ಬೇಳೂರು ರಾಘವೇಂದ್ರ ಶೆಟ್ಟಿ ದೂರು ಹಿನ್ನೆಲೆ: ಸಿಎಸ್​ಗೆ ಸ್ಪಷ್ಟೀಕರಣ ನೀಡಿದ ಎಂಡಿ ರೂಪಾ ಮೌದ್ಗಿಲ್

ಎಂಡಿ ರೂಪಾ ಮೌದ್ಗಿಲ್ ವಿರುದ್ಧ ನಿಗಮದ ಅಧ್ಯಕ್ಷ ದೂರು ಹಿನ್ನೆಲೆ, 5 ಪುಟಗಳ ಸ್ಪಷ್ಟೀಕರಣದಲ್ಲಿ 14 ಕಾರಣಗಳನ್ನು ನೀಡಿ ಸಿಎಸ್​ಗೆ ಎಂಡಿ ರೂಪಾ ಮೌದ್ಗಿಲ್ ಸ್ಪಷ್ಟೀಕರಣ ನೀಡಿದ್ದಾರೆ.

ಬೇಳೂರು ರಾಘವೇಂದ್ರ ಶೆಟ್ಟಿ ದೂರು ಹಿನ್ನೆಲೆ: ಸಿಎಸ್​ಗೆ ಸ್ಪಷ್ಟೀಕರಣ ನೀಡಿದ ಎಂಡಿ ರೂಪಾ ಮೌದ್ಗಿಲ್
ಎಂಡಿ ರೂಪಾ ಮೌದ್ಗಿಲ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 03, 2022 | 7:21 AM

ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ರೂಪಾ ಮೌದ್ಗಿಲ್ ವಿರುದ್ಧ ಮಾಡಿರುವ ನಿರಾಧಾರ ಹಾಗೂ ಅವರ ಕಾಲ್ಪನಿಕ ಆರೋಪ ಕುರಿತು 5 ಪುಟಗಳ ಸ್ಪಷ್ಟೀಕರಣದಲ್ಲಿ 14 ಕಾರಣಗಳನ್ನು ನೀಡಿ ಸಿಎಸ್​ಗೆ ಸ್ಪಷ್ಟೀಕರಣ ನೀಡಿದ್ದಾರೆ. ರೂಪಾ ಮೌದ್ಗಿಲ್ ವಿರುದ್ಧ ಬೇಳೂರು ರಾಘವೇಂದ್ರ ಶೆಟ್ಟಿ ರಾಜ್ಯ ಸರ್ಕಾರದ ‌ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು.

ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ರೂಪಾ ಮೌದ್ಗಿಲ್ ರೂ. 600 ಕೋಟಿ ಟೆಂಡರ್ ಕರೆದಿರುವುದಾಗಿ ಹೇಳಿರುತ್ತಾರೆ. ಆದರೆ ಈ ಕಛೇರಿಯಿಂದ ಯಾವುದೇ 6.00 ಕೋಟಿ ಟೆಂಡ‌ ಕರೆದಿರುವುದಿಲ್ಲ. ಅಲ್ಲದೆ ಈ ಕಛೇರಿಯಿಂದ ಯಾವುದೇ ಟೆಂಡರ್ ಕರೆದರೂ ಅದನ್ನು ಪಾರದರ್ಶಕವಾಗಿ ಕೆಟಿಪಿಪಿ ಆಕ್ಟ್ ಪಕಾರ ಮಾಡಲಾಗಿದೆ. ree-procurement portal ನಲ್ಲಿ ಹಾಕಲಾಗಿದೆ. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಡಿಪಿಆರ್ 35 ಎಆರ್‌ಯು 2003, ದಿನಾಂಕ 07.05.2003 ಪ್ರಕಾರ ಯಾವುದೇ ಟೆಂಡರ್ ಕರೆಯುವುದಕ್ಕೂ ಹಾಗೂ ಎಷ್ಟೇ ಮೊತ್ತದ ಟೆಂಡರ್ ಕರೆಯುವುದಕ್ಕೂ ಅಧ್ಯಕ್ಷರ ಅನುಮತಿ ಬೇಕಾಗಿರುವುದಿಲ್ಲ. ಸರ್ಕಾರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿರುತ್ತೇನೆ. ಅವರು ಆರೋಪಿಸಿರುವಂತೆ ಅವರ ಅನುಮತಿ ತೆಗೆದುಕೊಂಡಿರುವುದಿಲ್ಲ ಏಕೆಂದರೆ ಅದರ ಅಗತ್ಯ ಇರುವುದಿಲ್ಲ.

ರಾಘವೇಂದ್ರ ಶೆಟ್ಟಿಯು ನನಗೆ 75 ಪತ್ರಗಳನ್ನು ಕಳುಹಿಸಿರುತ್ತಾರೆ. ಅದನ್ನು ಅವರು ನೋಟಿಸ್ ಎಂದು ಪತ್ರಿಕೆಗಳಿಗೆ ಹೇಳಿರಬಹುದು. ಅವೆಲ್ಲವೂ ನಿಗಮದ ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ ಪತ್ರಗಳು, ಈಗಾಗಲೇ ತಿಳಿಸಿದಂತೆ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಡಿಪಿಆರ್ 35 ಎಆರ್‌ಯು 2003, ದಿನಾಂಕ 07.05.2003 ಪ್ರಕಾರ ದೈನಂದಿನ ಚಟುವಟಿಕೆಗಳಲ್ಲಿ ಅಧ್ಯಕ್ಷರ ಹಸ್ತಕ್ಷೇಪ ಸಲ್ಲದು. ಹಾಗಾಗಿ ನಾನು ಅವರ ಯಾವ ಪತ್ರಕ್ಕು ಉತ್ತರ ಕೊಟ್ಟಿರುವುದಿಲ್ಲ. ಹಾಗೂ ಸರ್ಕಾರದ ಆದೇಶ ಪ್ರಕಾರ ನಡೆದುಕೊಂಡಿರುತ್ತೇನೆ. ಸರ್ಕಾರದ ಆದೇಶ ಪ್ರಕಾರ ನಡೆದುಕೊಳ್ಳಲು ತಿಳಿಸಿದರೂ ಅಧ್ಯಕ್ಷರು ಪಾಲಿಸಿರುವುದಿಲ್ಲ.

ಇದನ್ನೂ ಓದಿ: WI vs NED: ನಿಕೋಲಸ್ ಪೂರನ್ ನಾಯಕತ್ವದಲ್ಲಿ ಮೊದಲ ಏಕದಿನ ಸರಣಿ ಗೆದ್ದ ವೆಸ್ಟ್ ಇಂಡೀಸ್..!

ಸುಬೇಶ್’ ಎಂಬ ಪ್ರಧಾನ ವ್ಯವಸ್ಥಾಪಕರು (ಹಣಕಾಸು) ಇವರನ್ನು ನಾನು ಓಡಿಸಿದೆ’ ಎಂಬ ಅತಿ ಅಗ್ಗದ ಆರೋಪ ಮಾಡಿರುತ್ತಾರೆ. ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ರಮಾನಂದ ನಾಯಕ್ ರವರ ಪತ್ನಿಯ ವೈದ್ಯಕೀಯ ಆರೈಕೆಗೆಂದು ರೂ. 11.00 ಲಕ್ಷ ನಿಗಮದಿಂದ ಪಾವತಿಸಿಕೊಂಡಿರುತ್ತಾರೆ. ರಮಾನಂದ ನಾಯಕ್ ರವರಿಗೆ ಕೇವಲ ರೂ. 2.00 ಲಕ್ಷ ಮಾತ್ರ ವೈದ್ಯಕೀಯ ಆರೈಕೆಗೆ ಅರ್ಹತೆ ಇರುತ್ತದೆ. ಆದರೆ ರೂ. 9,24,718.00 ಹೆಚ್ಚುವರಿಯಾಗಿ ನಿಗಮದಿಂದ ಪಾವತಿ ಮಾಡಿಸಿಕೊಂಡಿರುತ್ತಾರೆ. ಇದಕ್ಕೆ ಸುಬೇಶ್‌ ರವರೇ ಫೈಲ್‌ನಲ್ಲಿ ಸಹಕರಿಸಿದ್ದು, ಇಬ್ಬರೂ ನಿಗಮದ ಹಣದ ಅಪರಾತಪರ ಮಾಡಿರುತ್ತಾರೆ. ಇದರ ಕುರಿತು ಪತ್ರ ಸಂಖ್ಯೆ: ಕರಾಕಅನಿನಿ/ಆಡಳಿತ/66/2021-22, ದಿನಾಂಕ: 07.0L.2022 ಹಾಗೂ ಕರಾಕಅನಿನಿ/ಆಡಳಿತ/1645/2021-22, ದಿನಾಂಕ: 21.02.2022 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತೇನೆ. ತದ ನಂತರ ಸರ್ಕಾರವು ಸುಬೇಶ್ ಅವರ ವರ್ಗಾವಣೆಯನ್ನು ದಿನಾಂಕ: 03.03.2022 ರಂದು ಮಾಡಿರುತ್ತದೆ. ಸುಬೇಶ್ ಎಂಬುವವರು ಅನೇಕ ನಿಯಮಬಾಹಿರ ಹಾಗೂ ಕಾನೂನುಬಾಹಿರ ಕೆಲಸಗಳಲ್ಲಿ ರಾಘವೇಂದ್ರ ಶೆಟ್ಟಿಯವರಿಗೆ ಸಹಕರಿಸುತ್ತಿದ್ದರು. ಹಾಗಾಗಿ ಈ ರೀತಿಯ ಸುಳ್ಳು ಆರೋಪ ಮಾಡಿರುತ್ತಾರೆ. ಈಗ ಈ ಹುದ್ದೆ ಖಾಲಿ ಇದೆ. ಶ್ರೀಧರ್ ಎಂಬುವವರನ್ನು ಈ ಜಾಗಕ್ಕೆ ವ್ಯವಸ್ಥಾಪಕ ನಿರ್ದೇಶಕರು ನೇಮಿಸಿದ್ದಾರೆ ಎಂದು ರಾಘವೇಂದ್ರ ಶೆಟ್ಟಿ ಇವರು ಹೇಳಿರುವುದು ಸುಳ್ಳು, ಶ್ರೀಧರ್ ಕೇವಲ ಡಾಟಾ ಎಂಟ್ರಿ ಆಪರೇಟರ್ ಅಷ್ಟೆ. ಅಷ್ಟೂ ತಿಳಿಯದೆ ಅಜ್ಞಾನದಿಂದಲೋ, ಬೇಕಂತಲೋ ಸುಳ್ಳು ಆರೋಪ ಮಾಡಿರುತ್ತಾರೆ.

ಮಾರಾಟ ಮಳಿಗೆಗಳಲ್ಲಿ ರಿಯಾಯಿತಿ ಕೊಟ್ಟಿರುವ ಬಗ್ಗೆ ಸುಳ್ಳು ಆರೋಪ ಮಾಡಿರುತ್ತಾರೆ. ಶೋರೂಂ ವ್ಯವಸ್ಥಪಕರಿಗೆ ಶೇಕಡ 5 ರಷ್ಟು ಡಿಸೆಂಟ್ ನೀಡುವ ಅಧಿಕಾರವು, ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಇವರಿಗೆ ಶೇಕಡ 10 ರಷ್ಟು ಡಿಸೆಂಟ್ ನೀಡುವ ಅಧಿಕಾರ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಶೇಕಡ 20 ರ ತನಕ ಡಿಸ್ಟೆಂಟ್ ಕೊಡುವ ಅಧಿಕಾರವಿದ್ದರೂ ಸಹ ನಾನು ಯಾವುದೇ ರೀತಿಯ ಡಿಸೆಂಟ್ ನನ್ನ ಗುರುತು ಪರಿಚಯದವರಿಗೆ ಕೊಟ್ಟಿರುವುದಿಲ್ಲ. ಕೇವಲ ಸರ್ಕಾರದ ಇಲಾಖೆಗಳು ಖರೀದಿ ಮಾಡಿದಾಗ ಮಾತ್ರ ಡಿಸ್‌ಕೌಂಟ್ ಅನುಮೋದಿಸಿರುತ್ತೇನೆ. ಅಲ್ಲದೆ ರಾಘವೇಂದ್ರ ಶೆಟ್ಟಿಯು ಅನೇಕ ಬಾರಿ ಇದಕ್ಕಿಂತ ಹೆಚ್ಚಿನ ರಿಯಾಯಿತಿ (ಡಿಸ್ಕಂಟ್) ತಮ್ಮ ವೈಯಕ್ತಿಕ ಮಿತ್ರರಿಗೆ ಕೊಡಲು ಕೇಳಿದಾಗ ನಿರಾಕರಿಸಿರುತ್ತೇನೆ.

ನಿಗಮಕ್ಕೆ ಕೆಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ನೀಡಿದ್ದು, ಚೊಕ್ಕವಾಗಿ ನಿರ್ವಹಿಸಿದ್ದೇನೆ. ಉದಾಹರಣೆಗೆ, ನಿಗಮವು ನಡೆಸಿರುವ 6 ವಸ್ತು ಪ್ರದರ್ಶನ ಆಯೋಜಿಸಲು ಕೇಂದ್ರ ಸರ್ಕಾರದಿಂದ ಹಣ ಬಂದಿದ್ದು, ಉಪಯುಕ್ತತಾ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಕೊಡಲಾಗಿದೆ. ಹಾಗೂ ಕೆಲಸವನ್ನು ಮುಗಿಸಲಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಯಾವುದೇ ನಕಾರಾತಕ ರಿಮಾರ್ಕ್ಸ್ ಇರುವುದಿಲ್ಲ. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಡಿಪಿಆರ್ 35 ಎಆರ್‌ಯು 2003, ದಿನಾಂಕ 07.05.2003 ಪ್ರಕಾರ ಈ ಎಲ್ಲಾ ಮಾಹಿತಿಗಳನ್ನು ಅಧ್ಯಕ್ಷರಿಗೆ, ಕೊಡುವ ಅಗತ್ಯ ಇರುವುದಿಲ್ಲ. ಆದರೆ ಈ ರೀತಿಯ ತಪ್ಪು ಮಾಹಿತಿಗಳನ್ನು ನೀಡಿ ತಮ್ಮ ಮೇಲಿರುವ ಆರೋಪಗಳಿಂದ ನುಣುಚಿಕೊಳ್ಳಲು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುವಂತಹ ರಾಘವೇಂದ್ರ ಶೆಟ್ಟಿಯ ಮೇಲೆ ಕ್ರಮ ತೆಗೆದುಕೊಳ್ಳಲು ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆ ಕೋರಲು ವಿನಂತಿ. 6. ರಾಘವೇಂದ್ರ ಶೆಟ್ಟಿ ತಮ್ಮ ವೈಯಕ್ತಿಕ ವ್ಯವಹಾರಗಳನ್ನು ನಿಗಮದ ಕಛೇರಿಯಲ್ಲಿ ನಡೆಸುತ್ತಾರೆ. ಅನೇಕ ಬಾರಿ ಇವರಿಗೆ ಸಾಲ ಕೊಟ್ಟವರು ಬಂದು ಇವರ ಮೇಲೆ ಕೂಗಿ ಹೋಗಿ ಕಛೇರಿಯಲ್ಲಿ ಅಶಾಂತ ವಾತಾವರಣ ಉಂಟಾಗಿರುತ್ತದೆ.

ಮೂರು ಜನ ಡ್ರೈವರ್‌ಗಳನ್ನು ನೇಮಕ ಮಾಡಿರುವುದರ ಬಗ್ಗೆ ವೃಥಾ ಆರೋಪ ಮಾಡಿರುತ್ತಾರೆ. ನಿಗಮದಲ್ಲಿ ಆರು ವಾಹನಗಳಿದ್ದು ರಾಘವೇಂದ್ರ ಶೆಟ್ಟಿ ಎರಡು ವಾಹನಕ್ಕೆ ಎರಡು ಡ್ರೈವರ್ ವ್ಯವಸ್ಥಾಪಕ ನಿರ್ದೇಶಕರಿಗೆ ಇರುವ ಎರಡು ವಾಹನಗಳಿಗೆ ಎರಡು ಡ್ರೈವರ್ ಒಂದು ನಿಗಮದ ಇತರೆ ಅಧಿಕಾರಿಗಳು ಬಳಸುವ ವಾಹನಕ್ಕೆ ಒಬ್ಬ ಡ್ರೈವ‌ ಹಾಗೂ ಸಚಿವರ ಕಛೇರಿಗೆ ಕೊಟ್ಟಿರುವ ಸನ್ನಿ ನಿಸಾನ್ ಕಾರ್‌ಗೆ ಒಬ್ಬ ಡ್ರೈವರ್ ಈ ರೀತಿ ಒಂದು ಕಾರ್‌ಗೆ ಒಬ್ಬ ಡ್ರೈವರ್‌ನ್ನು ನೀಡಲಾಗಿದೆ. ಮೇಲೆ ಹೇಳಿದಂತೆ ನನ್ನ ಬಳಿ ನಿಯಮ ಪ್ರಕಾರ ಎರಡು ವಾಹನಗಳನ್ನು ಉಪಯೋಗಿಸಲಾಗುತ್ತಿದೆ. ಒಂದು ವಾಹನವನ್ನು ಸಚಿವರ ಕಛೇರಿಗೆ ಕೊಡಲಾಗಿದೆ. ರಾಘವೇಂದ್ರ ಶೆಟ್ಟಿಗೆ ನಿಯಮ ಪ್ರಕಾರ ಅರ್ಹವಾಗಿರುವುದು ಒಂದೇ ವಾಹನವಾದರೂ ಎರಡು ವಾಹನಗಳನ್ನು ಇಟ್ಟುಕೊಂಡಿರುತ್ತಾರೆ.

ನಾನು ವಿಮಾನ ಪ್ರಯಾಣ ಮಾಡಿದಾಗ ಬಿಸಿನೆಸ್ ಕ್ಲಾಸ್ ನಿಯಮ ಪ್ರಕಾರ ಅರ್ಹವಾಗಿದ್ದರೂ ನಾನು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿರುತ್ತೇನೆ ಹಾಗೂ ಇದರಿಂದ ನಿಗಮಕ್ಕೆ ಹಣ ಉಳಿತಾಯ ಮಾಡಿರುತ್ತೇನೆ. ನನ್ನ ಪ್ರಯಾಣದ ವಿವರವೆಲ್ಲವೂ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ತಿಳಿದಿರುತ್ತದೆ. ರಾಘವೇಂದ್ರ ಶೆಟ್ಟಿಯು ಆರೋಪಿಸಿರುವ ಹಾಗೆ ಅವರಿಗೆ ತಿಳಿಸುವ ಅಗತ್ಯವಿಲ್ಲ.

ನಿಗಮದ ಮಾರಾಟ ಮಳಿಗೆಗಳು ಇಲ್ಲದಿರುವ ಸ್ಥಳಗಳಿಗೂ ಕೂಡ ರಾಘವೇಂದ್ರ ಶೆಟ್ಟಿಯು ವಿಮಾನ ಪ್ರಯಾಣ ಮಾಡಿ, ಪ್ರಯಾಣ ಭತ್ಯೆ ಕ್ಷೇಮ್ ಮಾಡಿರುತ್ತರೆ. ಉದಾಹರಣೆಗೆ, ಮುಂಬೈ, ತಿರುಪತಿ, ವಾರಣಾಸಿ, ಕೋಟೆ, ಕೊಲ್ಲಾಪುರ್ ಮುಂತಾದವು. 10. ನಾನು 2 ಹೊಸ ಇನ್ನೋವ ಕ್ರಿಸ್ಟ ಗಾಡಿಗಳನ್ನು ಖರೀದಿಸಿರುತ್ತೇನೆ ಎಂಬ ಆರೋಪ ಮಾಡಿದ್ದು, ನನ್ನ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಮಾನಂದ ನಾಯಕ್ ರವರು 4.12,2020 ರಂದು 2 ಹೊಸ ವಾಹನಗಳನ್ನು ಖರೀದಿ ಮಾಡಿರುತ್ತಾರೆ. ನಾನು OLOL.2021 ರಂದು ವ್ಯವಸ್ಥಾಪಕ ನಿರ್ದೇಶಕರು ಎಂದು ಚಾರ್ಜ್ ವಹಿಸಿಕೊಂಡಿರುತ್ತೇನೆ.

ನಾನು ಯಾವುದೇ ಹೊಸ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನ ಖರೀದಿಸಿರುವುದಿಲ್ಲ. ಒಂದು ವಾಹನ ರಾಘವೇಂದ್ರ ಶೆಟ್ಟಿಗೆ ನೀಡುವ ನಿಯಮವಿದ್ದರೂ ಎರಡು ವಾಹನಗಳನ್ನು ಅನಾಮತ್ತಾಗಿ ತಮ್ಮ ಬಳಿ ಇರಿಸಿಕೊಂಡಿರುತ್ತಾರೆ. ಒಂದು ದ್ವಿಚಕ್ರ ವಾಹನ, ಟಿವಿಎಸ್ ಅಪಾಚಿ ಯನ್ನು 2017 ರಲ್ಲಿ ಅಂದಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ಪಿ.ಶರ್ಮ ದವರು ಖರೀದಿ ಮಾಡಿದ್ದು, ಅದು ನಾನು ಬಂದಾಗಿನಿಂದಲೂ ಓಡಿಸುವ ಸ್ಥಿತಿಯಲ್ಲಿ ಇಲ್ಲ. 13. ಪ್ರಿಂಟಿಂಗ್ ಮತ್ತು ಇತರ ಎಲ್ಲಾ ಕಾರ್ಯಾದೇಶಗಳನ್ನು ಸರ್ಕಾರದ ಸಂಸ್ಥೆಯಾದ MC & A ಗೆ ಕೊಟ್ಟಿರುತ್ತೇನೆ.

2020-21 ರಲ್ಲಿ 16.88 ಕೋಟಿ ಇದ್ದ ನಿಗಮದ ವಹಿವಾಟನ್ನು 2021-22 ನೇ ಸಾಲಿನಲ್ಲಿ 7.06 ಕೋಟಿ ಹೆಚ್ಚಿನ ವಹಿವಾಟು, ಅಂದರೆ ಶೇಕಡ 41 ರಷ್ಟು ವಹಿವಾಟಿಗೆ ಕೊಂಡೊಯ್ದಿರುವುದು ಒಂದು ರೆಕಾರ್ಡ್ ಸಾಧನೆಯಾಗಿದೆ. ಕೋವಿಡ್ ಲಾಕ್‌ಡೌನ್ 2-3 ತಿಂಗಳು ಇದ್ದರೂ ಸಹ ನಿಗಮವು ಶೇಕಡ 41 ರಷ್ಟು ಅಧಿಕ ವಹಿವಾಟು ಸಾಧಿಸಿದೆ ಎಂದು ಸುದಿರ್ಘ 5 ಪುಟಗಳ, 14 ಕಾರಣಗಳ ಸ್ಪಷ್ಟೀಕರಣವನ್ನು ರೂಪಾ ಮೌದ್ಗಿಲ್ ಸಿಎಸ್​ಗೆ ಸ್ಪಷ್ಟೀಕರಣ ನೀಡಿರುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ