ಬಿಎಂಟಿಸಿ ಬಸ್​​ಗಳಲ್ಲಿ ಮುಂಬರುವ ನಿಲ್ದಾಣದ ಹೆಸರು ಹೇಳುವ ಆಡಿಯೋ ಅಳವಡಿಕೆಗೆ ಹೈಕೋರ್ಟ್ ಗಡುವು

| Updated By: Rakesh Nayak Manchi

Updated on: Dec 21, 2023 | 11:09 AM

ಬೆಂಗಳೂರು ನಗರದಲ್ಲಿ ಸಂಚರಿಸುವ ಬಿಎಂಟಿಸಿ ಬಸ್​ಗಳ ಪೈಕಿ ಕೆಲವು ಬಸ್​ಗಳಲ್ಲಿ ಪ್ರಯಾಣಿಕರಿಗೆ ಮುಂದಿನ ನಿಲ್ದಾಣದ ಹೆಸರು ಸೂಚಿಸುವ ಆಡಿಯೋ ಪ್ರಕಟಣೆ ಹೊರಡಿಸಲಾಗುತ್ತಿತ್ತು. ಸದ್ಯ, ಆಡಿಯೋ ಪ್ರಕಟಣೆ ನಿಲ್ಲಿಸಿದ ಹಿನ್ನೆಲೆ ನಿವಾಸಿಯೊಬ್ಬರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಏಪ್ರಿಲ್ 15 ರ ಒಳಗಾಗಿ ಧ್ವನಿ ಪ್ರಕಟಣೆ ವ್ಯವಸ್ಥೆ ಅಳವಡಿಸುವಂತೆ ನಿರ್ದೇಶನ ನೀಡಿದೆ.

ಬಿಎಂಟಿಸಿ ಬಸ್​​ಗಳಲ್ಲಿ ಮುಂಬರುವ ನಿಲ್ದಾಣದ ಹೆಸರು ಹೇಳುವ ಆಡಿಯೋ ಅಳವಡಿಕೆಗೆ ಹೈಕೋರ್ಟ್ ಗಡುವು
ಏಪ್ರಿಲ್ 15ರ ಒಳಗೆ BMTC ಬಸ್​​ಗಳಲ್ಲಿ ನಿಲ್ದಾಣದ ಹೆಸರು ಹೇಳುವ ಆಡಿಯೋ ಅಳವಡಿಕೆಗೆ ಹೈಕೋರ್ಟ್ ನಿರ್ದೇಶನ
Follow us on

ಬೆಂಗಳೂರು, ಡಿ.21: ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ (BMTC) ಬಸ್​ಗಳಲ್ಲಿ ಮುಂದೆ ಬರುವ ನಿಲ್ದಾಣಗಳ ಹೆಸರು ಪ್ರಕಟಿಸುವ ಆಡಿಯೋ ಅಳವಡಿಕೆಗೆ ಕರ್ನಾಟಕ ಹೈಕೋರ್ಟ್ (Karnataka High Court) ಏಪ್ರಿಲ್ 15ರ ಗಡುವು ನೀಡಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಕೆಲವು ಬಸ್​ಗಳಲ್ಲಿ ಆಡಿಯೋ ಪ್ರಕಟಣೆಗಳನ್ನು ಅಳವಡಿಸಲಾಗಿತ್ತು. ಅದನ್ನು ಈಗ ನಿಲ್ಲಿಸಲಾಗಿದೆ ಎಂದು ಎನ್‌ಜಿಒ ಶ್ರೇಯಸ್ ಗ್ಲೋಬಲ್ ಟ್ರಸ್ಟ್ ನಡೆಸುತ್ತಿರುವ ವಕೀಲ ಮತ್ತು ದೃಷ್ಟಿಹೀನ ವ್ಯಕ್ತಿ ಶ್ರೇಯಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಿಭಾಗೀಯ ಪೀಠ ಕೈಗೆತ್ತಿಕೊಂಡಿತು.

ಇದನ್ನೂ ಓದಿ: ಟಿವಿ9 ವರದಿ ಇಂಪ್ಯಾಕ್ಟ್: ಬಿಎಂಟಿಸಿಗೆ ಬಂತು 100 ಹೊಸ ಎಲೆಕ್ಟ್ರಿಕ್ ಬಸ್​, ಇವುಗಳ ವಿಶೇಷತೆ ತಿಳಿಯಿರಿ

ವಿಚಾರಣೆ ವೇಳೆ ಬಿಎಂಟಿಸಿ ಪರ ವಾದ ಮಂಡಿಸಿದ ವಕೀಲರು, ಮುಂಬರುವ ನಿಲ್ದಾಣಗಳ ಬಗ್ಗೆ ಜನರಿಗೆ ತಿಳಿಸಲು ಶೇಕಡಾ 58 ರಷ್ಟು ಬಸ್‌ಗಳಲ್ಲಿ ಆಡಿಯೋ ವ್ಯವಸ್ಥೆ ಅಳವಡಿಸಲಾಗಿದ್ದು, 2,562 ವಾಹನಗಳಿಗೆ ಅಳವಡಿಕೆ ಮಾಡಿಲ್ಲ. ಮುಂದಿನ ಆರು ತಿಂಗಳಲ್ಲಿ 1,141 ಬಸ್‌ಗಳಲ್ಲಿ ಆಡಿಯೋ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ವಾದ ಆಲಿಸಿದ ವಿಭಾಗೀಯ ಪೀಠ, 2024ರ ಏಪ್ರಿಲ್ 15 ರವರೆಗೆ ಬಸ್‌ಗಳಲ್ಲಿ ಆಡಿಯೋ ಅಳವಡಿಕೆ ಮಾಡುವಂತೆ ನಿರ್ದೇಶನ ನೀಡಿತು. ಅಳವಡಿಕೆ ಮಾಡದೇ ಇದ್ದಲ್ಲದೆ ಯಾವುದೇ ಕ್ಷಮೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿ ಏಪ್ರಿಲ್ 18ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ