ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅಂಬರೀಷ್ಗೂ ಸಿಕ್ಕಿದಂತೆ: ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ
Ambareesh: ಇಂದು ಅಂಬರೀಶ್ ಮೂರನೇ ವರ್ಷದ ಪುಣ್ಯ ಸ್ಮರಣೆ. ಅವರ ಸಮಾಧಿಗೆ ಪೂಜೆ ಸಲ್ಲಿಸಿ ನಂತರ, ಸಂಸದೆ ಸುಮಲಾತಾ ಅಂಬರೀಶ್ ಮಾತನಾಡಿದ್ದಾರೆ.
ಬೆಂಗಳೂರು: ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಸಿಕ್ಕಿದೆ ಎಂದರೆ ಅದು ಅಂಬರೀಶ್ಗೆ ಸಿಕ್ಕಿದ ಹಾಗೆ ಎಂದು ಸಂಸದೆ ಸುಮಲತಾ ಅಂಬರೀಶ್ ನುಡಿದಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಮೂರನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಅವರು ಪುತ್ರ ಅಭಿಷೇಕ್ ಅಂಬರೀಶ್ ಜತೆ ಕಂಠೀರವ ಸ್ಟುಡಿಯೋಗೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ‘‘ಅಂಬರೀಶ್ಗೆ ಪ್ರಶಸ್ತಿ ಸಿಕ್ಕೆ ಸಿಗುತ್ತದೆ. ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅದು ಅಂಬರೀಶ್ಗೆ ಸಿಕ್ಕ ಹಾಗೆ’’ ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘‘ಇವತ್ತು ಅವರ ಮೂರನೇ ಪುಣ್ಯಸ್ಮರಣೆ. ಅವರಿಲ್ಲ ಎಂಬ ನೋವು ಶಾಶ್ವತ. ಅವ್ರ ಜೀವನದಲ್ಲಿ ನಡೆದುಕೊಂಡು ಬಂದಿರೋ ಹಾದಿಯೇ ನಮಗೆ ಶಕ್ತಿ. ಅಂಥವರನ್ನು ಕಳೆದುಕೊಂಡ ಮೇಲೆ ಧೈರ್ಯ ಬೇಕು. ಅವ್ರ ಜೊತೆ ಕಳೆದ ಸಮಯ ನೆನಪಿಸಿಕೊಂಡರೆ ಧೈರ್ಯ ಬರುತ್ತದೆ’’ ಎಂದಿದ್ದಾರೆ.
ಅಂಬರೀಶ್ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವ ಕುರಿತಂತೆ ಮಾತನಾಡಿ ಅವರು, ‘‘ಅಂಬರೀಶ್ ಅವರು ಸಮಾಜಮುಖಿ ಕಾರ್ಯಗಳನ್ನು ತೋರಿಕೆಗಾಗಿ ಮಾಡಿಲ್ಲ. ಕಷ್ಟದಲ್ಲಿ ಇದ್ದವರಿಗೆ ಸ್ಪಂದಿಸಿದವರು. ಅವರ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಲು ಡಾ.ಅಂಬರೀಷ್ ಚಾರಿಟೇಬಲ್ ಟ್ರಸ್ಟ್ ಮಾಡಿದ್ದೇವೆ. ಅವರ ಕನಸುಗಳನ್ನು ಈ ಟ್ರಸ್ಟ್ ಮೂಲಕ ಮುಂದುವರೆಸುತ್ತಿದ್ದೇವೆ’’ ಎಂದು ಹೇಳಿದ್ದಾರೆ.
ಕೆಆರ್ಎಸ್ ಮೈನಿಂಗ್ ವಿಚಾರದ ಹೋರಾಟ ನಿಲ್ಲಿಸುವುದಿಲ್ಲ: ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ವಿಧಾನಪರಿಷತ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ‘‘ಯಾರ ಪರವಾಗಿ ಬೆಂಬಲ ಅಂತಾ ಹೇಳುವುದಿಲ್ಲ. ಮಂಡ್ಯ ಜಿಲ್ಲೆಗೆ ಯಾರು ಒಳ್ಳೆ ಅಭ್ಯರ್ಥಿಯಾಗಿರುತ್ತಾರೆ, ಅವರಿಗೆ ಸರ್ಪೋಟ್ ಮಾಡುತ್ತೇವೆ. ಕೆಆರ್ಎಸ್ ಮೈನಿಂಗ್ ವಿಚಾರದಲ್ಲಿ ನನ್ನ ಹೋರಾಟ ನಿಲ್ಲಿಸಲ್ಲ’’ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಸಾವಿಲ್ಲ ಎಂದ ಸುಮಲತಾ ಅಂಬರೀಶ್
ಇಂದು ಅಂಬರೀಷ್ ಪುಣ್ಯತಿಥಿ; ಅಂಬಿ ಇಲ್ಲದೆ ಕಳೆಯಿತು ಮೂರು ವರ್ಷ
Published On - 12:15 pm, Wed, 24 November 21