ಮುಸ್ಲಿಮರು ಮೂರು ದೇಗುಲ ಬಿಟ್ಟುಕೊಡದಿದ್ದರೆ 37 ಸಾವಿರ ಕಡೆ ಹಿಂದೂಗಳು ಹೋರಾಡಬೇಕಾಗುತ್ತೆ: ಚಕ್ರವರ್ತಿ ಸೂಲಿಬೆಲೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 03, 2022 | 11:51 AM

ಹಿಂದೂಗಳು ಕೇಳಿರುವುದು ಕೇವಲ ಮೂರು ದೇವಸ್ಥಾನಗಳು. ಅವನ್ನು ಬಿಟ್ಟುಕೊಡದಿದ್ದರೆ ಹಿಂದೂಗಳು 37 ಸಾವಿರ ದೇವಸ್ಥಾನಗಳ ಬಿಡುಗಡೆಗಾಗಿ ಹೋರಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಸ್ಲಿಮರು ಮೂರು ದೇಗುಲ ಬಿಟ್ಟುಕೊಡದಿದ್ದರೆ 37 ಸಾವಿರ ಕಡೆ ಹಿಂದೂಗಳು ಹೋರಾಡಬೇಕಾಗುತ್ತೆ: ಚಕ್ರವರ್ತಿ ಸೂಲಿಬೆಲೆ
ಚಕ್ರವರ್ತಿ ಸೂಲಿಬೆಲೆ
Follow us on

ಬೆಂಗಳೂರು: ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ ಎಂಬ ಆರ್​ಎಸ್​ಎಸ್ (Rashtriya Swayam Sevak Sangh – RSS)​ ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಅವರ ಹೇಳಿಕೆಯನ್ನು ಹಿಂದುತ್ವ ಪರ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಸ್ವಾಗತಿಸಿದ್ದಾರೆ. ಭಾಗವತ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಭಾಗವತ್ ಅವರು ಹಿಂದೂ ಧರ್ಮಕ್ಕೆ ಸೂಕ್ತವಾದ ಹೇಳಿಕೆಯನ್ನೇ ಕೊಟ್ಟಿದ್ದಾರೆ. ಮುಸಲ್ಮಾನರು ತಮ್ಮ ಮುಖವನ್ನ ಕನ್ನಡಿಯಲ್ಲಿ ನೋಡಿಕೊಳ್ಳಬೇಕಿದೆ. ಕೋರ್ಟ್ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ಮಾತು ಸರಿಯಿದೆ. ಮಾತುಕತೆ ಇಲ್ಲದೆ ಕೋರ್ಟ್​ಗೆ ಹೋಗುವುದು ಹಿಂದೂಗಳ ಸಂಪ್ರದಾಯವಲ್ಲ. ಇದನ್ನು ಸಂಚಾಲಕರು ಸಹ ಬಹಳ ಸ್ಪಷ್ಟವಾಗಿಯೇ ಹೇಳಿದ್ದಾರೆ’ ಎಂದು ಹೇಳಿದರು.

ನ್ಯಾಯಾಲಯಗಳನ್ನು ಗೌರವಿಸಬೇಕು ಎನ್ನುವ ಸರಸಂಘ ಚಾಲಕರ ನಿಲುವು ಪ್ರಸ್ತಾಪಿಸಿರುವ ಅವರು, ಹಿಂದೂ ಸಮಾಜವು ಸದಾ ನ್ಯಾಯಾಲಯಗಳಿಗೆ ಗೌರವ ಕೊಟ್ಟಿದೆ. ಸಹಿಸಿಕೊಳ್ಳಲು ಆಗದ ಪರಿಸ್ಥಿತಿಯಲ್ಲಿ ಅಗ್ರೆಸಿವ್ ಆಗಿದ್ದಾರೆ. ಅದು ರಾಮಮಂದಿರ ವಿಚಾರದಲ್ಲಿ ಮಾತ್ರ. ನಿರಂತರವಾಗಿ ಬೆಳವಣಿಗೆಯಿಂದ ಬಿಟ್ಟು ಕೊಡುವ ಪ್ರಶ್ನೆ ಉಲ್ಬಣಿಸಿಲ್ಲ. ನಾವು ಕೋರ್ಟ್ ತೀರ್ಪು ಒಪ್ಪಿಕೊಳ್ಳುತ್ತೇವೆ. ಮಾತುಕತೆಗೆ ಮುಂದಾಗುವ ಪ್ರಕ್ರಿಯೆ ಮುಸಲ್ಮಾನರು ಆರಂಭಿಸಬೇಕು ಎಂದು ಸಲಹೆ ಮಾಡಿದರು.

ಜ್ಞಾನವಾಪಿನಲ್ಲಿರುವ ವಿಗ್ರಹಗಳನ್ನು ಮುಸ್ಲಿಂಮರು ಫೌಂಟೇನ್ ಎಂದು ಕರೆದಿದ್ದರು. ಸುನ್ನತ್ ಮಾಡಿಸಿಕೊಂಡಿದ್ಯಾ ಆ ಶಿವಲಿಂಗಾ ಎಂದೂ ಕೆಲವರು ಅವಮಾನಕಾರಿ ಮಾತುಗಳನ್ನು ಆಡಿದ್ದರು ಎಂದು ವಿಷಾದಿಸಿದರು.

ಮುಸಲ್ಮಾನರು ಸಹ ಭಾರತೀಯರೇ ಎಂದು ಹೇಳಿದ ಅವರು, ಕೆಲವು ಮುಸಲ್ಮಾನರು ಸಹ ಸ್ವಾತಂತ್ರ್ಯಕ್ಕೆ ಹೋರಾಡಿದ್ದರು. ದ್ವೇಷಮಯ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನಗಳು ಆರಂಭವಾಗಿವೆ. ಮುಸಲ್ಮಾನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರದ ಅಭಿವೃದ್ಧಿಗಾಗಿ ಹಿಂದುಗಳ ಜೊತೆಗೆ ಕೈ ಜೋಡಿಸಬೇಕು. ರಾಷ್ಟ್ರ ಕಟ್ಟುವ ಕಾಯಕದಲ್ಲಿ ನಿರತರಾಗಿರಬೇಕು ಎಂದು ಕರೆ ನೀಡಿದರು.

ಆರು ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಹಾಕಿ ಬರ್ತಾರೆ ಅಂದ್ರೆ ಆಗ ಸಂಘ ಪರಿವಾರವೇ ಪ್ರವೇಶ ಮಾಡಬೇಕು ಎಂದೇನಿಲ್ಲ. ಅದೇ ತರಗತಿಯ ವಿದ್ಯಾರ್ಥಿಗಳು ನಾವು ಕೇಸರಿ ಶಾಲು ಹಾಕೊಂಡು ಬರುತ್ತೇವೆ ಎಂದು ಹೇಳಿದ್ದರು. ಮುಸ್ಲಿಮರ ಹಲಾಲ್​ ಕಟ್​ಗೆ ಪ್ರತಿಯಾಗಿ ನಡೆದ ಜಟ್ಕಾ ಕಟ್ ಅಭಿಯಾನವನ್ನು ಸಂಘ ಪರಿವಾರ ಪ್ರತಿಪಾದಿಸಿರಲಿಲ್ಲ. ಸಮಾಜವೇ ಮುಂದೆ ಬಂದು ಇಂಥ ಕೆಲಸ ಮಾಡುತ್ತಿದೆ. ಆರ್​ಎಸ್​ಎಸ್​ ಬಿತ್ತಿರುವ ಚಿಂತನೆಗಳನ್ನು ಸಮಾಜ ಪಾಲಿಸುತ್ತಿದೆ. ಧರ್ಮದ ಉಳಿವಿಗೆ, ಹೋರಾಟಕ್ಕೆ ಸಮಾಜವೇ ಮುಂದಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಹಿಜಾಬ್ ವಿವಾದ ಇದೀಗ ದೇಶವ್ಯಾಪಿ ಹರಡುತ್ತಿದೆ. ಭಾರತವು ಒಂದು ಗಲಭೆಗ್ರಸ್ಥ ದೇಶವಾಗಿ ಬಿಂಬಿಸುವ ಪ್ರಯತ್ನವನ್ನು ಮುಸ್ಲಿಮರು ಮಾಡುತ್ತಿದ್ದಾರೆ. ಸಾಕಷ್ಟು ದೇವಸ್ಥಾನಗಳನ್ನು ಒಡೆದು ಮಸೀದಿಗಳನ್ನಾಗಿ ಮಾಡಲಾಗಿದೆ. ಹಿಂದೂಗಳು ಕೇಳಿರುವುದು ಕೇವಲ ಮೂರು ದೇವಸ್ಥಾನಗಳು. ಅವನ್ನು ಬಿಟ್ಟುಕೊಡದಿದ್ದರೆ ಹಿಂದೂಗಳು 37 ಸಾವಿರ ದೇವಸ್ಥಾನಗಳ ಬಿಡುಗಡೆಗಾಗಿ ಹೋರಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:47 am, Fri, 3 June 22