ಮಂಡ್ಯದಲ್ಲಿ ಹಿಂದುತ್ವಪರ ಸಂಘಟನೆ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 11, 2022 | 12:24 PM

ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಭರವಸೆ ನೀಡಿದರು. ನಿನ್ನೆಯ ಪ್ರಕರಣವು ಸಂಪೂರ್ಣವಾಗಿ ಸುಖಾಂತ್ಯವಾಗಿದೆ. ಕಾನೂನು ಬಾಹಿರವಾಗಿ ನಡೆದಿರುವ ವಿಚಾರಗಳ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು.

ಮಂಡ್ಯದಲ್ಲಿ ಹಿಂದುತ್ವಪರ ಸಂಘಟನೆ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಬೆಂಗಳೂರು: ಮಂಡ್ಯದಲ್ಲಿ ಹಿಂದುತ್ವ ಪರ ಸಂಘಟನೆಗಳ (Pro Hindutva Organisations) ಕಾರ್ಯಕರ್ತರನ್ನು ಗುರಿಯಾಗಿಸಿ ಪೊಲೀಸರು ದಾಳಿ ನಡೆಸಿರುವ ಕುರಿತು ಕೇಳಿ ಬಂದಿರುವ ಆರೋಪಗಳ ಬಗ್ಗೆ ನಗರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಪ್ರತಿಕ್ರಿಯಿಸಿದರು. ಶ್ರೀರಂಗಪಟ್ಟಣದಲ್ಲಿ ನಿನ್ನೆ ರಾತ್ರಿ ದಿಢೀರ್ ಪ್ರತಿಭಟನೆ ನಡೆದ ಬಗ್ಗೆ ಮಾತನಾಡಿದ ಅವರು, ಹೀಗೆ ಟಾರ್ಗೆಟ್ ಮಾಡುವ ಪ್ರಶ್ನೆ ಇಲ್ಲ. ಆದರೂ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು. ಹನುಮ ಮಾಲೆ ಹಾಕಿದರೆ ಹಿಂದೂಗಳ ಕತ್ತು ಕತ್ತರಿಸ್ತಾರೆ. 53 ಮುಸ್ಲಿಂ ರಾಷ್ಟ್ರಗಳ ಫಂಡ್ ಬರುತ್ತಿದೆ ಎಂದೆಲ್ಲಾ ಬೆದರಿಸಲಾಗಿದೆ ಎಂದು ಸಂಘಟನೆಗಳು ದೂರಿದ್ದವು. ಈ ಸಂಬಂಧ ಮಂಡ್ಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಜೊತೆಗೆ ಕಾರ್ಯಕರ್ತರು ವಾಗ್ವಾದ ನಡೆಸಿದ್ದರು. ಈ ಬಗ್ಗೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಭರವಸೆ ನೀಡಿದರು. ನಿನ್ನೆಯ ಪ್ರಕರಣವು ಸಂಪೂರ್ಣವಾಗಿ ಸುಖಾಂತ್ಯವಾಗಿದೆ. ಕಾನೂನು ಬಾಹಿರವಾಗಿ ನಡೆದಿರುವ ವಿಚಾರಗಳ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು.

ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ಅಂತ್ಯ

ಶ್ರೀರಂಗಪಟ್ಟಣದಲ್ಲಿ ಪೊಲೀಸರು ಹನುಮ ಭಕ್ತನನ್ನು ವಶಕ್ಕೆ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮಿಯಾ ಮಸೀದಿ ಬಳಿ ಹಿಂದುತ್ವಪರ ಸಂಘಟನೆ ಕಾರ್ಯಕರ್ತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಅಂತ್ಯಗೊಂಡಿದೆ. ಜಾಮಿಯಾ ಮಸೀದಿ ಸುತ್ತಮುತ್ತ ಪೊಲೀಸ್ ಬಂದೋಬಸ್ತ್​ ಹಾಕಲಾಗಿದೆ. ಜಾಮಿಯಾ ಮಸೀದಿ ಬಳಿ 1 ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಗೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಮಸೀದಿ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ.

ನಡೆದಿದ್ದೇನು?

ಡಿಸೆಂಬರ್ 4ರಂದು ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆದಿತ್ತು. ಕೆಳಗೆ ಬಿದ್ದಿದ್ದ ಬಾಳೆಗೊನೆಯನ್ನು ಕಾರ್ತಿಕ್ ಎಂಬಾತ ಪಕ್ಕಕ್ಕೆ ಎಸೆದಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಮನೆಗೆ ನುಗ್ಗಿ ಎಳೆದು ತಂದಿದ್ದಾರೆ. ಜೊತೆಗೆ 53 ಇಸ್ಲಾಂ ರಾಷ್ಟ್ರಗಳಿದ್ದು ಮುಂದಿನ ಬಾರಿ ಮಾಲೆ ಹಾಕಿದ್ರೆ ಕತ್ತು ಕೊಯ್ತಾರೆ ಎಂದು ಕೆಲ ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಈ ಬೆಳವಣಿಗೆಯಿಂದ ರೊಚ್ಚಿಗೆದ್ದ ಕೆಲ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹಸಿರು ಧ್ವಜ ತೆಗೆದು ಕೇಸರಿ ಬಾವುಟ ನೆಟ್ಟಿದ್ದ ಹಿಂದೂ ಕಾರ್ಯಕರ್ತ ಅರೆಸ್ಟ್: ಶ್ರೀರಂಗಪಟ್ಟಣದಲ್ಲಿ ಬಿಗುವಿನ ವಾತಾವರಣ

ಬೆಂಗಳೂರಿನ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ