ಒಟಿಟಿಯಲ್ಲಿ ಕೋಟಿಗೊಬ್ಬ 3 ಬಿಡುಗಡೆ ಯಾವಾಗ?; ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಇಲ್ಲಿದೆ

OTT Releases: ಈ ವಾರ ಒಟಿಟಿಯಲ್ಲಿ ಬಹುನಿರೀಕ್ಷಿತ ಚಿತ್ರಗಳು ತೆರೆ ಕಾಣುತ್ತಿವೆ. ಈ ಕುರಿತ ಮಾಹಿತಿ ಇಲ್ಲಿದೆ.

ಒಟಿಟಿಯಲ್ಲಿ ಕೋಟಿಗೊಬ್ಬ 3 ಬಿಡುಗಡೆ ಯಾವಾಗ?; ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ

ಇತ್ತೀಚೆಗೆ ಹಲವು ಚಿತ್ರಗಳು ನೇರವಾಗಿ ಒಟಿಟಿಯಲ್ಲೇ ಬಿಡುಗಡೆಯಾಗುತ್ತಿವೆ. ಇವುಗಳೊಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸ್ಟಾರ್ ನಟರ ಚಿತ್ರಗಳೂ, ಕೆಲ ಕಾಲದ ನಂತರ ಒಟಿಟಿಯಲ್ಲಿ ಬಿಡುಗಡೆಯಾಗುತ್ತವೆ. ಇದೇ ಮಾದರಿಯಲ್ಲಿ ಈ ವಾರ ಕೂಡ ಹಲವು ಚಿತ್ರಗಳು ರಿಲೀಸ್ ಆಗುತ್ತಿವೆ. ಈ ಪೈಕಿ ಸ್ಟಾರ್ ನಟರ ನೇರ ಒಟಿಟಿ ಬಿಡುಗಡೆ ಚಿತ್ರಗಳೂ ಸೇರಿವೆ. ವಿವಿಧ ಭಾಷೆಗಳ ಬಹುನಿರೀಕ್ಷಿತ ಸೀರೀಸ್ ಹಾಗೂ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿದ್ದು, ವೀಕ್ಷಕರಿಗೆ ಮನರಂಜನೆ ನೀಡಲಿವೆ. ಆಮೆಜಾನ್ ಪ್ರೈಮ್, ನೆಟ್​​ಫ್ಲಿಕ್ಸ್, ಆಹಾ, ಡಿಸ್ನೆ+ ಹಾಟ್​​ಸ್ಟಾರ್ ಮೊದಲಾದ ಒಟಿಟಿಗಳ ಮುಖಾಂತರ ಹಲವು ಚಿತ್ರಗಳು, ಸೀರೀಸ್ ತೆರೆಕಾಣುತ್ತಿದ್ದು, ಅವುಗಳ ಪಟ್ಟಿ ಇಲ್ಲಿದೆ.

ಕೋಟಿಗೊಬ್ಬ 3:
ಕಿಚ್ಚ ಸುದೀಪ್ ಅಭಿನಯದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಂಡಿತ್ತು. ಇದೀಗ ಆಮೆಜಾನ್ ಪ್ರೈಮ್ ವಿಡಿಯೋ ಒಟಿಟಿ ಮುಖಾಂತರ‌ ಕೋಟಿಗೊಬ್ಬ 3 ತೆರೆಗೆ ಬರಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನವೆಂಬರ್ 23ರಂದು ಚಿತ್ರ ಒಟಿಟಿಯಲ್ಲಿ ತೆರೆಕಾಣಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಬಿಡುಗಡೆ ಮುಂದೂಡಲ್ಪಟ್ಟಿದ್ದು, ನವೆಂಬರ್ 29ರಂದು ತೆರೆಗೆ ಬರುವ ನಿರೀಕ್ಷೆ ಇದೆ.

ದೃಶ್ಯಂ 2:
ಮಲಯಾಳಂನ ಸೂಪರ್ ಹಿಟ್ ಚಿತ್ರ ‘ದೃಶ್ಯಂ 2’ ಚಿತ್ರದ ಅಧಿಕೃತ ರಿಮೇಕ್ ಆದ ಈ ಚಿತ್ರ, ತೆಲುಗಿನಲ್ಲಿಯೂ ಅದೇ ಹೆಸರಿನಲ್ಲಿ ತೆರೆ ಕಾಣುತ್ತಿದೆ. ಮೋಹನ್‌ ಲಾಲ್‌ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ವೆಂಕಟೇಶ್ ನಿರ್ವಹಿಸುತ್ತಿದ್ದು, ಮೀನಾ ಸೇರಿದಂತೆ ಹಲವು ಖ್ಯಾತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಮೂಲ ಚಿತ್ರ ನಿರ್ದೇಶಿಸಿದ ಜೀತು ಜೋಸೆಫ್ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ನವೆಂಬರ್ 25ರಂದು ಆಮೆಜಾನ್ ಪ್ರೈಮ್‌ ಮೂಲಕ ಈ ಚಿತ್ರ ನೇರವಾಗಿ‌ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ರಿಪಬ್ಲಿಕ್:
ತೆಲುಗಿನ ಭರವಸೆಯ ನಟ ಸಾಯಿ ಧರಮ್ ತೇಜ್ ಅಭಿನಯದ ಈ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು‌‌‌ ಮಾಡಿತ್ತು. ಆದರೆ ಚಿತ್ರಮಂದಿರಗಳಲ್ಲಿ ಈ ಚಿತ್ರಕ್ಕೆ ನಿರೀಕ್ಷಿತ ಯಶಸ್ಸು ದಕ್ಕಲಿಲ್ಲ. ಇದೀಗ ಜೀ5 ಮುಖಾಂತರ ಒಟಿಟಿಗೆ ಕಾಲಿಡುತ್ತಿದೆ. ದೇವ್ ಕಟ್ಟಾ ನಿರ್ದೇಶನದ ಈ ಚಿತ್ರ ಒಟಿಟಿಯಲ್ಲಿ ನವೆಂಬರ್ 26ರಂದು ಬಿಡುಗಡೆಯಾಗಲಿದೆ.

ರೊಮ್ಯಾಂಟಿಕ್:
ಆಕಾಶ್ ಪುರಿ ನಟನೆಯ ಈ ಚಿತ್ರ ರೊಮ್ಯಾಂಟಿಕ್ ಡ್ರಾಮಾ ಮಾದರಿಯ ಚಿತ್ರವಾಗಿದ್ದು, ಚಿತ್ರಮಂದಿರಗಳಲ್ಲಿ ಅಂತಹ ಯಶಸ್ಸು ಸಿಕ್ಕಿಲ್ಲ.‌ ಇದೀಗ ಆಹಾ ಒಟಿಟಿ ಮುಖಾಂತರ ನವೆಂಬರ್ 26ರಂದು ಬಿಡುಗಡೆಯಾಗುತ್ತಿದೆ.

#BRO:
ಸೋನಿ ಲಿವ್ ಮೂಲಕ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ನವೀನ್ ಚಂದ್ರ‌ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ನವೆಂಬರ್ 26ರಂದು ಚಿತ್ರ ಬಿಡುಗಡೆಯಾಗಲಿದೆ.

ಅಣ್ಣಾಥೆ:
ಬಾಕ್ಸಾಫೀಸ್ ಗಳಿಕೆಯಲ್ಲಿ ಈಗಾಗಲೇ ದಾಖಲೆ ಬರೆದಿರುವ ಅಣ್ಣಾಥೆ ಸನ್ ನೆಕ್ಸ್ಟ್ ಒಟಿಟಿ‌ ಮುಖಾಂತರ ಈ ವಾರ ತೆರೆಗೆ ಬರಲಿದೆ ಎನ್ನಲಾಗಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿಯನ್ನು ಚಿತ್ರತಂಡ ಇನ್ನಷ್ಟೇ ನೀಡಬೇಕಿದೆ.

ಇವುಗಳಲ್ಲದೇ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿರುವ ‘ಜೊನಾಸ್ ಬ್ರದರ್ ಫ್ಯಾಮಿಲಿ ರೋಸ್ಟ್’ ನೆಟ್ ಫ್ಲಿಕ್ಸ್ ಮೂಲಕ ನವೆಂಬರ್ 23ರಂದು ತೆರೆಗೆ ಬಂದಿದೆ. ಚೋರಿ ಚಿತ್ರವು ಆಮೆಜಾನ್ ಪ್ರೈಮ್ ಮೂಲಕ ನವೆಂಬರ್ 26 ರಂದು ಬಿಡುಗಡೆಯಾಗಲಿದೆ. ಡಿಸ್ನಿ+ ಹಾಟ್ ಸ್ಟಾರ್ ಮೂಲಕ Hawkeye ಚಿತ್ರ ಇಂದು ಅಂದರೆ ನವೆಂಬರ್ 24 ರಂದು ತೆರೆ ಕಾಣಲಿದೆ.

ಇದನ್ನೂ ಓದಿ:

Saif Ali Khan: ಬಾಕ್ಸಾಫೀಸ್​​ನಲ್ಲಿ ಮುಗ್ಗರಿಸಿದ ಸೈಫ್ ಸಿನಿಮಾ; ‘ಬಂಟಿ ಔರ್ ಬಬ್ಲಿ 2’ ಚಿತ್ರದ ಕಲೆಕ್ಷನ್ ಎಷ್ಟು?

ಗಾಂಧೀಜಿ ಹೋರಾಟವನ್ನು ಕೀಳಾಗಿ ಕಂಡ ಕಂಗನಾರನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಬಳಸಿಕೊಳ್ಳಿ: ಕೆಪಿವೈಸಿಸಿ ಅಧ್ಯಕ್ಷ ರಕ್ಷಾ ರಾಮಯ್ಯ

Click on your DTH Provider to Add TV9 Kannada