್ ವಹಿಸಿಕೊಂಡಿದ್ದಾರೆ. ಅದನ್ನು ವೀಕ್ಷಿಸಲು ತೆರಳಿದ್ದ ರಾಘವೇಂದ್ರ ರಾಜ್ಕುಮಾರ್ ನಂತರ, ಮಾಧ್ಯಮದವರೊಂದಿಗೆ ಮಾತನಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪುತ್ಥಳಿಯ ಅನಾವರಣ ಯಾವಾಗ ಎಂಬ ಪ್ರಶ್ನೆಗೆ, ಎಷ್ಟು ಬೇಗ ಆಗುತ್ತದೆ ಎನ್ನುವುದು ದೊಡ್ಡದಲ್ಲ, ಎಷ್ಟು ಚೆನ್ನಾಗಿ ಆಗುತ್ತದೆ ಎನ್ನುವುದು ಮುಖ್ಯ ಎಂದಿದ್ದಾರೆ. ಇನ್ನೂ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗಿಲ್ಲ. ಕಾರ್ಯಕ್ರಮಕ್ಕೆ ಕುಟುಂಬ, ಅಧಿಕಾರಿಗಳು, ಮಂತ್ರಿಗಳು ಹಾಗೂ ಅದಕ್ಕೆ ಸಂಬಂಧಿಸಿದವರು ಎಲ್ಲರು ಸಿಗಬೇಕು. ಎಲ್ಲಾ ತಯಾರಿಯ ನಂತರ ಅನಾವರಣ ನಡೆಯಲಿದೆ ಎಂದಿದ್ದಾರೆ. ಪುತ್ಥಳಿಯನ್ನು ಡಾ.ರಾಜ್ಕುಮಾರ್ ಅವರ ಸಮಾಧಿಯ ಪಕ್ಕದಲ್ಲೇ ಸ್ಥಾಪಿಸಲಾಗುವುದು ಎಂದು ರಾಘವೇಂದ್ರ ರಾಜ್ಕುಮಾರ್ ಇದೇ ವೇಳೆ ಹೇಳಿದ್ದಾರೆ.
ಇದನ್ನೂ ಓದಿ:
ತಯಾರಾಗುತ್ತಿರುವ ಪುನೀತ್ ರಾಜಕುಮಾರ್ ಪುತ್ಥಳಿ ನೋಡಿ ಭಾವುಕರಾಗಿ ಅದಕ್ಕೆ ಮುತ್ತಿಟ್ಟರು ರಾಘವೇಂದ್ರ ರಾಜಕುಮಾರ್
ಒಟಿಟಿಯಲ್ಲಿ ಕೋಟಿಗೊಬ್ಬ 3 ಬಿಡುಗಡೆ ಯಾವಾಗ?; ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಇಲ್ಲಿದೆ